ನಿಖಿಲ್ ರೇವತಿ ಸೀಮಂತ ಕಾರ್ಯದಲಿ ಭಾಗಿಯಾದ ರಾಧಿಕಾ..! ಕೊಟ್ಟ ಉಡುಗೊರೆ ಫುಲ್ ವೈರಲ್

Updated: Tuesday, September 14, 2021, 14:17 [IST]

ಹೌದು ಕಳೆದ ಕೊರೋನ ಸಮಯದಲ್ಲಿ ಮೊದಲ ಲಾಕ್ಡೌನ್ ವೇಳೆಯಲ್ಲಿ ಕನ್ನಡದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ತುಂಬಾನೇ ಸರಳವಾಗಿ ನಡೆದಿತ್ತು. ಬಳಿಕ ಇವರಿಬ್ಬರ ಕೆಲವಷ್ಟು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡಿದ್ದವು. ಹೌದು ತೋಟದ ಮನೆಯಲ್ಲಿ ಜೋಡಿ ಅನೋನ್ಯತೆಯಿಂದ ಕಳೆದ ಕೆಲವು ಕ್ಷಣಗಳು ಅಭಿಮಾನಿಗಳಿಗೆ ಬಾರಿ ಸಂತಸ ತಂದಿದ್ದವು, ಮತ್ತು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಸಹ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ಸಹ ದೊಡ್ಡದಾಗಿ ಸದ್ದು ಮಾಡಿತ್ತು.

ಇದೆಲ್ಲದರ ನಡುವೆ ಇದೀಗ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಸೀಮಂತ ಕಾರ್ಯಕ್ರಮ ತುಂಬಾ ಸಿಂಪಲ್ಲಾಗಿ ಜರುಗಿದೆ. ಕಳೆದ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಅವರೇ, ತಮ್ಮ ಮನೆಗೆ ಪುಟ್ಟ ಮಗು ಆಗಮನವಾಗಲಿದೆ ಎಂಬ ವಿಷಯವನ್ನು ಮಾಧ್ಯಮದ ಮುಂದೆ ಪ್ರಸ್ತಾಪ ಪಡಿಸಿದ್ದರು. ಈ ಕುರಿತು ನಿನ್ನೆಯಷ್ಟೇ ರೇವತಿ ಅವರ ಸೀಮಂತ ಕಾರ್ಯ ನಡೆದಿದ್ದು, ಸಾಕಷ್ಟು ಗಣ್ಯರು ಸೀಮಂತ ಕಾರ್ಯಕ್ಕೆ ಬಂದಿದ್ದು ರೇವತಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಶುಭಕೋರಿದ್ದಾರೆ.

ಹೌದು ಇದೀಗ ಮಾಧ್ಯಮ ಮೂಲಕ ಕೇಳಿ ಬಂದಿರುವ ಮಾಹಿತಿ ಪ್ರಕಾರ ರೇವತಿ ಅವರ ಸೀಮಂತ ಕಾರ್ಯಕ್ಕೆ ನಟಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಸಹ ಆಗಮಿಸಿದ್ದರು ಎನ್ನಲಾಗಿದೆ. ರೇವತಿ ಅವರಿಗೆ ಒಂದು ಉಡುಗೊರೆಯನ್ನು ನೀಡಿ ಸೀಮಂತ ಕಾರ್ಯದಲ್ಲಿ ಶುಭಕೋರಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ರಾಧಿಕಾ ಕೊಟ್ಟ ಆ ಉಡುಗೊರೆ ಯಾವುದು ಗೊತ್ತಾ.? ಈ ವೈರಲ್ ವಿಡಿಯೋ ನೋಡಿ, ನೀವು ಸಹ ರೇವತಿ ಅವರಿಗೆ ಶುಭಕೋರಿ ಧನ್ಯವಾದಗಳು...  (ವಿಡಿಯೋ ಕೃಪೆ : ಫಸ್ಟ್ ಟೈಮ್ ಕನ್ನಡ )