ರಾಧಿಕಾ ಪಂಡಿತ್ ಹುಟ್ಟುಹಬ್ಬದ ವಿಶೇಷ ದಿನ ಹೀಗಿತ್ತು; ಇವರೆಲ್ಲ ಇಲ್ಲಿದ್ದಾರೆ !

By Infoflick Correspondent

Updated:Wednesday, March 9, 2022, 09:12[IST]

ರಾಧಿಕಾ ಪಂಡಿತ್ ಹುಟ್ಟುಹಬ್ಬದ ವಿಶೇಷ ದಿನ ಹೀಗಿತ್ತು; ಇವರೆಲ್ಲ ಇಲ್ಲಿದ್ದಾರೆ !

ಕನ್ನಡ‌ ಚಿತ್ರರಂಗದಲ್ಲಿ ಮುದ್ದಾದ ನಟಿಯೆಂದೇ ಖ್ಯಾತಿ ಪಡೆದ ರಾಧಿಕಾ ಪಂಡಿತ್  (Radhika Pandit)  ಸೋಮವಾರ (ಮಾರ್ಚ್ 07) ಜನ್ಮದಿನ ಆಚರಿಸಿಕೊಂಡಿದ್ದಾರೆ. ಇವರ ಈ ವಿಶೇಷ ದಿನ ಹೇಗಿತ್ತು? ಬರ್ತಡೆ ಸಂಭ್ರಮದ ಆಚರಣೆ ಹೇಗೆ ಆಚರಿಸಿಕೊಂಡರೆಂಬ ಮಾಹಿತಿ ಇಲ್ಲಿದೆ ನೋಡಿ. 

38ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಾಧಿಕಾ ಪಂಡಿತ್ ಗೆ ಚಿತ್ರರಂಗದ ತಾರೆಗಳು, ಅಭಿಮಾನಿಗಳು ಶುಭಹಾರೈಕೆಯ ಸರಮಾಲೆಯನ್ನೇ ಕಳುಹಿಸಿದ್ದಾರೆ. ಕಳೆದ ವರ್ಷ ಕೊರೊನಾ ಇದ್ದ ಕಾರಣ ಬರ್ತಡೆದಿನ ಅಭಿಮಾನಿಗಳಿಂದ ಆಚರಣೆಗೆ ದೂರ ಉಳಿದ ರಾಧಿಕಾ ಈ ಬಾರಿ ಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡಿ ಜನ್ಮದಿನವನ್ನು ಸಂಭ್ರಮಿಸಿದ್ದಾರೆ.    

ಆದರೆ ರಾಧಿಕಾ ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿರುವ ಫೋಟೋಗಳು ಸದ್ಯ ಎಲ್ಲೆಡೆ  ವೈರಲ್ ಆಗಿವೆ. ಪತಿ ಯಶ್, ಪುತ್ರ ಯಥರ್ವ್ ಹಾಗೂ ಪುತ್ರಿ ಆಯ್ರಾ ಜತೆ ರಾಧಿಕಾ ಪಂಡಿತ್ ಸಂಭ್ರಮದಿಂದ ಜನ್ಮದಿನ ಆಚರಿಸಿಕೊಂಡಿದ್ದಾರೆ.ಯಶ್ ತನ್ನ ನೆಚ್ಚಿನ ಮಡದಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.  ವಿಶೇಷವಾಗಿ, ಗಮನಾರ್ಹವಾಗಿ ಪೋಟೊಗಳಲ್ಲಿ ಕಾಣುವುದು ರಾಧಿಕಾ ಪಂಡಿತ್ ಅವರ ಸ್ನೇಹಿತರ ಬಳಗ, ಅದರಲ್ಲೂ ನಂದಗೋಕುಲ‌ ಧಾರಾವಾಹಿಯ ತಾರಾಗಣ ! 

ಸಿನಿಮಾ ಲೋಕಕ್ಕೆ ಬರುವ ಮೊದಲು ರಾಧಿಕಾ ಪಂಡಿತ್ 'ನಂದ ಗೋಕುಲ' ಧಾರಾವಾಹಿಯಲ್ಲಿ ನಟಿಸಿದ್ದರಿ. ಭಾರೀ ಜನಪ್ರಿಯತೆ ಹೊಂದಿದ್ದ ಈ ಧಾರಾವಾಹಿ ಬಳಗದವರಾದ ನಟಿ ನಂದಿನಿ ಗೌಡ, ವನಿತಾ ಉಮೇಶ್, ಪರಮೇಶ್ ಸಿಎಂ, ಲಕ್ಷ್ಮೀ ಸಿದ್ದಯ್ಯ ಮುಂತಾದವರು ಕುಟುಂಬದವರು ಸೇರಿ ಆಚರಿಸಿದ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ‌ ಕಾರ್ಯಕ್ರಮದ ಸಡಗರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ಜೊತೆ ರಾಧಿಕಾ ಯಶ್ ಆಪ್ತರು ಸೇರಿ ಸಡಗರ ವಾತಾವರಣ ಹೆಚ್ಚಿದೆ. 

ರಾಧಿಕಾ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳಾದರೂ ಸ್ಟಾರ್ ಜೀವನ ನಡೆಸುತ್ತಿದ್ದರೂ ಧಾರಾವಾಹಿ ಗೆಳೆಯರ ಬಳಗದ ಜೊತೆಗಿದ್ದು, ಇವರ ನಿಶ್ಚಿತಾರ್ಥ, ಮದುವೆ, ಆರತಕ್ಷತೆ, ಸೀಮಂತ ಕಾರ್ಯಕ್ರಮ ಸೇರಿ  ಮನೆಯ ಏನೇ ಕಾರ್ಯಕ್ರಮವಾದರೂ ಈ ಸ್ನೇಹ ಬಳಗ ಸದಾ ಯಶ್ ರಾಧಿಕಾ ಜೊತೆಗಿರುವುದು ಅಭಿಮಾನಿಗಳಿಗೆ ಸಂತದ ವಿಚಾರವಾಗಿದೆ.

ರಾಧಿಕಾ ಪಂಡಿತ್ ಹುಟ್ಟುಹಬ್ಬದ ವಿಶೇಷ ದಿನ ಹೀಗಿತ್ತು; ಇವರೆಲ್ಲ ಇಲ್ಲಿದ್ದಾರೆ !ರಾಧಿಕಾ ಪಂಡಿತ್ ಹುಟ್ಟುಹಬ್ಬದ ವಿಶೇಷ ದಿನ ಹೀಗಿತ್ತು; ಇವರೆಲ್ಲ ಇಲ್ಲಿದ್ದಾರೆ !ರಾಧಿಕಾ ಪಂಡಿತ್ ಹುಟ್ಟುಹಬ್ಬದ ವಿಶೇಷ ದಿನ ಹೀಗಿತ್ತು; ಇವರೆಲ್ಲ ಇಲ್ಲಿದ್ದಾರೆ !
ರಾಧಿಕಾ ಪಂಡಿತ್ ಹುಟ್ಟುಹಬ್ಬದ ವಿಶೇಷ ದಿನ ಹೀಗಿತ್ತು; ಇವರೆಲ್ಲ ಇಲ್ಲಿದ್ದಾರೆ !