ಸೆಟ್ ಬಾಯ್ ಲೇಟಾಗಿ ಬಂದ ಅಂಥ ಪುನೀತ್ ಅವರು ಏನು ಮಾಡಿದ್ದರು ಗೊತ್ತಾ..? ನಿಜಕ್ಕೂ ಹ್ಯಾಟ್ಸಾಫ್

By Infoflick Correspondent

Updated:Friday, January 14, 2022, 11:33[IST]

ಸೆಟ್ ಬಾಯ್ ಲೇಟಾಗಿ ಬಂದ ಅಂಥ ಪುನೀತ್ ಅವರು ಏನು ಮಾಡಿದ್ದರು ಗೊತ್ತಾ..? ನಿಜಕ್ಕೂ ಹ್ಯಾಟ್ಸಾಫ್

ಪುನೀತ್ ಅವರ ಸಾಮಾಜಿಕ ಕಾರ್ಯಗಳು ಹೆಚ್ಚು ಸಿನಿಮಾ ಕಲಾವಿದರಿಂದಲೇ ಹೊರಗಡೆ ಬರುತ್ತಿವೆ. ಅವರ ಸುತ್ತ ಮುತ್ತ ನಡೆದ ಕೆಲವು ವಿಚಾರಗಳನ್ನ ಮಾಧ್ಯಮದ ಮುಂದೆ ಹೇಳುತ್ತಾ ನಟ ಪುನೀತ್ ಅವರು ಮಾಡಿದ ಸಹಾಯವನ್ನು ನೆನೆಯುತ್ತಿದ್ದಾರೆ. ಜೊತೆಗೆ ಸಹಾಯ ಮಾಡುವ ಮನಸ್ಥಿತಿ ಎಲ್ಲರಲ್ಲಿಯೂ ಇರುವುದಿಲ್ಲ, ಅದು ಅಪ್ಪು ಅವರಿಗೆ ಹೆಚ್ಚಾಗಿಯೇ ಇತ್ತು, ಅದಕ್ಕಾಗಿಯೇ ಇಂದು ಅವರನ್ನು ದೇವರಂತೆ ಅಭಿಮಾನಿಗಳು ಅವರಿಲ್ಲದಿದ್ದರೂ ಪೂಜೆ ಸಲ್ಲಿಸುತ್ತಿದ್ದಾರೆ. ಹಾಗೆ ಮನಸ್ಸಿನಲ್ಲಿ ಇಟ್ಟುಕೊಂಡು ಅವರ ರೀತಿ ಜೀವನ ಮಾಡಲು ಮುಂದಾಗಿದ್ದು ಅಪ್ಪು ಅವರನ್ನು ಸ್ಫೂರ್ತಿದಾಯಕವಾಗಿ ತೆಗೆದುಕೊಂಡಿದ್ದಾರೆ.

ಹೌದು ಇತ್ತೀಚಿಗಷ್ಟೇ ಕಾಕ್ರೋಚ್ ಸುಧೀ ಪುನೀತ್ ಅವರ ಬಗ್ಗೆ ಒಂದು ವಿಚಾರವನ್ನು ತೆರೆದಿಟ್ಟಿದ್ದರು. ಅದೇ ರೀತಿ ಇದೀಗ ಮತ್ತೊಂದು ತುಂಬಾ ಸರಳವಾಗಿ ಅಪ್ಪು ಅವರ ಬಗೆಗಿನ ಒಂದು ಸಹಾಯ ಮಾಡಿದ ಬಗ್ಗೆ ಹೇಳಿದ್ದಾರೆ. ಟಗರು ಖ್ಯಾತಿಯ ಕಾಕ್ರೋಚ್ ಸುದೀ ಅವರು ಒಂದು ಬಾರಿ ಸಿನಿಮಾ ಸೆಟ್ಟಿನಲ್ಲಿ ನಟ ಪುನೀತ್ ಅವರ ಜೊತೆ ನಟನೆ ಮಾಡುತ್ತಿದ್ದರಂತೆ. ಆಗ ನಡೆದ ಒಂದು ಘಟನೆ ಬಗ್ಗೆ ಇದೀಗ ವಿವರಿಸಿದ್ದಾರೆ. ಆ ಸೆಟ್ ಯಾವುದು ಎಂದು ಹೇಳುವುದಿಲ್ಲ, ಹಾಗೆ ಸಹಾಯ ಪಡೆದವರು ಸಹ ಯಾರೆಂದು ನಾನು ಹೇಳುವುದಿಲ್ಲ, ಸೆಟ್ ಬಾಯ್  ಹುಡುಗನೊಬ್ಬ ಅಂದು ಸಿನಿಮಾ ಶೂಟಿಂಗ್ ಸ್ಥಳಕ್ಕೆ ಬರುವುದು ತಡವಾಗಿತ್ತು. 

ನಿರ್ದೇಶಕರು ಕಾದು ಕಾದು ಬಳಿಕ, ಹುಡುಗ ಬಂದ ಮೇಲೆ ಆ ಹುಡುಗನ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಅದನ್ನು ಗಮನಿಸಿದ ಅಪ್ಪು ಅವರು, ಯಾಕೆ ಈ ರೀತಿ ಲೇಟಾಗಿ ಬರುತ್ತೀರಾ, ನಿಮ್ಮೊಬ್ಬರಿಂದ ಇಡೀ ಸಿನಿಮಾ ಶೂಟಿಂಗ್ ಗೆ ತೊಂದರೆ ಆಗಿದೆ ನೋಡಿ ಎಂಬುದಾಗಿ ಕೇಳಿದ್ದರಂತೆ. ಬಳಿಕ ಆ ಸೆಟ್ ಬಾಯ್ ಹುಡುಗ, ಇಲ್ಲ ಅಣ್ಣ ನಾ ಮೂರುವರೆಗೆ ಎದ್ದು ಬಂದೆ, ಆದರೆ ಮೂರು ಬಸ್ಸುಗಳನ್ನು ಬದಲಿಸಿ ಇಲ್ಲಿಗೆ ಬರಬೇಕು, ತುಂಬಾ ದೂರ ಇದೆ. ಸೀದಾ ಬಸ್ಸಿನಿಂದ ಇಳಿದು ಬರುವಾಗ ಆಟೋ ಬೇಗ ಸಿಗಲಿಲ್ಲ, ಹಾಗಾಗಿ ಲೇಟಾಯಿತು ಎಂದನಂತೆ. ಬಳಿಕ ಪುನೀತ್ ಅವರು ಸಾಯಂಕಾಲದ ಹೊತ್ತು ಶೂಟಿಂಗ್ ಮುಗಿಯುತ್ತಿದ್ದಂತೆ. ಅವರ ಮನೆಯಲ್ಲಿ ಇದ್ದ ಆರ್ ಎಕ್ಸ್ 35 ಬೈಕನ್ನು ಕೊಟ್ಟು, ತಗೋ ನಿನ್ನ ಕಷ್ಟ ನನಗೆ ಅರ್ಥವಾಗುತ್ತದೆ. ಇದಕ್ಕೆ ಪೆಟ್ರೋಲ್ ಹಾಕಿಸಲು ನಿನಗೆ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಿಂಗಳ ಪೂರ್ತಿ ಪೆಟ್ರೋಲ್ ಖರ್ಚನ್ನು ಕೂಡ ನಾನೇ ಕೊಡುತ್ತೇನೆ ಎಂದು ಅಪ್ಪು ಅವರು ಹೇಳಿದ್ರಂತೆ.

ಇದು ಸತ್ಯ ಎಂದು ಕಾಕ್ರೋಚ್ ಸುದೀ ಅವರು ಹೇಳಿದ್ದು, ಅಪ್ಪು ಮಾಡಿದ್ದ ಸಹಾಯ ನೆನೆದರು. ಅಂದು ಅಲ್ಲಿ ನೆರೆದಿದ್ದವರಿಗೆ ಎಲ್ಲರಿಗೂ ಈ ವಿಷಯ ಗೊತ್ತು ಎಂಬುದಾಗಿ ಪುನೀತ್ ಅವರು ಸೆಟ್ ಬಾಯ್ ಹುಡುಗನಿಗೆ ಮಾಡಿದ ಸಹಾಯದ ವಿಷಯವನ್ನು ಬಿಚ್ಚಿಟ್ಟಿದ್ದಾರೆ....( video credit : cinema hava official )