ಯಾರಿಗೂ ಗೊತ್ತಿರದ ನಟಿ ರಾಧಿಕಾರ ಮೊದಲ ಪತಿ ಯಾರ್ ಗೊತ್ತಾ..? ಇವರೇನಾ ಅಂತೀರಾ ನೋಡಿ

Updated: Monday, October 11, 2021, 13:06 [IST]

ಯಾರಿಗೂ ಗೊತ್ತಿರದ ನಟಿ ರಾಧಿಕಾರ ಮೊದಲ ಪತಿ ಯಾರ್ ಗೊತ್ತಾ..? ಇವರೇನಾ ಅಂತೀರಾ ನೋಡಿ

ಕನ್ನಡ ಸಿನಿಮಾರಂಗದಲ್ಲಿ ಈಗಾಗಲೇ ಎಲ್ಲರಿಗೂ ಚಿರಪರಿಚಿತವಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಿನಿಮಾ ಜೀವನ, ಜೊತೆಗೆ ನಿಜ ಜೀವನ ಹೇಗಿತ್ತು, ನಟಿ ರಾಧಿಕಾ ಕುಮಾರಸ್ವಾಮಿ ಅವರ ಜೀವನದಲ್ಲಿ ಏನೆಲ್ಲಾ ನಡೆದವು, ಮತ್ತು ರಾಧಿಕಾರವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮದುವೆಯಾಗುವ ಮುನ್ನ ಯಾರನ್ನ ಮದುವೆ ಆಗಿದ್ದರು ಗೊತ್ತಾ..? ನಟಿ ರಾಧಿಕಾರ ಮೊದಲ ಪತಿ ಯಾರು ಎಂಬುದನ್ನು ತಿಳಿದುಕೊಳ್ಳೋಣ.

ರಾಧಿಕಾ ಮೂಲತಹ ಕರಾವಳಿಯವರು 1986 ರಲ್ಲಿ ಜನನ ಪಡೆಯುತ್ತಾರೆ. ಡ್ಯಾನ್ಸ್ ನಲ್ಲಿ ಮತ್ತು ನಟನೆಯಲ್ಲಿ ತುಂಬಾ ಇಂಟ್ರೆಸ್ಟ್ ಇದ್ದ ರಾಧಿಕಾ ಅವರು ಕೆಲ ಡ್ಯಾನ್ಸ್ ಸಹ ಕಲಿಯುತ್ತಾರೆ. ಮೊಟ್ಟಮೊದಲ ಬಾರಿಗೆ ರಾಧಿಕಾ 9ನೇ ತರಗತಿ ಓದುತ್ತಿರುವ ಸಮಯದಲ್ಲಿ ನೀಲ ಮೇಘ ಶ್ಯಾಮ ಎನ್ನುವ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ ಕಾಲಿಡುತ್ತಾರ. ನಂತರ ತಮಿಳು ತೆಲುಗು ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ರಾಧಿಕಾ ಅವರು ರತ್ತನ್ ಕುಮಾರ್ ಎನ್ನುವವರನ್ನು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಮದುವೆಯಾಗಿರುತ್ತಾರೆ ಎಂದು ತಿಳಿದುಬಂದಿದೆ..

ಬಳಿಕ ರಾಧಿಕಾ ತಂದೆ ಹಾಗೂ ರತನ್ ಇಬ್ಬರ ನಡುವೆ ಗಲಾಟೆ ನಡೆದು, ಪೊಲೀಸ್ ಠಾಣೆಗೂ ಸಹ ಈ ವಿಚಾರ ಹೋಗಿತ್ತಂತೆ. ಇದಾದ ನಂತರ ರಾಧಿಕಾ ಅವರ ಮೊದಲ ಪತಿ ರತನ್ 2002ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹೌದು ಆಗ ಕೇವಲ ರಾಧಿಕಾ ಅವರಿಗೆ 16 ವರ್ಷ ಇದಾದ ನಂತರ 2006ರಲ್ಲಿ ಕುಮಾರಸ್ವಾಮಿಯವರು ರಾಧಿಕಾ ಅವರನ್ನು ಗುಟ್ಟಾಗಿ ಮೊದಲ ಬಾರಿಗೆ ಮದುವೆಯಾಗುತ್ತಾರೆ ಎಂದು ಕೇಳಿದೆ. ಅನಂತರ 2010ರಲ್ಲಿ ಈ ಮದುವೆ ವಿಷಯ ಹೊರಬಿದ್ದು ರಾಜ್ಯದಲ್ಲಿ ದೊಡ್ಡ ಚರ್ಚೆ ಆಗುತ್ತದೆ.
 
ರಾಧಿಕಾ ಕುಮಾರಸ್ವಾಮಿ ಅವರಿಗೆ ಒಬ್ಬ ಮಗಳು ಸಹ ಇದ್ದು, ಆಕೆ ಶಮಿತಾ ಕುಮಾರಸ್ವಾಮಿ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ವಿಚಾರವಾಗಿ ನಿಖಿಲ್ ಶಮಿತಾ ಕುಮಾರಸ್ವಾಮಿಯವರನ್ನು ನನ್ನ ತಂಗಿ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ ಕೆಲ ವರದಿಗಳು ಸಹ ಕೇಳಿ ಬಂದಿದ್ದವು. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ, ಮತ್ತು ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು..