ಹೊಸ ಫ್ರೆಂಡ್ ಜೊತೆ ರಾಧಿಕಾ ಪಂಡಿತ್ ಮಗಳು ಐರಾ ಆಟ ಆಡೋದನ್ನ ನೋಡೋಕೆ ಎರೆಡು ಕಣ್ಣುಗಳು ಸಾಲದು..

Updated: Friday, June 11, 2021, 09:27 [IST]

ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರ್ತಾರೆ. ಮಕ್ಕಳ ಫೋಟೋ, ಯಶ್ ಫೋಟೋಗಳನ್ನ ಹಾಕುತ್ತಾ ಇರುತ್ತಾರೆ. ಇನ್ನು ಇತ್ತಚೆಗಷ್ಟೇ, ಕೊರೊನಾ ಸಂಕಷ್ಟದ ಕುರಿತು ಜನರಿಗೆ ಧೈರ್ಯ ತುಂಬುವ ಮೆಸೆಜ್ ಅನ್ನು ಇನ್ ಸ್ಟಾಗ್ರಾಂ ನಲ್ಲಿ ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದರು. 

ಈ ಕಷ್ಟ ಕಾಲ ಆದಷ್ಟು ಬೇಗ ನಮ್ಮಿಂದ ದೂರ ಸರಿಯುತ್ತದೆ. ಅಲ್ಲಿಯವರೆಗೂ ನಾವೆಲ್ಲರೂ ಧೈರ್ಯದಿಂದ ಮುನ್ನುಗಬೇಕು. ನಾವೆಲ್ಲರೂ ಬಹಳ ನೋವು ಅನುಭವಿಸಿದ್ದೇವೆ. ನಮ್ಮವರನ್ನು ಕಳೆದುಕೊಂಡಿದ್ದೇವೆ. ಹತಾಶರಾಗಿದ್ದೇವೆ. ಇದೆಲ್ಲಾಪರಿಸ್ಥಿತಿಯಿಂದ ಹೊರ ಬರಲು ಇನ್ನು ಹೆಚ್ಚು ಕಾಲ ಬೇಕಿಲ್ಲ. ಯಾರೂ ಕುಗ್ಗಬೇಡಿ. ಇನ್ಮುಂದೆ ಪಾಸಿಟಿವ್ ಪೋಸ್ಟ್ ಗಳನ್ನು ಹಾಕುತ್ತೇನೆ ಎಂದು ಹೇಳಿದ್ದರು.    

ಅದರಂತೆಯೇ ಇದೀಗ ರಾಧೀಕಾ ಪಂಡಿತ್ ಐರಾ ಹೊಸ ಫ್ರಂಡ್ ಗೆ ಹಾಯ್ ಹೇಳುವ ವೀಡಿಯೋವೊಂದನ್ನು ಶೇರ್ ಮಾಡಿದ್ದು, ಹಲವರು ಇದಕ್ಕೆ ಲೈಕ್ ಕಮೆಂಟ್ ಮಾಡಿದ್ದಾರೆ. ಐರಾ ಆಗಷ್ಟೇ ನಡೆಯುವುದನ್ನು ಕಲಿಯುವಾಗ ತನ್ನ ಹೊಸ ಫ್ರೆಂಡ್ ಅನ್ನು ನೋಡಿ ಹಾಯ್ ಹೇಳುತ್ತಾಳೆ. ತನ್ನದೇ ನೆರಳನ್ನೆ ಮತ್ತೊಬ್ಬರು ಎಂದು ತಿಳಿದ ಐರಾ ಖುಷಿಯಿಂದ ಹಾಯ್ ಹೇಳಿದ್ದಾಳೆ. ಈ ವೀಡಿಯೋ ಸಖತ್ ಕ್ಯೂಟ್ ಆಗಿದೆ. 

ಈ ಕ್ಯೂಟ್ ವೀಡಿಯೋವನ್ನು ಶೇರ್ ಮಾಡಿರುವ ರಾಧಿಕಾ ಪಂಡಿತ್, ಆಕೆಯ ಕ್ಯೂಟ್ನೆಸ್ ಬಗ್ಗೆ ಹೇಳಿಕೊಂಡಿದ್ದಾರೆ. ಈಗಾಗಲೇ ಹಲವು ಅಭಿಮಾನಿಗಳನ್ನು ಹೊಂದಿರುವ ಐರಾ ತನ್ನ ತುಂಟಾಟಗಳಿಂದಲೇ ಫೇಮಸ್ ಆಗಿದ್ದಾಳೆ.