Radhika Kumara swamy : ಅಪ್ಪು ಜೊತೆ ರಾಧಿಕಾ ಕುಮಾರಸ್ವಾಮಿ ಭರ್ಜರಿ ಡ್ಯಾನ್ಸ್ ಮಾಡಿದ್ದ ವಿಡೀಯೋ ವೈರಲ್..!

By Infoflick Correspondent

Updated:Thursday, August 18, 2022, 08:17[IST]

Radhika Kumara swamy : ಅಪ್ಪು ಜೊತೆ ರಾಧಿಕಾ ಕುಮಾರಸ್ವಾಮಿ ಭರ್ಜರಿ ಡ್ಯಾನ್ಸ್ ಮಾಡಿದ್ದ ವಿಡೀಯೋ ವೈರಲ್..!

ರಾಧಿಕಾ ಕುಮಾರಸ್ವಾಮಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 95 ರ ದಶಕದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದವರು.ಹಾಗೆ 2000 ಆಸು ಪಾಸಿನಲ್ಲೂ ಕೂಡ ನಟಿ ರಾಧಿಕಾ ಕುಮಾರಸ್ವಾಮಿ ಅವರು ಹೆಚ್ಚು ಬೇಡಿಕೆಯುಳ್ಳ ನಟಿಯಾಗಿ ಹೆಚ್ಚು ಗಮನ ಸೆಳೆದವರು ಎನ್ನಬಹುದು. ನಟಿ ರಾಧಿಕಾ ಅವರಿಗೆ ಅಪಾರ ಅಭಿಮಾನಿ ಬಳಗ ಇದೆ. ಅವರದ್ದೇ ಆದ ನಟನೆಗೆ ಅವರದೇ ಆದ ಡಾನ್ಸ್ ಶೈಲಿಗೆ ಫಿದಾ ಆಗದೆ ಉಳಿಯದವರು ಯಾರು ಇಲ್ಲ ಅಷ್ಟರ ಮಟ್ಟಿಗೆ ಅದ್ಭುತ ನಟನೆ ಕೌಶಲ್ಯ ಹೊಂದಿದ್ದಾರೆ ರಾಧಿಕಾ ಕುಮಾರಸ್ವಾಮಿ. ಇವರು ಚಿತ್ರರಂಗದಿಂದ ಕೆಲವು ವರ್ಷಗಳವರೆಗೆ ಇತ್ತೀಚಿಗೆ ತುಂಬಾ ದೂರ ಉಳಿದ ನಟಿ. ಇತ್ತೀಚಿಗೆ ಮತ್ತೆ ದಮಯಂತಿ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ನಟ ದರ್ಶನ್ ಅವರ ಜೊತೆಗೆ ಸ್ನೇಹ ಇಟ್ಟುಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರು ದಮಯಂತಿ ಚಿತ್ರದ ಟ್ರೈಲರ್ ವೇಳೆ ದರ್ಶನ್ ಅವರು ಸಹ ಆಗಮಿಸಿದ್ದನ್ನು ನೀವು ನೋಡಿದಿರಿ. ನಟಿ ರಾಧಿಕಾ ಅವರು ಸಕತ್ ಬೋಲ್ಡ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಎನ್ನಬಹುದು. ಅವರ ಸೌಂದರ್ಯ ಈಗಲೂ ಕೂಡ ಹಾಗೆಯೇ ಇದೆ. ಅಷ್ಟು ಅದ್ಭುತವಾಗಿ ಸುಂದರವಾಗಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ರಾಧಿಕಾ ಕುಮಾರಸ್ವಾಮಿ. ನಟಿ ರಾಧಿಕಾ ಕುಮಾರಸ್ವಾಮಿ ಅವರು ಈಗಾಗಲೇ ಕೆಲ ಡಾನ್ಸ್ ರಿಯಾಲಿಟಿ ಷೋಗೂ ಆಗಮಿಸಿದ್ದಾರೆ. ಹಾಗೆ ಅಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸಿದವರು. ಕನ್ನಡದ ಡಾನ್ಸ್ ಡಾನ್ಸ್ ಎನ್ನುವ ಡಾನ್ಸ್ ಪ್ರೋಗ್ರಾಮಿಗೆ ಜಡ್ಜ್ ಆಗಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಅವರು ಒಂದು ಬಾರಿ ನಟ ಪುನೀತವರೊಟ್ಟಿಗೆಅದೇ ವೇದಿಕೆ ಮೇಲೆ ಪಾರು ಪಾರು ಹಾಡಿಗೆ ಡಾನ್ಸ್ ಮಾಡಿದ್ದರು.  

ಅದರ ವಿಡಿಯೋ ತುಣುಕು ಇದೀಗ ವೈರಲಾಗುತ್ತಿದೆ. ಅಪ್ಪು ಅವರ ಮುಂದೆ ಡ್ಯಾನ್ಸ್ ಮಾಡುವುದರಲ್ಲಿ ಯಾರು ಇಲ್ಲ ಬಿಡಿ. ಅದು ಬೇರೆ ಪ್ರಶ್ನೆ. ಅಷ್ಟರ ಮಟ್ಟಿಗೆ ಅಪ್ಪು ಡಾನ್ಸ್ ಎಲ್ಲರಿಗೂ ಅಚ್ಚುಮೆಚ್ಚು ಆಗಿರುತಿತ್ತು. ನಟಿ ರಾಧಿಕಾ ಕುಮಾರಸ್ವಾಮಿ ಅಪ್ಪು ಜೊತೆ ಸ್ಟೆಪ್ ಹಾಕಿದ್ದ ಗತ್ತೆ ಬೇರೆ ಇಲ್ಲಿದೆ ನೋಡಿ ಆ ವಿಡಿಯೋ. ನಿಮಗೂ ಕೂಡ ಅಪ್ಪು ಅವರ ಜೊತೆ ರಾಧಿಕಾ ಕುಮಾರಸ್ವಾಮಿ ಮಾಡಿದ ಡಾನ್ಸ್ ವಿಡಿಯೋ ಇಷ್ಟವಾಗಬಹುದು. ಇಷ್ಟವಾದರೆ ತಪ್ಪದೆ ಶೇರ್ ಮಾಡಿ, ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಅಪ್ಪು ನಿಮಗೂ ಇಷ್ಟ ಎಂದಾಗದಲ್ಲಿ ವಿಡಿಯೋ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು..