ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಲು ಕಾರಣವೇನು ಗೊತ್ತಾ..?

By Infoflick Correspondent

Updated:Thursday, April 21, 2022, 18:18[IST]

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಲು ಕಾರಣವೇನು ಗೊತ್ತಾ..?

ಕನ್ನಡದ ಕಿರುತೆರೆ ಮೂಲಕ ಹಲವು ಹೊಸ ಹೊಸ ಪ್ರತಿಭೆಗಳು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗ ಜೀ ಕನ್ನಡ ವಾಹಿನಿಯ ಟಾಪ್ ಒನ್ ಧಾರಾವಾಹಿ. ಆರೂರು ಜಗದೀಶ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಉಮಾಶ್ರೀ ಜೊತೆಗೆ ಖ್ಯಾತ ನಟರಾದ ಮಂಜು ಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ ಸಾರಿಕಾ ರಾಜ್, ರೇಣುಕಾ, ಗುರು ಹೆಗಡೆ, ಸುನಂದಾ ಹೊಸಪೇಟೆ ಮತ್ತು ಇತರ ಉದಯೋನ್ಮುಖ ನಟರಾದ ಸಂಜನಾ, ಅಕ್ಷರ, ಶಿಲ್ಪ, ನಿಶಾ, ಧನುಷ್, ಜೊತೆಗೆ ಸಂತೋಷ್ ಮತ್ತು ಗಜೇಂದ್ರ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರು ತಾರಾಗಣದಲ್ಲಿದ್ದಾರೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಧಾರಾವಾಹಿಗೆ ಜೆಎಸ್ ಪ್ರೊಡಕ್ಷನ್ಸ್ ನಿರ್ಮಾಣವಿದ್ದು, ಸಹ-ನಿರ್ಮಾಪಕರು ಪ್ರದೀಪ್ ಅಜ್ರಿ ಮತ್ತು ಪರೀಕ್ಷಿತ್ ಎಂಎಸ್, ಕಥೆಯನ್ನು ಜೀ ಕನ್ನಡ ತಂಡ ಅಭಿವೃದ್ಧಿಪಡಿಸುತ್ತಿದೆ. ಚಿತ್ರಕಥೆ ಸಂಭಾಷಣೆಯನ್ನು ಸತ್ಯಕಿ ಮಾಡಿದ್ದಾರೆ. ಧಾರಾವಾಹಿಯ ಶೀರ್ಷಿಕೆ ಗೀತೆಯ ಸಾಹಿತ್ಯವನ್ನು ಹರ್ಷಪ್ರಿಯ ಬರೆದಿದ್ದಾರೆ, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ ಮತ್ತು ಪಂಚಮ ಜೀವ ಹಾಡಿದ್ದಾರೆ. ಇನ್ನು ಈ ಧಾರಾವಾಹಿ ಇದೀಗ 100 ಸಂಚಿಕೆಗಳನ್ನು ಪೂರೈಸಿದೆ. ಆದರೆ ಇಷ್ಟು ದಿನ ಪಾಸಿಟಿವ್ ಕಮೆಂಟ್ ಪಡೆಯುತ್ತಿದ್ದ ಧಾರಾವಾಹಿ ಕಳೆದೆರಡು ದಿನಗಳ ಕಾಲ ನೆಗೆಟಿವ್ ಕಮೆಂಟ್ ಅನ್ನೂ ಪಡೆದಿದೆ. 

ಇದಕ್ಕೆ ಕಾರಣ ಕೂಡ ಇದೆ. ಸ್ನೇಹಾ ಐಎಎಸ್ ಓದುವ ಕನಸು ಕಂಡಿದ್ದು, ಈಗ ಪ್ರಿಲಿಮಿನರಿ ಎಕ್ಸಾಂನಲ್ಲಿ ಒಳ್ಳೆಯ ಮಾರ್ಕಸ್ ತೆಗೆದುಕೊಂಡಿದ್ದಾಳೆ. ಇದಕ್ಕಾಗಿ ಕಾಲೇಜಿನಲ್ಲಿ ಸ್ನೇಹಾಗೆ ಸನ್ಮಾನ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಹಾಗಾಗಿ ಸ್ನೇಹಾ ಬಂದಿದ್ದರು. ಸಹನಾ ಹಾಗೂ ಪುಟ್ಟಕ್ಕ ತಡವಾಗಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಆಗ ಅಲ್ಲಿದ್ದ ವಾಚ್ ಮನ್ ಒಳಗೆ ಹೋಗಲು ಬಿಟ್ಟಿಲ್ಲ. ಪುಟ್ಟಕ್ಕನನ್ನು ತಳ್ಳಿದಾಗ ಬೀಳುತ್ತಾಳೆ. ಆಗ ಸಹನಾ ಬಂದು ಕರೆದುಕೊಂಡು ಹೋಗುತ್ತಾಳೆ. ಈ ಸೀನ್ ಸಂಪೂರ್ಣವಾಗಿ ಕಾಪಿ ಪೇಸ್ಟ್ ಮಾಡಿರುವುದು. ಯಜಮಾನ ಸಿನಿಮಾದಲ್ಲಿ ಇದೇ ಸೀನ್ ಇದೆ. ಅದನ್ನೇ ಈ ಧಾರಾವಾಹಿಯಲ್ಲಿ ಕಾಪಿ ಮಾಡಲಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.