Yash : ಕೆಜಿಎಫ್ 2 ಬಳಿಕ ಯಶ್ ಅವರ ತಾಯಿಗೂ ಸಿಕ್ಕಿಲ್ಲವಂತೆ..! ಯಶ್ ಬಗ್ಗೆ ಆಡಿದ ಹೆಮ್ಮೆಯ ಮಾತು ಕೇಳಿ..!
Updated:Tuesday, May 10, 2022, 11:14[IST]

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಭಾಗ-2 ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ ಭಾಗ-2 ಈಗಾಗಲೇ ಬಿಡುಗಡೆಯಾದ ದಿನದಿಂದ ಕೇವಲ 14 ದಿನದಲ್ಲೆ ಸಾವಿರ ಕೋಟಿ ಕಲೆಕ್ಷನ್ ಮಾಡಿ ದಾಖಲೆಯನ್ನು ಮಾಡಿದೆ. ಹಾಗೆ ಇನ್ನೂ ಕೂಡ ಮುನ್ನುಗ್ಗುತ್ತಲೇ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹೌದು ಇತ್ತೀಚೆಗೆ ಎಲ್ಲರಿಗೂ ಗೊತ್ತಿರುವಂತೆ ನಟ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಬಿಡುಗಡೆಯಾದ ಮೇಲೆ ಯಾರ ಕೈಗೂ ಸಿಕ್ಕಿಲ್ಲ. ಸಿನಿಮಾ ಬಿಡುಗಡೆ ಮುನ್ನ ಪ್ರಮೋಷನ್ ಗಾಗಿ ಹೆಚ್ಚು ಓಡಾಟ ನಡೆಸಿದ್ದ ಯಶ್ ಗೋವಾದಲ್ಲಿ ಹೆಂಡತಿ ಮಕ್ಕಳೊಡನೆ ಬೀಡುಬಿಟ್ಟಿದ್ದರು.
ತದನಂತರ ಚಿತ್ರತಂಡದ ಜೊತೆ ಸಿನಿಮಾ ಸಕ್ಸಸ್ ಗೆ ಕೇಕ್ ಕತ್ತರಿಸಿ ಎಂಜಾಯ್ ಮಾಡಿದರು. ಹೌದು ಈ ವಿಚಾರವಾಗಿ ಇದೀಗ ಯಶ್ ಬಗ್ಗೆ ಅವರ ತಾಯಿ ಪುಷ್ಪಾ ಅವರು ಕೂಡ ಮತ್ತೊಂದಿಷ್ಟು ವಿಚಾರಗಳನ್ನು ಮಾಧ್ಯಮದ ಜೊತೆ ನಿನ್ನೆ ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ವಿಶ್ವ ತಾಯಂದಿರ ದಿನ ಆಗಿದ್ದು ಮಾಧ್ಯಮದ ಜೊತೆ ಪುಷ್ಪ ಅವರು ಖುಷಿಯಿಂದ ಕೆಲವೊಂದಿಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಪುಷ್ಪ ಅವರು ಹೇಳುವ ಹಾಗೆ ಕೆಜಿಎಫ್ ಸಿನಿಮಾ ದೊಡ್ಡದಾಗಿ ಯಶಸ್ವಿಯಾಗಿದೆ. ನಾವು ಎಂಜಾಯ್ ಮಾಡುವುದಿಲ್ಲ. ಬದಲಿಗೆ ಖುಷಿಯಾಗಿರುತ್ತೇವೆ. ನಾವು ತುಂಬಾ ಕಷ್ಟ ಪಟ್ಟ ದಿನಗಳನ್ನು ನೋಡಿ ಇಂದು ಇಷ್ಟು ಖುಷಿ ಕ್ಷಣಗಳು ನಮ್ಮ ಜೀವನದಲ್ಲಿ ಬಂದಿವೆ.
ಆ ದೇವರಲ್ಲಿ ನಾನು ಕೂಡ ಅದೇ ಕೇಳಿದ್ದೆ. ಅದೇ ರೀತಿ ನನ್ನ ಮಗ ಯಶ್ ಬೆಳೆದ. ನನಗೆ ಮೊದಲಿದ್ದ ಯಶ್, ಈಗ ಇರುವ ಯಶ್, ಮುಂದೆ ಇರುವ ಯಶ್ ಎಂದಿಗೂ ಸಹ ಹಾಗೆಯೇ ಎಂದರು. ಇದೀಗ ಬೆಳೆದಿದ್ದಾನೆ ಅವನು ಎಂದು ನಾನು ಹೇಳುವುದಿಲ್ಲ. ಅವನು ಇನ್ನು ಮಾಡುವುದು ತುಂಬಾ ಇದೆ. ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಇನ್ನ ದೊಡ್ಡ ಮಟ್ಟಕ್ಕೆ ಅವನು ಬೆಳೆಯಬೇಕು ಎಂದರು. ಹೌದು ತಾಯಿ ಪುಷ್ಪ ಅವರನ್ನ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆದ ಬಳಿಕ ಯಶ್ ಇನ್ನೂ ಮೀಟ್ ಮಾಡಿಲ್ಲವಂತೆ.