Rachita Ram : ಸೆಲ್ಫಿ ಎಂದ ಅಭಿಮಾನಿಗೆ ನಟಿ ರಚಿತಾ ರಾಮ್ ಮಾಡಿದ್ದು ಸರೀನಾ..! ವಿಡಿಯೋ ನೋಡಿ ಕೆರಳಿದ ನೆಟ್ಟಿಗರು

By Infoflick Correspondent

Updated:Sunday, August 7, 2022, 13:17[IST]

Rachita Ram : ಸೆಲ್ಫಿ ಎಂದ ಅಭಿಮಾನಿಗೆ ನಟಿ ರಚಿತಾ ರಾಮ್ ಮಾಡಿದ್ದು ಸರೀನಾ..! ವಿಡಿಯೋ ನೋಡಿ ಕೆರಳಿದ ನೆಟ್ಟಿಗರು

ಮಾನ್ಸೂನ್ ರಾಗ ಕನ್ನಡ ಚಲನಚಿತ್ರವಾಗಿದ್ದು, ಧನಂಜಯ, ರಚಿತಾ ರಾಮ್ ಮತ್ತು ಹೆಚ್ಚಿನವರು ನಟಿಸಿದ್ದಾರೆ. ಚಿತ್ರವನ್ನು ಎಸ್ ರವೀಂದ್ರನಾಥ್ ನಿರ್ದೇಶಿಸಿದ್ದಾರೆ, ಮತ್ತು ಎ ಆರ್ ವಿಖ್ಯಾತ್ ನಿರ್ಮಿಸಿದ್ದಾರೆ. ಹೌದು ಅನೂಪ್ ಸೆಲ್ಲಿನ್ ಅವರ ಸಿನಿಮಾ ಮ್ಯೂಸಿಕ್ ಮತ್ತು ಹಾಡುಗಳು ಸಹ ಅದ್ಭುತವಾಗಿ ಮೂಡಿ ಬಂದಿದೆ ಎನ್ನಬಹುದು. ಇತ್ತೀಚಿಗೆ ಮಾನ್ಸೂನ್ ರಾಗ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಕಾರ್ಯಕ್ರಮಕ್ಕೆ ನಟಿ ರಚಿತಾ ರಾಮ್ ಅವರು ಕೂಡ ಆಗಮಿಸಿದ್ದರು. ನಟಿ ರಚ್ಚು ಟ್ರೈಲರ್ ಲಾಂಚ್ ಬಗ್ಗೆ ಮಾತನಾಡಿದ್ದು, ಟ್ರೈಲರ್ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಹಾಗೆ ಗೂಸ್ ಬಂಬ್ಸ್ ತರ ಫೀಲ್ ಆಯ್ತು ಎಂದರು. ಜೊತೆಗೆ ಅವರ ಪಾತ್ರದ ಬಗ್ಗೆ ಕೂಡ ಮಾತನಾಡಿದ್ದು ಕ್ಯೂರ್ಯಾಸಿಟಿ ಮೂಡಿಸಿತು ಎಂದು ಹೇಳಬಹುದು. 

ಹೌದು ಚಿತ್ರದಲ್ಲಿ ರಚಿತರಾಮ್ ಅವರು ಒಬ್ಬ ಲೈಂ**ಗಿಕ ಕಾರ್ಯಕರ್ತೆಯಾಗಿ ಅಭಿನಯ ಮಾಡುತ್ತಿದ್ದಾರಂತೆ. ರಚಿತಾ ರಾಮ್ ಅವರು ಟ್ರೈಲರ್ ಲಾಂಚ್ ವೇಳೆ ತುಂಬಾ ಮುದ್ದಾಗಿ ಕಾಣಿಸಿದ್ದು ವಿಶೇಷವಾಗಿತ್ತು. ಅವರ ಅಭಿಮಾನಿಗಳು ಕೂಡ ಅವರ ಚಿತ್ರ ಮಾನ್ಸೂನ್ ರಾಗಕ್ಕಾಗಿ ತುಂಬಾ ಕಾತುರದಿಂದ ಕಾಯುತ್ತಿದ್ದಾರೆ. ಮಾನ್ಸೂನ್ ರಾಗ ಚಿತ್ರ ಇದೆ ಆಗಸ್ಟ್ 19ನೇ ತಾರೀಕು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆ ಆಗಲಿದೆ. ನಟ ರಾಕ್ಷಸ ಎಂದು ಕರೆಯುವ ನಟ ಧನಂಜಯ್ ಅವರ ಜೊತೆ ಕಾಂಪೀಟ್ ಮಾಡುವುದು ತುಂಬಾ ಕಷ್ಟಕರ ವಿಷಯ ಎಂದು ಹೇಳಿಕೊಂಡಿರುವ ನಟಿ ರಚಿತಾ ರಾಮ್ ಅವರು, ಅವರೊಟ್ಟಿಗೆ ಅಭಿನಯ ಮಾಡಿದ ಅನುಭವವನ್ನು ನೀವು ಸಿನಿಮಾದಲ್ಲಿ ನೋಡಬೇಕು. ಹಾಗೆ ಯಾವ ರೀತಿ ಅಭಿನಯ ಮಾಡಿದ್ದಾರೆಂದು ಕಾದು ನೋಡಬೇಕು.   

ಹೌದು ರಚಿತಾ ರಾಮ್ ಅವರೊಟ್ಟಿಗೆ ಅಭಿಮಾನಿಯೋಬ್ಬ ಸೆಲ್ಪಿ ತೆಗೆದುಕೊಳ್ಳಲು ಮೊಬೈಲ್ ತೆಗೆದುಕೊಂಡು ಪಕ್ಕಕ್ಕೆ ನಿಲ್ಲುತ್ತಾನೆ. ಆಗ ರಚಿತಾರಾಮ್ ಅವರು ನಡೆದುಕೊಂಡ ರೀತಿ ನೆಟ್ಟಿಗರನ್ನು ಕೆರಳಿಸಿದೆ ಎನ್ನಬಹುದು. ಹೌದು ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ರಚ್ಚು ಆ ರೀತಿಯಾಗಿ ನಡೆದುಕೊಳ್ಳುವ ಅವಶ್ಯಕತೆಯಿತ್ತ ಎಂದು ಕೆಲವರು ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ರಚಿತಾ ರಾಮ್ ಅವರು ಅಭಿಮಾನಿ ಮೇಲೆ ಸಿಟ್ಟಾದ್ರ ಇಲ್ಲವಾ ಎಂದು ಈ ವಿಡಿಯೋದಲ್ಲಿ ನೋಡಿ, ಈ ವರ್ತನೆಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...( video credit : cini buzz)