Rachit Ram : ವೇದಿಕೆ ಮೇಲೆ ರಘು ದೀಕ್ಷಿತ್ ಜೊತೆ ಎಲ್ಲರೂ ವಾವ್ ಎನ್ನುವಂತೆ ಡ್ಯಾನ್ಸ್ ಮಾಡಿದ ರಚ್ಚು..!

By Infoflick Correspondent

Updated:Thursday, June 16, 2022, 12:59[IST]

Rachit Ram : ವೇದಿಕೆ ಮೇಲೆ ರಘು ದೀಕ್ಷಿತ್ ಜೊತೆ ಎಲ್ಲರೂ ವಾವ್ ಎನ್ನುವಂತೆ ಡ್ಯಾನ್ಸ್ ಮಾಡಿದ ರಚ್ಚು..!

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯರ ಸಾಲಿನಲ್ಲಿ ಬರುವ ನಟಿ ರಚಿತಾ ರಾಮ್ ಇದೀಗ ಹೆಚ್ಚು ಬೇಡಿಕೆಯ ನಟಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟ ಡಿ ಬಾಸ್ ಅವರೊಂದಿಗೆ ನಟನೆ ಆರಂಭಿಸಿದ ರಚಿತಾ ರಾಮ್ ಅವರು ಬುಲ್ ಬುಲ್ ಸಿನಿಮಾದ ಮೂಲಕ ಎಲ್ಲರ ಮನಗೆದ್ದಿದ್ದರು. ಮೊದಲ ಸಿನಿಮಾದಲ್ಲಿಯೇ ಆ ನಗುವಿನ ಮುಗ್ದ ನಟನೆ ತೋರಿಸಿ ಅಪಾರ ಅಭಿಮಾನಿಗಳನ್ನು ಹೊಂದಿದರು ಎಂದು ಹೇಳಬಹುದು. ಹೌದು ನಟಿ ರಚಿತಾ ರಾಮ್ ಅವರು ನೋಡುವುದಕ್ಕೆ ತುಂಬಾ ಸುಂದರವಾಗಿದ್ದು, ಗುಳಿಕೆನ್ನೆ ಚೆಲುವೆ, ಚಂದುಳ್ಳಿ ಬೆಡಗಿ ಎಂದು ಅಭಿಮಾನಿಗಳಿಂದ ಕರೆಯಲ್ಪಡುತ್ತಾರೆ. ಹಾಗೆ ಪ್ರೀತಿಯ ಇವರ ಅಭಿಮಾನಿಗಳು ಇವರು ಯಾವುದೇ ಕಾರ್ಯಕ್ರಮಕ್ಕೂ ಆಗಮಿಸಿದರೂ ತುಂಬಾನೇ ಖುಷಿ ಪಡುತ್ತಾರೆ ಎನ್ನಬಹುದು.

ನಟಿ ರಚಿತಾ ಅವರ ಸರಳತೆ ಬಗ್ಗೆ ನಾವು ಹೇಳಬೇಕಾಗಿಲ್ಲ, ಯಾವುದೇ ಕಾರ್ಯಕ್ರಮ ಇದ್ದರೂ ತುಂಬಾ ಸಿಂಪಲ್ ಆಗಿ ಕಾಣಿಸುತ್ತಾರೆ ರಚಿತಾ. ಹೌದು ಆರಂಭದಲ್ಲಿ 10 ವರ್ಷಗಳ ಹಿಂದೆ ಜೀ ಕನ್ನಡದ ಒಂದು ಸೀರಿಯಲ್ ನಲ್ಲಿ ಅಭಿನಯ ಮಾಡುತ್ತಿದ್ರು, ತದನಂತರ ಸಿನಿಮಾಗಳಲ್ಲಿ ನಟನೆ ಆರಂಭಿಸಿ ಇದೀಗ ಟಾಪ್ ನಟಿಯಾಗಿ ಇಲ್ಲೇ ಕನ್ನಡ ಚಿತ್ರರಂಗದಲ್ಲಿಯೆ  ಉಳಿದುಕೊಂಡು ಅಭಿನಯ ಮಾಡುತ್ತಿದ್ದಾರೆ. 

ಹಾಗೆ ಕೇವಲ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಹೌದು ರಚಿತಾ ರಾಮ್ ಅವರು ಈ ಹಿಂದೆ ಮ್ಯೂಸಿಕ್ ಡೈರೆಕ್ಟರ್ ರಘು ದೀಕ್ಷಿತ್ ಒಂದು ವೇದಿಕೆಯಲ್ಲಿ ಚಾಂದನಿ ಹಾಡನ್ನು ಹಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದ್ದು ಹೋಗಿ ಟಪಾಂಗುಚ್ಚಿ ಸ್ಟೆಪ್ ಹಾಕಿದ್ದು ಅಲ್ಲಿ ನೆರೆದಿದ್ದ ಎಲ್ಲರ ಗಮನ ಸೆಳೆದಿದ್ದರು.

ಅದೇ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ಬಿಳಿ ಸೀರೆ ತೊಟ್ಟು ನಟಿ ರಚಿತಾ ರಾಮ್ ಅವರು ಯಾವ ರಂಭೆ ಮೆನಕೆ ಊರ್ವಶಿಗೂ ಕಡಿಮೆ ಇಲ್ಲ ಎಂಬಂತೆ ಡ್ಯಾನ್ಸ್ ಮಾಡಿದ್ದಾರೆ. ಹೌದು ಆ ಡ್ಯಾನ್ಸ್ ಮಾಡಿದ ಪರಿ ಹೇಗಿತ್ತು ಗೊತ್ತಾ.? ಇಲ್ಲಿದೆ ನೋಡಿ ನೃತ್ಯದ ಆ ವಿಡಿಯೋ. ಇನ್ನೊಮ್ಮೆ ನೋಡಿ ನಿಜಕ್ಕೂ  ನಿಮಗೂ ಕೂಡ ಇಷ್ಟ ಆಗುತ್ತೆ. ನಟಿ ರಚಿತಾ ರಾಮ್ ಅವರ ಈ ಮಾದಕದಂತಹ ವಿಡಿಯೋ ಇಷ್ಟವಾದಲ್ಲಿ ತಪ್ಪದೆ ಶೇರ್ ಸಹ ಮಾಡಿ ಧನ್ಯವಾದಗಳು..(video credit : top videos ).