Rachita Ram ; ನಟಿ ರಚಿತಾ ರಾಮ್ ಅವರ ಡ್ಯಾನ್ಸ್ ನೋಡಿ ರಚ್ಚು ಇದೇನಮ್ಮ ನಿನ್ನ ಅವತಾರ ಎಂದ ಫ್ಯಾನ್ಸ್..!

By Infoflick Correspondent

Updated:Monday, June 20, 2022, 11:10[IST]

Rachita Ram ;  ನಟಿ ರಚಿತಾ ರಾಮ್ ಅವರ ಡ್ಯಾನ್ಸ್ ನೋಡಿ ರಚ್ಚು ಇದೇನಮ್ಮ ನಿನ್ನ ಅವತಾರ ಎಂದ ಫ್ಯಾನ್ಸ್..!

ನಟಿ ರಚಿತಾ ರಾಮ್ ಹೌದು ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಟಿ ರಚಿತಾ ರಾಮ್ ಅವರು ಅವರದೇ ಆದ ಅಪಾರ ಅಭಿಮಾನಿ ಬಳಗವನ್ನು ಅವರ ಸಖತ್ತಾದ ಅಭಿನಯದಿಂದಲೇ ಗಿಟ್ಟಿಸಿಕೊಂಡಿದ್ದಾರೆ. ಕನ್ನಡ ತೆಲುಗು ಚಿತ್ರಗಳಲ್ಲಿ ಅಭಿನಯ ಮಾಡುತ್ತ ಬರುತ್ತಿರುವ ನಟಿ ರಚ್ಚು ಹೆಚ್ಚು ಕ್ಯೂಟ್ ನಟಿ ಎನ್ನಬಹುದು. ಹಾಗೂ ಇನ್ನೂ ಸಹ ಬೇರೆ ಬೇರೆ ಆಲ್ಬಮ್ ಸಾಂಗ್ ಗಳಲ್ಲಿ ಸಹ ಹೆಜ್ಜೆ ಹಾಕಿ ಎಲ್ಲಾ ರೀತಿಯಲ್ಲೂ ನಟನೆಗೆ ಫಿಟ್ ಆಗಿದ್ದಾರೆ. ಹೀಗಿರುವಾಗ ನಟಿ ರಚಿತಾ ರಾಮ್ ಅವರನ್ನು ಅವರ ಪ್ರೀತಿಯ ಅಭಿಮಾನಿ ಬಳಗದವರು ಪ್ರೀತಿಯಿಂದಲೇ ರಚ್ಚು ಎಂದೆ ಕರೆಯುವುದು ಖುಷಿಯ ವಿಚಾರ. ನಟಿ ರಚಿತಾ ರಾಮ್ ಅವರು ನಟ ಡಿ ಬಾಸ್ ಜೊತೆ ಮೊದಲ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.. ಬುಲ್ಬುಲ್ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದು ಮೊದಲ ಚಿತ್ರವೂ ಸಹ ಹೆಚ್ಚು ಯಶಸ್ವಿಯಾಗಿದ್ದು ನಂತರದ ದಿನಗಳಲ್ಲಿ ರಚಿತಾ ರಾಮ್ ಅವರು ಹೆಚ್ಚಾಗಿ ಪ್ರಸಿದ್ಧಿ ಪಡೆದಿದ್ದಾರೆ ಎನ್ನಬಹುದು.  

ರಚಿತಾ ರಾಮ್ ಅವರನ್ನು ಇನ್ನೊಂದು ಕಡೆ ಗುಳಿಕೆನ್ನೆಯ ಚೆಲುವೆ ಎಂಬುದಾಗಿಯೂ ಕೂಡ ಕರೆಯುತ್ತಾರೆ. ಹೌದು ಸ್ನೇಹಿತರೆ ರಚಿತರಾಮ್ ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟರ ಮಟ್ಟಿಗೆ ಹೆಚ್ಚು ಆಕ್ಟಿವ್ ಆಗಿದ್ದಾರೆ ಎಂದರೆ ಅವರ ಅಪಾರ ಅಭಿಮಾನಿಗಳು ಈಗಲೂ ಅವರನ್ನು ಹೆಚ್ಚಾಗಿ ಇಷ್ಟಪಡುವಂತೆ ಎಲ್ಲರೊಂದಿಗೆ ಮಾತನಾಡುತ್ತಾ ಸದಾ ನಗುತ್ತಲೆ ಇರುತ್ತಾರೆ ರಚ್ಚು. ಹೌದು ಸ್ಟಾರ್ ನಟರ ಜೊತೆತೆರೆ ಹಂಚಿಕೊಂಡಿರುವ ರಚಿತಾ ರಾಮ್ ಅವರು ಇತ್ತೀಚೆಗೆ ಸಣ್ಣ ಮಕ್ಕಳ ಕಾರ್ಯಕ್ರಮವಾದ ಡ್ರಾಮಾ ಜೂನಿಯರ್ಸ್ ಸೀಸನ್ 4ರಲ್ಲಿ ಜಡ್ಜ್ ಆಗಿರುವುದು ಖುಷಿಯ ಸುದ್ದಿ. ಇದು ಕೂಡ ಅವರಿಗೆ ಹೆಚ್ಚು ಖುಷಿ ತಂದಿದೆಯಂತೆ. ಇಂತಹ ಒಂದು ಕಾರ್ಯಕ್ರಮಕ್ಕೆ ನಾನು ಜಡ್ಜ್ ಆಗಿ ಬಂದಿರುವುದು ನನ್ನ ಪುಣ್ಯ, ನಾನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ ರಚಿತಾ ರಾಮ್. 

ಹೀಗೆ ಒಂದಲ್ಲ ಒಂದು ವಿಚಾರವಾಗಿ ರಚಿತಾ ರಾಮ್ ಸುದ್ದಿಯಾಗುತ್ತಿದ್ದು ಇದೀಗ ಅವರ ಮತ್ತೊಂದು ತುಂಡು ಬಟ್ಟೆ ತೊಟ್ಟಿರುವ ಮಾದಕವಾದ ವಿಡಿಯೋ ವೈರಲ್ ಆಗುತ್ತಿದೆ ಗೆಳೆಯರೇ. ಈ ವಿಡಿಯೋದಲ್ಲಿ ರಚಿತಾ ರಾಮ್ ಅವರು ಒಂದು ಮ್ಯೂಸಿಕ್ ಗೆ ಡ್ಯಾನ್ಸ್ ಮಾಡಿದ್ದು ಎಲ್ರೂ ನೋಡನೋಡುತ್ತಿದ್ದಂತೆಯೇ ವಾವ್ ಎಂದಿದ್ದಾರೆ. ಹಾಗೇನೇ ನೆಟ್ಟಿಗರು ಸಹ ಫಿದಾ ಆಗಿದ್ದಾರೆ ಎನ್ನಲಾಗಿದೆ. ನೀವು ಕೂಡ ಒಂದು ಬಾರಿ ರಚ್ಚು ಅವರ ಈ ವಿಡಿಯೋ ನೋಡಿ. ಈ ನೃತ್ಯದ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ಏನು ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು..