ಕೋಟ್ಯಾಧಿಪತಿ ಷೋನಲ್ಲಿ ಅಪ್ಪು ಮಾಡ್ತಿದ್ದ ಆ ಕೆಲಸ ನೆನೆಸಿ ಭಾವಕರಾದ ಅಪ್ಪು ಮ್ಯಾನೇಜರ್..! ಈಗ ಬಯಲು

Updated: Thursday, November 25, 2021, 15:44 [IST]

ಕೋಟ್ಯಾಧಿಪತಿ ಷೋನಲ್ಲಿ ಅಪ್ಪು ಮಾಡ್ತಿದ್ದ ಆ ಕೆಲಸ ನೆನೆಸಿ ಭಾವಕರಾದ ಅಪ್ಪು ಮ್ಯಾನೇಜರ್..! ಈಗ ಬಯಲು

ಹೌದು ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ಈ ಮುಂಚೆಯಿಂದಲೂ ಪ್ರಸಾರ ಆಗುತ್ತಲೇ ಬರುತ್ತಿವೆ. ಕೆಲವೊಂದಿಷ್ಟು ಮನರಂಜನೆ ನೀಡುವ ಕಾರ್ಯಕ್ರಮಗಳು ಮೂಡಿಬಂದರೆ, ಇನ್ನು ಕೆಲವುಗಳು ಜನರಿಗೆ ಒಳ್ಳೆಯ ಉದ್ದೇಶದಿಂದ ಅವರ ಕಷ್ಟ ಪರಿವಾರ ಆಗುವಂತಹ ಕೆಲ ಕಾರ್ಯಕ್ರಮಗಳು ಕೂಡ ಪ್ರಸಾರ ಆಗಿದ್ದವು. ಹೌದು ಪುನೀತ್ ಅವರು ನಡೆಸಿಕೊಡುತ್ತಿದ್ದ ಆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಸಾಕಷ್ಟು ಜನರಿಗೆ ಚಿರಪರಿಚಿತ. ಪುನೀತ್ ಅವರು ಈ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಅವರದೇ ಆದ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡು ಒಳ್ಳೆ ನಗು ಮುಖದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ಕನ್ನಡ ಕೋಟ್ಯಾಧಿಪತಿಗೆ ಸಾಕಷ್ಟು ಜನರು ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ, ಯಾವುದಾದರೂ ಒಂದು ಸಮಸ್ಯೆಯಿಂದ ಮುಕ್ತಿ ಪಡೆಯುವುದಕ್ಕೆ, ಹಾಗೆ ಇನ್ಯಾವುದೋ ಒಂದು ಒಳ್ಳೆಯ ಕಾರ್ಯಕ್ಕೆ ಅಥವಾ ಕಷ್ಟಕ್ಕೆ ದುಡ್ಡು ಬೇಕೇ ಬೇಕು ಎಂಬ ಸಂದರ್ಭಕ್ಕೆ ಆಟವನ್ನು ಆಡಲು ಬರುತ್ತಿದ್ದರೋ ಗೊತ್ತಿಲ್ಲ. ಇನ್ನೂ ಕೆಲವರು ಅವರ ಜಾಣತನ ತೋರಿ ಲಕ್ಷ ಲಕ್ಷ ಹಣ ಗೆಲ್ಲಲು ಬರುತ್ತಿದ್ದರು. ಇದೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ಕೆಲವೊಂದು ಬಾರಿ ಅವರ ಸಮಯವಲ್ಲದ ಹೊತ್ತಿನಲ್ಲಿ, ಸಮಯ ಸಾತ್ ನೀಡದೇ ಇರುವ ಹೊತ್ತಿನಲ್ಲಿ, ಅಥವಾ ಬ್ಯಾಡ್ ಲಕ್ ಎನ್ನುವ ಒಂದು ಅಂಶದಲ್ಲಿ ಈ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹಣ ಗೆಲ್ಲಲು ಆಗುತ್ತಿರಲಿಲ್ಲ.

ಅವರು ತುಂಬಾ ನಿರಾಸೆಯಿಂದ ಈ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಹೊರ ಹೋಗುತ್ತಿದ್ದರು. ಆಗ ನಟ ಪುನೀತ್ ಇದ್ದಕ್ಕಿದ್ದಂತೆ ಚೆಕ್ ಮೂಲಕ ಹಣ ನೀಡಲು  ಮುಂದಾಗುತ್ತಿದ್ದರಂತೆ . ಹೌದು ಪುನೀತ್ ಅವರು ಚೆಕ್ ಬರೆಯುತ್ತಿದ್ದರು ಎನ್ನಲಾಗಿ ಅಪ್ಪು ಮಾಜಿ ಮ್ಯಾನೇಜರ್ ವಜ್ರೇಶ್ವರ ಕುಮಾರ್ ಅವರು ಮಾಧ್ಯಮದ ಮೂಲಕ ಈ ವಿಷಯ ಹಂಚಿಕೊಂಡಿದ್ದಾರೆ. ಕೋಟ್ಯಾಧಿಪತಿಯಲ್ಲಿ ಒಂದು ವೇಳೆ ಹಣ ಗೆಲ್ಲಲಿಕ್ಕೆ ಸಾಧ್ಯವಾಗದೇ ಇದ್ದಲ್ಲಿ ಅಂಥಹವರಿಗೆ ನಮ್ಮ ಪ್ರೀತಿಯ ಪುನೀತ್ ಅವರು ಸಹಾಯ ನೀಡುತ್ತಿದ್ದರು ಎಂದು ಮಾಧ್ಯಮ ಮೂಲಕ ಕೆಲವು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ, ಮತ್ತು ಪುನೀತ್ ಅದೆಷ್ಟು ಸರಳತನ ಅದೆಂತಹ ಮನಸ್ಥಿತಿ ಹೊಂದಿದ್ದರು ಎಂಬುದಾಗಿ ನಿಮಗೆ ಅರ್ಥ ಆಗುತ್ತದೆ, ಧನ್ಯವಾದಗಳು..

(video credit  :  tv 9 kannada )