Radhika Pandit : ಯಶ್ ಬಳಿ ಏನೂ ಇಲ್ಲದಿದ್ದ ವೇಳೆಯೇ ಯಶ್ ನ ಪ್ರೀತಿ ಮಾಡಿದ್ದ ರಾಧಿಕಾ..! ಮಾಡಿದ ತ್ಯಾಗ ಎಂಥದ್ದು ಗೊತ್ತೇ
Updated:Saturday, May 21, 2022, 21:59[IST]

ಜೀವನದಲ್ಲಿ ಎಲ್ಲವೂ ಸರಿ ಇದ್ದಾಗ, ಮನುಷ್ಯ ತಾನು ಅಂದುಕೊಂಡ ಜೀವನ ನಡೆಸುತ್ತಿದ್ದಾಗ, ಅವನ ಬಳಿ ಹಣ ಐಶ್ವರ್ಯ ರೂಪ ಎಲ್ಲವೂ ಇದ್ದಾಗ ಸಹಜವಾಗಿಯೇ ಜನರು ಹತ್ತಿರ ಬರುವುದು, ಪ್ರೀತಿ ಸ್ನೇಹ ತೋರುವುದು, ಆತ್ಮೀಯತೆಯಿಂದ ನಡೆದುಕೊಳ್ಳುವುದು, ಇದೇನು ಅಂತ ಹೇಳಿಕೊಳ್ಳುವ ಮಟ್ಟಕ್ಕೆ ವಿಶೇಷತೆ ಆಗಿರುವುದಿಲ್ಲ. ಇದು ಕಾಮನ್. ಆದರೆ ಒಬ್ಬ ಮನುಷ್ಯನ ಬಳಿ ಏನು ಇಲ್ಲದೆ ಇದ್ದಾಗ ಅವನಿಗೆ ಪ್ರೀತಿ ತೋರುವುದು, ಅವನ ಸ್ನೇಹ ಬೆಳೆಸಿ ಆತ್ಮೀಯತೆಯಿಂದ ಇರುವುದು ಇದು ಒಂದು ವಿಶಿಷ್ಟವಾದ ವಿಶೇಷತೆ ಎಂದು ಹೇಳಬಹುದು. ಹೌದು ನಟಿ ರಾಧಿಕಾ ಪಂಡಿತ್ ಅವರು ನಟ ಯಶ್ ಅವರನ್ನು ಹಾಗೆಯೆ ಪ್ರೀತಿ ಮಾಡಿದ್ದು, ಯಶ್ ಅವರ ಬಳಿ ಏನು ಇಲ್ಲದ ವೇಳೆಯೇ ಆತ್ಮೀಯತೆ ಪ್ರೀತಿಯಿಂದ ಅವರನ್ನು ಪ್ರೀತಿಸಿದ್ದು ಎಂದು ಕೇಳಿ ಬಂದಿದೆ.
ಹೌದು ಇವರಿಬ್ಬರ ಪ್ರೀತಿ ಅಸಲಿಗೆ ಯಾವಾಗ ಆಯಿತು ಗೊತ್ತಾ..? ಅದಕ್ಕಿಂತ ಮುಂಚೆ ಯಶ್ ಬಗ್ಗೆ ಹೇಳೋದು ಆದ್ರೆ, ಇದೀಗ ಹಂತಹಂತವಾಗಿ ಬೆಳೆದು ವಿಶ್ವಮಟ್ಟದಲ್ಲಿ ಕೆಜಿಎಫ್ ಮೂಲಕ ಸದ್ದು ಮಾಡುತ್ತಿದ್ದಾರೆ ನಟ ಯಶ್. ಅವರು ಆರಂಭದ ದಿನಗಳಲ್ಲಿ ತುಂಬಾನೇ ಕಷ್ಟ ಪಟ್ಟ ನಟ. ಹಾಗೆ ಸೀರಿಯಲ್ ಮೂಲಕ ಹಂತಹಂತವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾ, ಬಣ್ಣದ ಲೋಕದಲ್ಲಿ ಬೆಳೆದು ಹಿಟ್ ಮೇಲೆ ಹಿಟ್ ಸಿನಿಮಾ ನೀಡಿ, ಇಂದು ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಹೌದು ರಾಧಿಕಾ ಪಂಡಿತ್ ಮತ್ತು ನಟ ಯಶ್ ಅವರ ಲವ್ ಸ್ಟೋರಿ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ರಾಧಿಕಾ ಪಂಡಿತ್ ಮತ್ತು ನಟ ಯಶ್ ಅವರು ಬಣ್ಣದ ಜೀವನ ಆರಂಭಿಸಿದ್ದು ಒಟ್ಟಿಗೆನೆ. ನಂದಗೋಕುಲ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದ ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಮೊದಲ ಬೇಟಿ.
ಅಲ್ಲಿಯೇ ಇಬ್ಬರ ನಡುವೆ ಸ್ನೇಹ ಚಿಗುರಿತ್ತು. ನಂತರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರ ನಡುವೆ ಒಳ್ಳೆಯ ಒಡನಾಟ ಇತ್ತು. ಆದರೆ ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದು ಯಶ್. ಹೌದು ಡ್ರಾಮಾ ಸಿನಿಮಾದ ಸಂದರ್ಭದಲ್ಲಿ ಯಶ್ ರಾಧಿಕಾ ಅವರಿಗೆ ಮೊದಲು ಪ್ರೊಪೋಸ್ ಮಾಡಿದ್ದರಂತೆ. ಹೌದು ಆಗ ನಟಿ ರಾಧಿಕಾ ಪಂಡಿತ್ ಅವರು ಯಾವ ಕಾಂಟ್ರವರ್ಸಿ ಮಾಡಿಕೊಳ್ಳದೆ ಸಿನಿಮಾರಂಗದಲ್ಲಿ ಒಂದು ಕಪ್ಪು ಮಾರ್ಕ್ ಇಲ್ಲದೇನೆ ಬೆಳೆಯುತ್ತಿದ್ದರು. ಹಾಗೆ ರಾಧಿಕಾ ಪಂಡಿತ್ ಅವರ ಕುಟುಂಬ ವೆಲ್ ಸೆಟಲ್ ಕುಟುಂಬ ಆಗಿತ್ತು. ಹಣ ಎಲ್ಲವೂ ಇತ್ತಂತೆ. ಹೌದು ನಟ ಯಶ್ ಪ್ರಪೋಸ್ ಗೆ ಒಟ್ಟು 6 ತಿಂಗಳ ಸಮಯ ತೆಗೆದುಕೊಂಡು ನಿರ್ಧಾರ ತಿಳಿಸಿದ್ದರು ರಾಧಿಕಾ ಎನ್ನಲಾಗಿದೆ. ನಂತರ ಮನೆಯವರಿಗೆ ವಿಷಯ ಗೊತ್ತಾಗಿ, ಪರಸ್ಪರ ಪ್ರೀತಿ ಮಾಡುತ್ತಿದ್ದವರು ಮದುವೆಯಾದರು..
ಇದೆಲ್ಲದರ ನಡುವೆ ನಟಿ ರಾಧಿಕಾ ಪಂಡಿತ್ ಮಾಡಿದ ತ್ಯಾಗ ಎಂಥದ್ದು ಗೊತ್ತಾ.? ರಾಧಿಕಾ ಪಂಡಿತ್ ಅವರು ಮಕ್ಕಳ ಆರೈಕೆಯಲ್ಲಿಯೇ ಈಗ ಬಿಜಿಯಾಗಿದ್ದಾರೆ. ಪತಿಯ ಹಿಂದೆ ನಿಂತುಕೊಂಡು ಎಲ್ಲ ಕೆಲಸಗಳನ್ನು ನೋಡಿಕೊಂಡು ನಟಿ ರಾಧಿಕ ಪಂಡಿತ್ ಹೋಗುತ್ತಿದ್ದಾರೆ. ಮದುವೆಯ ವೇಳೆ ನಟಿ ರಾಧಿಕಾ ಪಂಡಿತ್ ನಂಬರ್ ಒನ್ ನಟಿ ಆಗಿದ್ದರು. ಬಣ್ಣದ ಲೋಕದಲ್ಲಿ ಇನ್ನೂ ಮಿಂಚಬೇಕು ಎಂಬ ಆಸೆ ಹೊಂದಿದ್ದರು. ಆದರೆ ಮದುವೆ ಆಗುತ್ತಿದ್ದಂತೆಯೇ ಸಿನಿಮಾರಂಗದಿಂದ ತುಂಬಾನೇ ದೂರವುಳಿದು ಯಶ್ ಅವರಿಗಾಗಿ ಈ ಎಲ್ಲಾ ತ್ಯಾಗ ಮಾಡಿದ್ದಾರೆ ರಾಧಿಕಾ ಎನ್ನಲಾಗುತ್ತಿದೆ. ಹೌದು ಅವರ ಮಕ್ಕಳನ್ನು ನೋಡಿಕೊಂಡು, ಯಶ್ ಆಗುಹೋಗುಗಳನ್ನು ನೋಡಿಕೊಂಡು, ರಾಧಿಕಾ ಅವರು ಜೀವನ ನಡೆಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಶ್ ರಾಧಿಕಾ ಪಂಡಿತ್ ಜೋಡಿ ಲವ್ ಮಾಡಿ ಮದುವೆಯಾಗಿ ಇದೀಗ ಯಶಸ್ವಿ ಜೀವನ ಸಾಗಿಸುತ್ತಿರುವುದು ಎಲ್ಲರಿಗೂ ಮಾದರಿಯೇ ಸರಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ. ಹಾಗೆ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ