Rachita ram : ಕದ್ದು ಮುಚ್ಚಿ ಆಸೆ ಈಡೇರಿಸಿ ಕೊಂಡ ರಚಿತಾ ರಾಮ್ ಮಾಡಿದ್ಯೇನು ? ಇಲ್ಲಿ ನೋಡಿ

By Infoflick Correspondent

Updated:Tuesday, June 14, 2022, 14:43[IST]

Rachita ram :  ಕದ್ದು ಮುಚ್ಚಿ ಆಸೆ ಈಡೇರಿಸಿ ಕೊಂಡ ರಚಿತಾ ರಾಮ್  ಮಾಡಿದ್ಯೇನು ? ಇಲ್ಲಿ ನೋಡಿ

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಸಿನಿಮಾ ರಂಗಕ್ಕೆ ಬಂದು 9 ವರ್ಷವಾಗಿದೆ. ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಚಿತಾ ರಾಮ್, ಅವರ ಕೈಯಲ್ಲಿ ಸದ್ಯ ಸಾಲು ಸಾಲು ಚಿತ್ರಗಳಿವೆ. ನಟ ಡಾಲಿ ಧನಂಜಯ್ ಜೊತೆಗೆ ನಟಿಸಿರುವ ಮಾನ್ಸೂನ್ ರಾಗ ಚಿತ್ರ ಆ.12ರಂದು ರಿಲೀಸ್ ಆಗಲಿದೆ. ನಟ ನೀನಾಸಂ ಸತೀಶ್ ಜೊತೆಗಿನ ಚಿತ್ರ ಮ್ಯಾಟ್ನಿ, ಶಬರಿ, ಲವ್ ಮಿ ಆರ್ ಹೇಟ್ ಮಿ, ಕ್ರಾಂತಿ ಸೇರಿದಂತೆ 6ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗಬೇಕಿದೆ. 

ಕನ್ನಡ ಮಾತ್ರವಲ್ಲದೇ, ತೆಲುಗು ಚಿತ್ರರಂಗದಲ್ಲೂ ಮಿಂಚಿರುವ ರಚಿತಾ ರಾಮ್ ಅವರು ಕಲ್ಯಾಣ್ ದೇವ್ ಅವರ ಜೊತೆಗೆ ಸೂಪರ್ ಮಚ್ಚಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಇನ್ನು ಕನ್ನಡದಲ್ಲಿ ಕೆಲ ದಿನಗಳ ಹಿಂದಷ್ಟೇ ರೈಡರ್, ಏಕ್ ಲವ್ ಯಾ, 100, ಲವ್ ಯೂ ರಚ್ಚು ಸೇರಿದಂತೆ ಅವರ ನಟನೆಯ ಹಲವು ಚಿತ್ರಗಳು ರಿಲೀಸ್ ಆಗಿವೆ. ಏಕ್ ಲವ್ ಯಾ ಹಾಗೂ ಲವ್ ಯೂ ರಚ್ಚು ಸಿನಿಮಾಗಳಲ್ಲಿ ರಚಿತಾ ರಾಮ್ ಅವರು ಕೊಂಚ ಬೋಲ್ಡ್ ಆಗಿ ನಟಿಸಿದ್ದರು. 

ಇನ್ಜ ಕಿರುತೆರೆಯಲ್ಲೂ ಸಕ್ರಿಯವಾಗಿರುವ ರಚಿತಾ ರಾಮ್ ಅವರು, ಹಲವು ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಚಿತಾ ರಾಮ್ ಮಕ್ಕಳ ಕಾರ್ಯಕ್ರಮಕ್ಕೆ ತೀಪುಗಾರರಾಗಿದ್ದಾರೆ. ಈ ಹಿಂದೆ ಕಾಮಿಡಿ ಶೋ ನಲ್ಲೂ ಜಡ್ಜ್ ಆಗಿದ್ದರು.   

ಇದೀಗ ರಚಿತಾ ರಾಮ್ ಅವರು ತಮ್ಮ ಆಸೆಯೊಂದನ್ನು ನನಸು ಮಾಡಿಕೊಂಡಿದ್ದಾರೆ. ಅದೂ ಕೂಡ ಕದ್ದು ಮುಚ್ಚಿ ಆಸೆ ಈಡೇರಿಸಿಕೊಂಡಿದ್ದಾರೆ. ಈ ಸುದ್ದಿಯೇ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅದೇನೆಂದರೆ, ರಚಿತಾ ರಾಮ್ ಅವರಿಗೆ ಮೆಟ್ರೋನಲ್ಲಿ ಹೋಗುವ ಆಸೆ ಇತ್ತಂತೆ. ಆದರೆ, ರಚಿತಾ ರಾಮ್ ಅವರು ಸೆಲಬ್ರಿಟಿ ಆಗಿರುವುದರಿಂದ ಅವರಿಗೆ ಮೆಟ್ರೋನಲ್ಲಿ ಹೋಗೋಕೆ ಆಗುತ್ತಿರಲಿಲ್ಲವಂತೆ. ಆದರೆ ಮುಖ್ಕಕ್ಕೆ ಬಟ್ಟೆ ಕಟ್ಟಿಕೊಂಡು ಮೆಟ್ರೋಗೆ ಹೋಗಿದ್ದಾರೆ. ಇದರ ಸೆಲ್ಫಿ ತೆಗೆದು ಪೋಸ್ಟ್ ಕೂಡ ಮಾಡಿದ್ದಾರೆ.