Radhika Kumaraswamy : ರಾಧಿಕಾ ಕುಮಾರಸ್ವಾಮಿ ಜೊತೆ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿದ ಯುವಕ..! ವಿಡಿಯೋ ನೋಡಿ ಚಿಂದಿಯಾಗಿದೆ...!

By Infoflick Correspondent

Updated:Sunday, July 24, 2022, 19:28[IST]

Radhika Kumaraswamy :  ರಾಧಿಕಾ ಕುಮಾರಸ್ವಾಮಿ   ಜೊತೆ  ರೋಮ್ಯಾಂಟಿಕ್  ಡ್ಯಾನ್ಸ್ ಮಾಡಿದ ಯುವಕ..! ವಿಡಿಯೋ ನೋಡಿ ಚಿಂದಿಯಾಗಿದೆ...!

ಕನ್ನಡ ಸಿನಿಮಾರಂಗದ ಬಹುಭಾಷಾ ನಟಿ ರಾಧಿಕಾ ಕುಮಾರಸ್ವಾಮಿ  (Radhika Kumaraswamy )ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ನಟಿ ರಾಧಿಕಾ ಕುಮಾರಸ್ವಾಮಿ 2002ರಲ್ಲಿ ನಟ ವಿಜಯ ರಾಘವೇಂದ್ರ ಅವರ ನಿನಗಾಗಿ ಎನ್ನುವ ಸಿನಿಮಾ ಜೊತೆಗೆ ಒಟ್ಟಿಗೆ ಇಬ್ಬರೂ ಪಯಣ ಆರಂಭಿಸಿದವರು. ನಟ ವಿಜಯ ರಾಘವೇಂದ್ರ ಅವರ ಮೊದಲ ಸಿನಿಮಾ ಇದಾಗಿದ್ದು ನಟಿ ರಾಧಿಕಾ ಕುಮಾರಸ್ವಾಮಿ ಅವರ ಮೊದಲ ಚಿತ್ರ ಸಹ ಇದೆ ನಿನಗಾಗಿ ಎನ್ನಲಾಗಿದೆ. ರಾಧಿಕಾ ಕುಮಾರಸ್ವಾಮಿ ಅವರಿಗೆ  35 ವರ್ಷವಾದರೂ ಸಹ ಈಗಲೂ ಮದುವೆಯಾಗದೆ ಇರುವ ಯುವತಿಯಂತೆ ಸಕತ್ ಬೋಲ್ಡ್ ಹಾಗೂ ಚೆಂದುಳ್ಳಿ ಚೆಲುವೇಯಂತೆಯೇ ಕಾಣುತ್ತಾರೆ. ಅತಿ ಸುಂದರವಾದ ನಟಿ ರಾಧಿಕಾ ಕುಮಾರಸ್ವಾಮಿ. ಹೆಚ್ಚು ಬೇಡಿಕೆಯುಳ್ಳ ಹಾಗೂ ಎವರ್ ಗ್ರೀನ್ ನಟಿಯರಲಿ ಇವರು ಸಹ ಸದಾ ಇರುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಅತ್ತ ತಮಿಳು, ತೆಲುಗು, ಸಿನಿಮಾರಂಗದಲ್ಲೂ ರಾಧಿಕಾ ಕುಮಾರಸ್ವಾಮಿಯವರು ಕಾಣಿಸಿದ್ದಾರೆ. ಹಾಗೆ ಅವರದೇ ಆದ ಅಭಿನಯದಿಂದ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಹೇಳಬಹುದು. ನಟಿ ರಾಧಿಕಾ ಕುಮಾರಸ್ವಾಮಿ ಅವರ ಕನ್ನಡ ಚಿತ್ರಗಳು ಈಗಲೂ ಕೂಡ ಸಖತ್ ಹಿಟ್ ಆಗಿದ್ದು, ಇವರ ಮೊದಲ ಸಿನಿಮಾ ಭರ್ಜರಿ ಹಿಟ್ ಕೊಟ್ಟಿತ್ತು.  

ಆಮೇಲೆ ಹಿಂತಿರುಗಿ ನೋಡಲೆ ಇಲ್ಲ ನಟಿ ರಾಧಿಕಾ ಪ್ರಖ್ಯಾತಿ ಹೊಂದಿದ್ದಾರೆ. ನಟಿ ರಾಧಿಕಾ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮದುವೆ ಆಗಿದ್ದಾರೆ ಎನ್ನಲಾಗಿದ್ದು, ಇವರಿಗೆ ಈಗ ಒಂದು ಮಗುವಿದ್ದು ಶಮಿಕ ಅದರ ಹೆಸರು ಎನ್ನಲಾಗಿದೆ. ಅದ್ಭುತ ನಟಿ ಜೊತೆಗೆ ಒಳ್ಳೆಯ ಡ್ಯಾನ್ಸರ್ ಕೂಡ ಹೌದು. 

ಸುವರ್ಣ ಚಾನೆಲ್ ನಲ್ಲಿ ಈ ಹಿಂದೆ ಪ್ರಸಾರವಾಗಿದ್ದ ಒಂದು ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮಕ್ಕೆ ರಾಧಿಕಾ  (Radhika Kumaraswamy ) ಅವರು ಜಡ್ಜ್ ಆಗಿ ಆಗಮಿಸಿದ್ದರು. ಜೊತೆಗೆ ಬಾಲಿವುಡ್ ನಟ ಹಾಗೂ ಕೊರಿಯೋಗ್ರಾಫರ್ ಆಗಿದ್ದ ಸಲ್ಮಾನ್ ಸಹ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬಂದಿದ್ದರು. ರಾಧಿಕಾ ಕುಮಾರಸ್ವಾಮಿ ಕಳೆದ ವರ್ಷ ಹೊಸ ವರ್ಷದ ಪ್ರಯುಕ್ತ ಆಯೋಜಿಸಿದ್ದ ರಂಗು ರಂಗೋಲಿ ಷೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿತ್ತು. ಇದರಲ್ಲಿ 10 ನಿಮಿಷದ ಡ್ಯಾನ್ಸ್ ಗಾಗಿ ನಾಲ್ಕು ಲಕ್ಷವನ್ನ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದೀಗ ಸಲ್ಮಾನ್ ಮತ್ತು ರಾಧಿಕಾ ಕುಮಾರಸ್ವಾಮಿ ಒಟ್ಟಿಗೇ ಯಾವ ರೀತಿ ಡಾನ್ಸ್ ಮಾಡಿದ್ದಾರೆ ಗೊತ್ತಾ.? ಅಂದು ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಸಕತ್ ಧೂಳ್ ಎಬ್ಬಿಸಿದ್ದ ಈ ಜೋಡಿಯ ವಿಡಿಯೋ ಇದೀಗ ಮತ್ತೆ ವೈರಲಾಗುತ್ತಿದೆ. ಒಮ್ಮೆ ನೋಡಿ ರಾಧಿಕಾ ಹಾಗೂ ಸಲ್ಮಾನ್ ಅವರ ಈ ಡಾನ್ಸ್ ಹೇಗಿದೆ ಎಂದು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.( Amith shankar Mysuru ).