ನಟಿ ರಾಧಿಕಾ ಕುಮಾರಸ್ವಾಮಿಗೆ ಅಪಘಾತ ಏನಾಯಿತು ವಿಡಿಯೋ ವೈರಲ್

By Infoflick Correspondent

Updated:Sunday, July 31, 2022, 21:28[IST]

ನಟಿ ರಾಧಿಕಾ ಕುಮಾರಸ್ವಾಮಿಗೆ ಅಪಘಾತ ಏನಾಯಿತು ವಿಡಿಯೋ ವೈರಲ್

ನಟಿ ರಾಧಿಕಾ ಕುಮಾರಸ್ವಾಮಿ ಅದ್ಬುತ ನೃತ್ಯಗಾರ್ತಿ.ಇವರು ನಟಿಸಿದ ಅಷ್ಟು ಸಿನಿಮಾಗಳು ಭರ್ಜರಿ ಕೆಲೆಕ್ಷನ್ ಮಾಡಿತ್ತು.ನಟನೆಯಿಂದ ದೂರವಿದ್ದರೂ ಸದಾ ಸುದ್ದಿಯಲ್ಲಿರುವ ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಆಗಾಗ ಮನೆಯಲ್ಲೇ ಡ್ಯಾನ್ಸ್ ಮಾಡುತ್ತಿರುತ್ತಾರೆ. ಮೊನ್ನೆ ಡ್ಯಾನ್ಸ್ ಮಾಡುವಾಗ ಸಣ್ಣ ಅಪಘಾತ ಮಾಡಿಕೊಂಡಿದ್ದಾರೆ.


ರಾಧಿಕಾ ಕುಮಾರಸ್ವಾಮಿ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು, ಈ ನೃತ್ಯದಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ. ಡಾನ್ಸ್ ಕ್ಲಾಸಿಗೆ ಹೋಗಿರುವ ರಾಧಿಕಾ, ಮಾಸ್ಟರ್ ಜೊತೆ ಹೊಸ ಹಾಡಿಗೆ ಸ್ಟೆಪ್ ಕಲಿಯಲು ಪ್ರಯತ್ನಿಸಿದ್ದಾರೆ. ಹೀಗೆ ಡಾನ್ಸ್ ಮಾಡುವಾಗ ಬಿದ್ದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ. ಆ ವಿಡಿಯೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಯಕ್ಟೀವ್ ಆಗಿರುತ್ತಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಅಪ್ಡೇಟ್‌ಗಳನ್ನು ಕೊಡುತ್ತಾ ಇರುತ್ತಾರೆ. ಜೊತೆಗೆ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಇದೀಗ ರಾಧಿಕಾ ಅವರು ಡ್ಯಾನ್ಸ್ ಮಾಡುವಾಗ ಆಯ ತಪ್ಪಿ ಬಿದ್ದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.