Ramya : ರಮ್ಯಾ ಅವರ ಅದೊಂದು ಮಾತಿಗೆ ಅಪ್ಪು ಅಂದು ಮಾಡಿದ್ದೇನು ನೋಡಿ..! ಮಿಸ್ ಯೂ ಅಪ್ಪು..!

By Infoflick Correspondent

Updated:Thursday, September 1, 2022, 19:53[IST]

Ramya : ರಮ್ಯಾ ಅವರ ಅದೊಂದು ಮಾತಿಗೆ ಅಪ್ಪು ಅಂದು ಮಾಡಿದ್ದೇನು ನೋಡಿ..! ಮಿಸ್ ಯೂ ಅಪ್ಪು..!

ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯಾಗಿ ತಿಂಗಳುಗಳೇ ಕಳೆದು ಹೋಗಿ ಇನ್ನೇನು ಒಂದು ವರ್ಷ ಆಗಲಿದೆ. ಆದರೆ ಅವರು ಕೇವಲ ದೈಹಿಕವಾಗಿ ಮಾತ್ರ ನಮ್ಮಿಂದ ದೂರ ಆಗಿದ್ದಾರೆ. ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಎಂದೆಂದಿಗೂ ಎನ್ನುವಂತೆ ಅವರೇ ಒಬ್ಬರೇ ರಾಜಕುಮಾರ ಆಗಿ ದೇವರ ಸ್ಥಾನದಲ್ಲಿ ಕುಳಿತಿದ್ದಾರೆ ನಮ್ಮ ಅಪ್ಪು. ಹೌದು ಪ್ರೀತಿಯಿಂದ ಅವರನ್ನು ಅಪ್ಪು ಎಂದು ಕರೆಯುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ..ಜೊತೆಗೆ ಸಿನಿಮಾದ ಆಚೆಗೆ ಅವರು ಕೈಗೊಂಡ ಕೆಲವು ಕ್ಷೇತ್ರದ ಕೆಲಸಗಳು ಎಂದಿಗೂ ಕೂಡ ಮರೆಯಲಾದಂತವವು. ಹಾಗೆ ಅವರ ದಾರಿಯನ್ನೇ ಇನ್ನಷ್ಟು ಈಗಿನ ಯುವಜನತೆ ಕೈಗೊಳ್ಳಲಿ ಎಂಬುದೇ ಅವರ ಆಸೆಯೂ ಆಗಿತ್ತು.  

ಅದರಂತೆ ಅವರು ಬದುಕಿ ಬಾಳೇ ದೇವರಾಗಿದ್ದಾರೆ..ಹೌದು ಅವರ ಒಂದೊಂದು ವಿಡಿಯೋಗಳು ಈಗಲೂ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತವೆ. ಪುನೀತ್ ಅವರ ಆ ಮಾತಿನ ಶೈಲಿ, ಅವರ ನಗುಮುಖದ ನೋಟ, ಯಾವುದನ್ನು ಕೂಡ ನಾವು ಮರೆಯಲಿಕ್ಕೆ ಆಗುವುದಿಲ್ಲ. ಅಷ್ಟರಮಟ್ಟಿಗೆ ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಆ ವಿಚಾರ ನಿಮಗೂ ಗೊತ್ತು. ಇಷ್ಟೆಲ್ಲಾ ಸಾಧನೆ ಮಾಡಿದ ನಟ ಪುನೀತ್ ರಾಜಕುಮಾರ್ ಅವರು ದೇವರ ಸ್ಥಾನದಲ್ಲಿಯೇ ಇಂದು ಕುಳಿತಿದ್ದಾರೆ ಎನ್ನಬಹುದು. ನಟ ಪುನೀತ್ ಅವರು ಸಿನಿಮಾರಂಗದ ಪ್ರತಿಯೊಬ್ಬ ಕಲಾವಿದರ ಜೊತೆ ಹೆಚ್ಚಾದ ಒಡನಾಟ ಹಾಗೆ ಪ್ರೀತಿ ಇಟ್ಟುಕೊಂಡವಂತವರು. ಎಲ್ಲರನ್ನು ಸಹ ಹೆಚ್ಚು ಪ್ರೀತಿಯಿಂದ ಮಾತನಾಡಿಸುತ್ತಿದ್ದಂತ ಕಲಾವಿದ. ಒಮ್ಮೆ ರಮ್ಯಾ ಅವರು ಪುನೀತ್ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಆಗ ಇವರಿಬ್ಬರ ಮಾತಿನ ನಡುವಿನ ಸ್ನೇಹ, ಪ್ರೀತಿ ನಿಜಕ್ಕೂ ಇಂದಿಗೂ ಕಣ್ಣು ಕಟ್ಟುವಂತಿದೆ. ರಮ್ಯಾ ಅವರು ಹೇಳಿದ ಹಾಗೆ ಜಗ್ಗೇಶ್ ಮತ್ತು ಶಿವಣ್ಣ ಅವರ ಹಾಗೇನೇ ಮಿಮಿಕ್ರಿ ಮಾಡಿದ್ದ ಅಪ್ಪು ನಂತರ ರಮ್ಯಾ ಅವರ ಹಾಗೆ ಮಾತನಾಡಿ, ಅವರ ಕಾಲೆಳೆದಿದ್ದರು. ಆ ವಿಡಿಯೋ ಈಗಲೂ ಕೂಡ ಹೆಚ್ಚು ಅಚ್ಚುಮೆಚ್ಚು ಅಷ್ಟೇ ವೈರಲಾಗುತ್ತದೆ. ನಿಜಕ್ಕೂ ಅಪ್ಪು ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮಗೂ ಹಾಗೆನಿಸಿದರೆ ಈ ವಿಡಿಯೋ ಪೂರ್ತಿ ನೋಡಿ, ಮಿಸ್ ಯು ಅಪ್ಪು ಎಂದು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...