Radhika Kumara swamy : ಗುಲಾಬಿಯಂತೆಯೇ ಕಂಗೊಳಿಸಿದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ಮಾಡಿದ್ದ ಪರಿ ಈಗ ವೈರಲ್..!

By Infoflick Correspondent

Updated:Thursday, September 22, 2022, 11:48[IST]

Radhika Kumara swamy : ಗುಲಾಬಿಯಂತೆಯೇ ಕಂಗೊಳಿಸಿದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ಮಾಡಿದ್ದ ಪರಿ ಈಗ ವೈರಲ್..!


ರಾಧಿಕಾ ಕುಮಾರಸ್ವಾಮಿ, ಹೌದು ಸ್ಯಾಂಡಲ್ವುಡ್ನ ಮೋಸ್ಟ್ ಬ್ಯೂಟಿಫುಲ್ ನಟಿಯರಲ್ಲಿ ಇವರು ಕೂಡ ಒಬ್ಬರು. ರಾಧಿಕಾ ಕುಮಾರಸ್ವಾಮಿ ಅವರದ್ದು ಸಿನಿಮಾರಂಗದಲ್ಲಿ ಅವರದೇ ಆದ ಹೆಚ್ಚು ಕೊಡುಗೆ ಇದೆ. ಹಾಗೆ ಅವರದೇ ಆದ ಬಾರಿ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಸಹ ನಟಿ ರಾಧಿಕಾ ಕುಮಾರಸ್ವಾಮಿ ಅವರು ಗಳಿಸಿಕೊಂಡಿದ್ದಾರೆ. ಹೌದು, ಆರಂಭದಲ್ಲಿ ಶಿವಣ್ಣ ಅವರ ಜೊತೆ ಅಣ್ಣ ತಂಗಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಈ ನಟಿ ರಾಧಿಕಾ ಕುಮಾರಸ್ವಾಮಿ ಅವರು ಆಗ ಕೇವಲ 15 ವರ್ಷದ ಹುಡುಗಿಯಾಗಿದ್ದರಂತೆ. 9ನೇ ತರಗತಿ ಓದುತ್ತಿದ್ದ ರಾಧಿಕಾ ಕುಮಾರಸ್ವಾಮಿ ಶಿವಣ್ಣ ಅವರ ಜೊತೆ ಮೊದಲ ಸಿನಿಮಾದಲ್ಲಿ ಯಶಸ್ವಿಯಾದವರು. 

ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಆಗಲೇ ಒಂದು ಮದುವೆಯಾಗಿತ್ತು. ಅದು ಬಾಲ್ಯ ವಿವಾಹ ಎನ್ನಲಾಗಿದೆ. ಅವರ ಮೊದಲ ಪತಿ ಹೆಸರು ರತ್ತನ್ ಎಂದು. ಇವರು ತೀರಿ ಹೋದ ಬಳಿಕ 2002 ರ ನಂತರ ಮತ್ತೆ 2006ರಲ್ಲಿಯೇ ಕುಮಾರಸ್ವಾಮಿಯನ್ನು ವರಿಸಿದ ರಾಧಿಕಾ ಅವರು ಇದೀಗ ಕೌಟುಂಬಿಕ ಜೀವನದಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ.  ಹೌದು, ರಾಧಿಕಾ ಮತ್ತು ಕುಮಾರಸ್ವಾಮಿ ಆ ಜೋಡಿಗೆ ಇದೀಗ ಒಂದು ಮಗುವಿದ್ದು ಆಕೆಯ ಹೆಸರು ಶಮಿಕ ಎಂದು ಹೇಳಲಾಗುತ್ತಿದೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿರುವ ರಾಧಿಕಾ ಕುಮಾರಸ್ವಾಮಿ ಅವರ ಒಂದು ವಿಡಿಯೋ ಇತ್ತೀಚಿಗೆ ತುಂಬಾನೇ ಗಮನ ಸೆಳೆಯುತ್ತಿದೆ. ಹೌದು 35 ವರ್ಷ ವಯಸ್ಸಾಗಿದ್ದರೂ ಕೂಡ ರಾಧಿಕಾ ಈಗಲೂ ಸಹ ಕೇವಲ 20 ವಯಸ್ಸಿನವರಂತೆ ಕಾಣಿಸುತ್ತಾರೆ.  

ರಾಧಿಕಾ ಕುಮಾರಸ್ವಾಮಿ ಅವರು ಯಾವ ರೀತಿ ಮೈ ಹಾಗೂ ಸೊಂಟ ಬಳುಕಿಸಿ ನೃತ್ಯ ಮಾಡುತ್ತಾರೆ ಎಂಬುದಾಗಿ ನಿಮಗೂ ಗೊತ್ತು, ತುಂಬಾನೇ ಆಕರ್ಷಕವಾಗಿ ರಾಧಿಕಾ ಕುಮಾರಸ್ವಾಮಿ ನೃತ್ಯ ಮಾಡುತ್ತಾರೆ. ಈ ಹಿಂದೆ ಅವರದೇ ಆದ ಸ್ವೀಟಿ ಚಿತ್ರದ ಪ್ರಮೋಷನ್ ವೇಳೆ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಂದು ರಾಧಿಕಾ ಅವರು ಸೃಜನ್ ರವರ ಶೋದಲ್ಲಿ ಸಕ್ಕತ್ ನೃತ್ಯ ಮಾಡಿದ್ದರು. ಅದರ ಹಾಡಿನ ತುಣುಕು ಇದೀಗ ಮತ್ತೆ ವೈರಲಾಗುತ್ತಿದೆ. ಇಲ್ಲಿದೆ ನೋಡಿ ಅದೇ ವಿಡಿಯೋ. ಗುಲಾಬಿಯಂತೆ ಸೀರೆ ತೊಟ್ಟು ಡ್ಯಾನ್ಸ್ ಮಾಡುವ ಮೂಲಕ ಮನರಂಜನೆ ನೀಡಿದ ರಾಧಿಕಾ ಕುಮಾರಸ್ವಾಮಿ ಅವರ ಈ ಹಾಡಿನ ನೃತ್ಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ನಿಮ್ಮ ನೆಚ್ಚಿನ ನಟಿಯರಲ್ಲಿ ಇವರು ಕೂಡ ಒಬ್ಬರು ಎಂದೆನಿಸಿದರೆ ಈ ವಿಡಿಯೋವನ್ನು ಶೇರ್ ಮಾಡಿ ಧನ್ಯವಾದಗಳು...( VIDEO CREDIT : COLOURS KANNADA )