Rachita Ram : ರಚಿತಾ ರಾಮ್ ಮತ್ತೊಂದು ಸಕತ್ ನೃತ್ಯ ನೋಡಿ ಬೆರಗಾದ ನೆಟ್ಟಿಗರು..! ಇಲ್ಲಿದೆ ವೈರಲ್ ದೃಶ್ಯ

By Infoflick Correspondent

Updated:Wednesday, August 31, 2022, 21:23[IST]

Rachita Ram : ರಚಿತಾ ರಾಮ್ ಮತ್ತೊಂದು ಸಕತ್ ನೃತ್ಯ ನೋಡಿ ಬೆರಗಾದ ನೆಟ್ಟಿಗರು..! ಇಲ್ಲಿದೆ ವೈರಲ್ ದೃಶ್ಯ

ನಟಿ ರಚಿತಾ ರಾಮ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ನಮ್ಮ ಕನ್ನಡ ಸಿನಿಮಾರಂಗದ ಖ್ಯಾತ ನಟಿಯರ ಪಟ್ಟಿಯಲ್ಲಿ ಇವರು ಸಹ ಇದ್ದಾರೆ. ಹಾಗೆ ಹೆಚ್ಚು ಬೇಡಿಕೆಯ ನಟಿಯಾಗಿಯೂ ಕೂಡ ಹೊಮ್ಮಿದ್ದಾರೆ ಎನ್ನಬಹುದು. ಈ ಸಿನಿರಂಗದಲ್ಲಿ ಅವಕಾಶಗಳ ಗಿಟ್ಟಿಸಿಕೊಳ್ಳುತ್ತಿರುವ ನಟಿ ರಚಿತಾ ರಾಮ್ ಅವರು ಇತ್ತೀಚಿಗೆ ಬಹುತೇಕ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಂಡು ಸೈ ಎನಿಸಿಕೊಂಡಿದ್ದಾರೆ. ಹಾಗೆ ರಚಿತಾ ರಾಮ್ ಅವರು ಅಭಿನಯ ಮಾಡಿದ ಎಲ್ಲಾ ಸಿನಿಮಾ ಬಹುತೇಕ ಹಿಟ್ ಆಗಿದೆ ಎಂದು ಹೇಳಬಹುದು. ರಚಿತಾ ರಾಮ್ ಅವರು ಚಂದುಳ್ಳಿ ಚೆಲುವೆ, ಗುಳಿಕೆನ್ನೆ ಬೆಡಗಿ ನೋಡಲು ತುಂಬಾ ಸುಂದರವಾದ ನಟಿ, ಹಾಗೆ ಅವರ ಅಭಿಮಾನಿಗಳಿಗಾಗಿ ಇದೀಗ ಹೆಚ್ಚು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅವರಿಗೆ ಹತ್ತಿರ ಇರುವುದು ಸಹ ಖುಷಿ ವಿಚಾರ ಅದು ನಿಮಗೂ ಗೊತ್ತು.   

ಅಂದಹಾಗೆ ಕೇವಲ ಬೆಳ್ಳಿತೆರೆಯ ಮೇಲೆ ಸಕ್ರಿಯರಾಗಿರದ ನಟಿ ರಚ್ಚು ಕಿರುತೆರೆ ಪ್ರೇಮಿಗಳಿಗೂ ಕೂಡ ಹತ್ತಿರವಾಗಿದ್ದಾರೆ ಅದು ಚಿಕ್ಕ ಮಕ್ಕಳ ಸಕತ್ ಅಭಿನಯ ಷೋ ಮೂಲಕ. ಹೌದು ಪುಟ್ಟ ಪುಟ್ಟ ಮಕ್ಕಳ ಅಭಿನಯ ನೋಡುತ್ತಾ ಅವರ ಕೀಟಲೇ ನಟನೆ ನೋಡುತ್ತಾ, ಮಜಾ ಮಾಡುತ್ತಿರುವ ನಟಿ ರಚಿತಾ ರಾಮ್ ಅವರು ಡ್ರಾಮಾ ಜೂನಿಯರ್ ಸೀಸನ್ 4 ರಲ್ಲಿ ಕಾಣಿಸಿಕೊಂಡು ಜಡ್ಡ್ಜ್ ಆಗಿದ್ದಾರೆ. ಜೊತೆಗೆ ಈಗಲೂ ಕೂಡ ಅಲ್ಲಿಯೇ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮಜಾ ಭಾರತದಲ್ಲಿ ಕಾಣಿಸಿದ್ದ ರಚಿತಾ ಅವರು ಇದೀಗ ಮಕ್ಕಳ ಜೊತೆ ಮಕ್ಕಳಾಗಿ ಮಕ್ಕಳ ಅಭಿನಯವನ್ನು ಸವಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ರಚಿತಾ ರಾಮ್ ಅವರು ಕೇವಲ ಸ್ಟಾರ್ ನಟರ ಜೊತೆ ಮಾತ್ರ ತೆರೆಹಂಚಿಕೊಳ್ಳುವುದಲ್ಲದೆ, ಸಣ್ಣ ಸಣ್ಣ ಕಲಾವಿದರ ಜೊತೆ ಅಭಿನಯ ಮಾಡಿ ಡಾನ್ಸ್ ಮಾಡಿ ಹೆಚ್ಚು ಸುದ್ದಿ ಆದವರು.