ಅಸಲಿಗೆ ರಚಿತಾ ರಾಮ್ ಡ್ರಾಮಾ ಜ್ಯೂನಿಯರ್ಸ್ ಗಾಗಿ ಇಷ್ಟೊಂದು ಸಂಭಾವನೆ ತೆಗೆದುಕೊಂಡ್ರ..?

By Infoflick Correspondent

Updated:Thursday, April 21, 2022, 12:46[IST]

ಅಸಲಿಗೆ ರಚಿತಾ ರಾಮ್ ಡ್ರಾಮಾ ಜ್ಯೂನಿಯರ್ಸ್ ಗಾಗಿ ಇಷ್ಟೊಂದು ಸಂಭಾವನೆ ತೆಗೆದುಕೊಂಡ್ರ..?

ಕನ್ನಡ ಕಿರುತೆರೆ ಇದೀಗ ಉತ್ತಮ ಮಟ್ಟದಲ್ಲಿ ಮುಂದಿದೆ. ಹೌದು ಕನ್ನಡ ಕಿರುತೆರೆಯಲ್ಲಿ ಈಗ ರಿಯಾಲಿಟಿ ಶೋಗಳ ದರ್ಬಾರ್ ಜೋರಾಗಿದೆ. ಇನ್ನೊಂದು ಕಡೆ ವಾರಪೂರ್ತಿ ಸೀರಿಯಲ್ಲುಗಳ ಭಾರಿ ಸಂಭ್ರಮವಾದರೆ, ವಾರಂತ್ಯದಲ್ಲಿ ಸಖತ್ತಾದ ರಿಯಾಲಿಟಿ ಶೋಗಳ ದರ್ಬಾರ್ ಎನ್ನಬಹುದು. ಹೌದು ಅತ್ತ ಕಲರ್ಸ್ ಕನ್ನಡದಿಂದ ರಚಿತಾ ರಾಮ್ ( Rachita ram ) ಹಾಗೂ ರವಿಚಂದ್ರನ್ ಅವರು ಇತ್ತ ಜೀ ಕನ್ನಡಕ್ಕೆ ಬಂದಿದ್ದಾರೆ. ಅತ್ತ ಕಲರ್ಸ್ ಕನ್ನಡಕ್ಕೆ ಸಿಂಗರ್ ರಾಜೇಶ್ ಕೃಷ್ಣ ಹಾಗೂ ವಿಜಯ್ ರಾಘವೇಂದ್ರ ಅವರು ಹೋಗಿದ್ದಾರೆ. ಇನ್ನೊಂದು ಕಡೆ ಡಿಕೆಡಿ ಕಾರ್ಯಕ್ರಮಕ್ಕೆ ಶಿವಣ್ಣ ಅವರನ್ನು ಕರೆ ತಂದಿರುವುದರಿಂದ ಜಿ ಕನ್ನಡವೇ ಟಿಆರ್ಪಿ ಯಲ್ಲಿ ಮುಂದಿದೆ ಎಂದು ಮಾಧ್ಯಮ ವಲಯದಲ್ಲಿ ಹೇಳಲಾಗುತ್ತಿದೆ. ಪುಟ್ಟ ಮಕ್ಕಳ ಕಾರ್ಯಕ್ರಮ ಆದ ಈ ಡ್ರಾಮಾ ಜೂನಿಯರ್ಸ್ ಸೀಸನ್ 4 ಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು 3 ವಾರಗಳು ಮುಕ್ತಾಯಗೊಂಡು ಒಳ್ಳೆಯ ರೆಸ್ಪಾನ್ಸ್ ದೊರಕಿವೆ..

ಹೌದು ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದ್ದು, ಪ್ರೇಕ್ಷಕರಿಗೆ ಒಂದು ಒಳ್ಳೆ ರಸದೌತಣ ಎನ್ನಬಹುದು. ಹಾಗೆ ಸಾಕಷ್ಟು ಮಕ್ಕಳಿಗೆ ಒಂದು ಒಳ್ಳೆಯ ಭವಿಷ್ಯ ಮಾಡಿದ ವೇದಿಕೆ ಎಂದು ಹೇಳಬಹುದು. ಇದೀಗ ನಟಿ ರಚಿತಾ ರಾಮ್ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದಾರೆ. ನಟಿ ಲಕ್ಷ್ಮಿ ಅಮ್ಮ ಮತ್ತು ರವಿಚಂದ್ರನ್ ಅವರೊಟ್ಟಿಗೆ ರಚಿತ ರಾಮ್ ಅವರು ಕಾಣಿಸಿಕೊಂಡಿರುವುದು ಖುಷಿ ವಿಚಾರ. ಇದನ್ನು ಅವರೇ ಹೇಳಿಕೊಂಡಿದ್ದು, ನನ್ನ ಸ್ನೇಹಿತರು ಇಂತಹ ಕಾರ್ಯಕ್ರಮಕ್ಕೆ ಜಡ್ಜ್ ಆಗಿರುವುದು ತುಂಬಾ ಖುಷಿ ತಂದಿದೆ ಎಂದು ಕಾಲ್ ಮಾಡಿ ಹೇಳುತ್ತಿದ್ದಾರೆ ಎಂದಿದ್ದರು. ಹೌದು  ನಟಿ ರಚಿತಾಅವರ ಸಂಭಾವನೆ ವಿಚಾರಕ್ಕೆ ಬರುವುದಾದರೆ ಕೆಲವೊಂದಿಷ್ಟು ಕಾರ್ಯಕ್ರಮ ಮತ್ತು ಸ್ಪರ್ಧಿಗಳಿಗೆ ವಾರಕ್ಕೆ ಸಂಭಾವನೆ ನಿಗದಿಪಡಿಸಿದ್ದರೆ, ಹಾಗೆ ಜಡ್ಜಸ್ ಗಳಿಗೆ ಪೂರ್ತಿ ಷೋಗಾಗಿಯೇ ಸಂಭಾವನೆಯನ್ನ ಮಾತನಾಡಿರುತ್ತಾರೆ.  

ಹೌದು ನಟಿ ರಚಿತಾ ರಾಮ್ ಅವರಿಗೆ, ಮೂರರಿಂದ ನಾಲ್ಕು ತಿಂಗಳ ನಡೆಯುವ ಈ ಡ್ರಾಮಾ ಜೂನಿಯರ್ ಸೀಸನ್ 4ಕ್ಕೆ 50 ಲಕ್ಷ ಸಂಭಾವನೆ ಮಾತನಾಡಿದ್ದಾರಂತೆ ಎನ್ನಲಾಗಿದೆ. ವಾರಂತ್ಯದಲ್ಲಿ ಒಂದು ಅಥವಾ ಎರಡು ದಿನ ಶೂಟಿಂಗ್ ಮಾತ್ರ ಇರಲಿದ್ದು, ನಾಲ್ಕು ತಿಂಗಳ ಪೂರ್ತಿ ಶೋಗೆ ಜಡ್ಜ್ ಆಗಲು ನಟಿ ರಚ್ಚು 50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ. ಜೊತೆಗೆ ಈ ಪುಟ್ಟ ಮಕ್ಕಳ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಹೇಗೆ ಮೂಡಿ ಬರುತ್ತಿದೆ ಎಂಬುದಾಗಿ ನಮಗೆ ಕಮೆಂಟ್ ಮಾಡಿ ದನ್ಯವಾದಗಳು....