Radhika Pandit : ರಾಧಿಕಾ ಪಂಡಿತ್ ತಮ್ಮ ಫ್ಯಾಮಿಲಿ ಜೊತೆಗೆ ಎಲ್ಲಿಗೆ ಹೋಗಿದ್ದಾರೆ ಗೊತ್ತಾ..??
Updated:Thursday, June 9, 2022, 20:20[IST]

ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಾಧಿಕಾ ಪಂಡಿತ್ ಅವರು ಇನ್ ಸ್ಟಾಗ್ರಾಂನಲ್ಲಿ ಯಾವಾಗಲೂ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ . ಇದೀಗ ತಮ್ಮ ಕುಟುಂಬದ ಜೊತೆಗೆ ಹೊರಗಡೆ ಹೋಗಿದ್ದು, ಮಸ್ತ್ ಮಜಾ ಮಾಡಿದ್ದಾರೆ. ಅಲ್ಲಿನ ಫೋಟೋಗಳನ್ನು ಕೂಡ ಶೇರ್ ಮಾಡಿರುವ ರಾಧಿಕಾ ಪಂಡಿತ್, ಯಾವ ಸ್ಥಳ ಎಂಬುದನ್ನು ಮಾತ್ರ ಸೀಕ್ರೆಟ್ ಆಗಿ ಇಟ್ಟಿದ್ದಾರೆ. ಪತಿ ಯಶ್, ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆಗೆ ರಾಧಿಕಾ ಪಂಡಿತ್ ಅವರು ಮಜಾ ಮಾಡುತ್ತಿದ್ದಾರೆ.
ಕೆಜಿಎಫ್ ಚಿತ್ರದ ನಿಮಿತ್ತ ಯಶ್ ಅವರು ಕೊಂಚ ಬ್ಯುಸಿ ಇದ್ದರು. ಹಾಗಾಗಿ ಮಕ್ಕಳ ಜೊತೆಗೆ ಹೊರಗಡೆ ಎಲ್ಲೂ ಹೆಚ್ಚಾಗಿ ಓಡಾಡುತ್ತಿರಲಿಲ್ಲ. ಇದರ ಜೊತೆಗೆ ಕೋವಿಡ್ ಇದ್ದಿದ್ದರಿಂದ ಮಕ್ಕಳನ್ನು ಹೊರಗೆ ಕರೆದುಕೊಂಡು ಬರುತ್ತಿರಲಿಲ್ಲ . ಈಗ ಯಶ್ ಅವರು ಸಖತ್ ಫ್ರೀಯಾಗಿದ್ದು, ಕುಟುಂಬದ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಸಂಬಂದಿಕರ ಮದುವೆ, ಹುಟ್ಟುಹಬ್ಬ, ಪಾರ್ಟಿ ಅಂತೆಲ್ಲಾ ಪತ್ನಿ ಹಾಗೂ ಮಕ್ಕಳೊಂದಿಗೆ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ. ಇನ್ನು ಇದೀಗ ಈ ಕುಟುಂಬ ಬೆಂಗಳೂರಿನಿಂದ ಹೊರಗೆ ಹೋಗಿದ್ದಾರೆ.
ಮಕ್ಕಳು ಕೂಡ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಗಿಳಿಗಳಿರುವ ಸ್ಥಳಕ್ಕೆ ತೆರಳಿದ್ದು, ಮಕ್ಕಳನ್ನು ಇದೇ ಮೊದಲ ಬಾರಿಗೆ ಕರೆದುಕೊಂಡು ಬಂದಿರುವುದು ಎಂದು ರಾಧಿಕಾ ಪಂಡಿತ್ ಫೆಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ತಾವು ಯಾವ ಸ್ಥಳಕ್ಕೆ ಹೋಗಿರುವುದು ಎಂಬುದನ್ನು ಮಾತ್ರ ಗುಟ್ಟಾಗಿ ಇಟ್ಟಿದ್ದಾರೆ. ಸ್ಥಳದ ಬಗ್ಗೆ ತಿಳಿಯಲು ಕಾಯಿರಿ ಎಂದು ರಾಧಿಕಾ ಪಂಡಿತ್ ಅವರು ಹೇಳಿದ್ದಾರೆ. ಇನ್ನು ಈ ಪೋಸ್ಟ್ ಗೆ ಕಮೆಂಟ್ ಮಾಡಿರುವ ಕೆಲವರು ಮೈಸೂರಿನ ಶುಕವನ ಎಂದು ಹೇಳಿದ್ದಾರೆ.




