Radhika Pandit : ಕಸಿನ್ ಮದುವೆಯಲ್ಲಿ ರಾಧಿಕಾ ಪಂಡಿತ್ ಎಷ್ಟು ಖುಷಿಯಿಂದ ಎಂಟ್ರಿ ಕೊಟ್ಟಿದಾರೆ ನೋಡಿ
Updated:Tuesday, May 17, 2022, 21:31[IST]

ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಾಧಿಕಾ ಪಂಡಿತ್ ಅವರು ಇನ್ ಸ್ಟಾಗ್ರಾಂನಲ್ಲಿ ಯಾವಾಗಲೂ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದರು. ಇದೀಗ ತಮ್ಮ ಸಹೋದರನ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಯಶ್, ರಾಧಿಕಾ ಪಂಡಿತ್, ಯಥರ್ವ್ ಹಾಗೂ ಐರಾ ಮದುವೆ ಮನೆಯಲ್ಲಿ ಎಂಜಾಯ್ ಮಾಡಿದ್ದಾರೆ. ಅಲ್ಲದೇ ತಮ್ಮ ಸಂತೋಷವನ್ನು ಕೂಡ ಹಂಚಿಕೊಂಡಿದ್ದಾರೆ.
ಬಹಳ ದಿನಗಳ ಬಳಿಕ ನಾನು ನನ್ನ ತಾಯಿಯ ಸಹೋದರಿಯರು, ಇತರೆ ಸಂಬಂಧಿಕರನ್ನು ಭೇಟಿ ಮಾಡಿದೆ. ಅವರೊಂದಿಗೆ ಕಳೆದ ಪ್ರತೀ ಕ್ಷಣವೂ ತುಂಬಾ ಖುಷಿಯಾಯ್ತು ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಅಲ್ಲದೇ, ಈ ಮದುವೆ ಮುಂಬೈನಲ್ಲಿ ನಡೆದಿದ್ದು, ಯಶ್, ರಾಧಿಕಾ ಹಾಗೂ ಮಕ್ಕಳು ಫ್ಲೈಟ್ ನಲ್ಲಿ ಟ್ರಾವೆಲ್ ಮಾಡಿದ್ದಾರೆ. ಇದರ ಫೋಟೋಗಳನ್ನು ಕೂಡ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಇನ್ನು ಮದುವೆ ಮನೆಯಲ್ಲಿ ಯಶ್ ಕಪ್ಪು ಕುರ್ತಾ ಧರಿಸಿದ್ದು, ರಾಧಿಕಾ ಅವರು ಹಸಿರು ಹಾಗೂ ಹಳದಿ ಮಿಶ್ರಿತ ಬಟ್ಟೆಯನ್ನು ತೊಟ್ಟಿದ್ದು. ಅದು ಭಾರತೀಯ ನಾರಿಯ ಸಾಂಪ್ರದಾಯಿಕ ಉಡುಪನ್ನು ನೆನಪಿಸುತ್ತೆ. ಯಥರ್ವ್ ಹಾಗೂ ಐರಾ ಹಳದಿ ಉಡುಗೆಯಲ್ಲಿ ಮಿಂಚಿದ್ದಾರೆ. ಮತ್ತು ಯಶ್ ಮದು ಮಗನಿಗೆ ನನ್ನ ಹಾಗೆ ಗಡ್ಡ ಬೆಳೆಸು ಎಂದು ಹೇಳುವಂತಿದೆ
ಸಿನಿಮಾ ಕ್ಷೇತ್ರ ಬಿಟ್ಟು ಸರಿಸುಮಾರು 6 ವರ್ಷಗಳೇ ಕಳೆದ್ರೂ, ಅಭಿಮಾನಿಗಳೊಂದಿಗಿನ ಸಂಪರ್ಕವನ್ನು ಮಾತ್ರ ದೂರ ಮಾಡಿಕೊಂಡಿಲ್ಲ. ಸದಾ ಪಾಸಿಟಿವ್ ವಿಚಾರಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿರುವ ರಾಧಿಕಾ ಪಂಡಿತ್, ಇದುವರೆಗೂ ಮತ್ತೆ ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡುವ ಬಗ್ಗೆ ಮಾತ್ರ ಎಲ್ಲೂ ಆಸೆ ವ್ಯಕ್ತಪಡಿಸಿಲ್ಲ. ರಾಧಿಕಾ ನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಏನು ಅಪ್ ಲೋಡ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರರಾಗಿ ನೋಡುತ್ತಿರುತ್ತಾರೆ. ಈಗಾಗಲೇ ಐರಾ ಹಾಗೂ ಯಥರ್ವ್ ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವಿದೆ. ( video credit : namma KFI )