Radhika Pandit : ಐರಾ ಮತ್ತು ಯಥರ್ವ್ ನ ಕಂಡು ಅಣ್ಣ ತಂಗಿ ಎಂದರೆ ಹೀಗಿರಬೇಕು ಎಂದ ನೆಟ್ಟಿಗರು

By Infoflick Correspondent

Updated:Tuesday, August 16, 2022, 20:05[IST]

Radhika Pandit : ಐರಾ ಮತ್ತು ಯಥರ್ವ್ ನ ಕಂಡು ಅಣ್ಣ ತಂಗಿ ಎಂದರೆ ಹೀಗಿರಬೇಕು ಎಂದ ನೆಟ್ಟಿಗರು

2016ರಲ್ಲಿ ಮದುವೆಯಾದ ರಾಧಿಕಾ ಪಂಡಿತ್ ಮನೆ, ಮಕ್ಕಳು ಅಂತ ತುಂಬಾ ಬ್ಯುಸಿಯಾಗಿಬಿಟ್ಟಿದ್ದಾರೆ. ಸಿನಿಮಾರಂಗದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದಾ ಸಕ್ರಿಯರಾಗಿರುತ್ತಾರೆ. ಸಿನಿಮಾ ಕ್ಷೇತ್ರ ಬಿಟ್ಟು ಸರಿಸುಮಾರು ಐದಾರು ವರ್ಷಗಳೇ ಕಳೆದ್ರೂ, ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಸದಾ ಪಾಸಿಟಿವ್ ವಿಚಾರಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿರುವ ರಾಧಿಕಾ ಪಂಡಿತ್ ಇದುವರೆಗೂ ಮತ್ತೆ ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡುವ ಬಗ್ಗೆ ಮಾತ್ರ ಎಲ್ಲೂ ಆಸೆ ವ್ಯಕ್ತಪಡಿಸಿಲ್ಲ. 

ಇನ್ನು ತಮ್ಮ ಮಕ್ಕಳಾದ ಐರಾ ಹಾಗೂ ಯಥರ್ವ್ ಆಟ, ಪಾಠ, ತುಂಟಾಟಗಳ ಬಗ್ಗೆ ವೀಡಿಯೋ, ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ನಡೆದ ವರಮಹಾಲಕ್ಷ್ಮೀ ಹಬ್ಬಕ್ಕೆ ಕೂಡ ತಮ್ಮ ಮಕ್ಕಳ ಫೋಟೋಗಳನ್ನು ಹಾಕಿದ್ದರು. ಅಲ್ಲದೇ, ರಕ್ಷಾ ಬಂಧನ್ ದಿನ ಐರಾ, ಯಥರ್ವ್ ಗೆ ರಾಖಿ ಕಟ್ಟಿದ್ದಳು. ಜೊತೆಗೆ ಇಬ್ಬರು ಧರಿಸಿದ್ದ ಬಟ್ಟೆ ಕೂಡ ಸೂಪರ್ ಆಗಿತ್ತು. ಇದರ ಫೋಟೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಅಪ್ ಲೋಡ್ ಮಾಡಿ ಸಂಭ್ರಮಿಸಿದ್ದಾರೆ.    

ಈಗಾಗಲೇ ಐರಾ ಹಾಗೂ ಯಥರ್ವ್ ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವಿದೆ. ರಾಧಿಕಾ ನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಏನು ಅಪ್ ಲೋಡ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರರಾಗಿ ನೋಡುತ್ತಿರುತ್ತಾರೆ. ಐರಾ ತಮ್ಮನಿಗೆ ಸ್ವೀಟ್ ತಿನ್ನಿಸಿ, ರಾಖಿ ಕಟ್ಟಿದ್ದು, ಇಬ್ಬರೂ ಒಬ್ಬರಿಗೊಬ್ಬರು ಮುತ್ತು ಕೊಟ್ಟಿದ್ದಾರೆ. ಇದೀಗ ರಾಧಿಕಾ ಪಂಡಿತ್ ಅವರು ಇದರ ಫೋಟೋಗಳು ಅಪ್ ಲೋಡ್ ಮಾಡಿದ್ದಾರೆ. ಅಣ್ಣ – ತಂಗಿ ಎಂದರೆ ಹೀಗಿರಬೇಕು. ಎಂಬಂತೆ ಈ ಪುಟಾಣಿಗಳು ಕಾಣುತ್ತಿದ್ದಾರೆ. ಪ್ರತೀ ವರ್ಷವೂ ರಾಖಿ ಹಬ್ಬದ ದಿನ ಮುದ್ದು ಮುದ್ದಾಗಿ ಕಾಣುವ ಈ ಪುಟಾಣಿಗಳ ಆಟವೇ ಚೆಂದ.