Radhika Pandit : ಕೆಜಿಎಫ್ 2 ನೋಡಿದ ರಾಧಿಕಾ ಪಂಡಿತ್ ಮಾಡಿದ್ದೇನು..? ಫಸ್ಟ್ ರಿಯಾಕ್ಷನ್ ಹೀಗಿತ್ತು ನೋಡಿ..!
Updated:Monday, May 2, 2022, 16:02[IST]

ಕೆಜಿಎಫ್ ಸಿನಿಮಾ ಕೇವಲ ಕನ್ನಡದ ಒಂದು ಸಿನಿಮಾ ಅಲ್ಲ ಬದಲಿಗೆ ಕನ್ನಡದ ಬೆಲೆಬಾಳುವ ದೊಡ್ಡ ಗೋಲ್ಡನ್ ಸಿನಿಮಾ ಎಂದು ಹೇಳಬಹುದು.ಇಡೀ ವಿಶ್ವವೇ ಕನ್ನಡಿಗರ ಶಕ್ತಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೆಜಿಎಫ್ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಹೌದು ಕನ್ನಡ ಸಿನಿಮಾರಂಗ ಅಂದ ತಕ್ಷಣ ಬೇರೆ ಸಿನಿಮಾ ಪ್ರಿಯರು ತುಂಬಾ ಸಣ್ಣದಾಗಿ ಮಾತನಾಡುತ್ತಾ ಅವರ ಸಿನಿಮಾ ಇಂಡಸ್ಟ್ರಿಯ ಬಗ್ಗೆ ಕೊಂಡಾಡುತ್ತಿದ್ದರು. ಅದು ಇದೀಗ ಬದಲಾಗಿದೆ. ಕನ್ನಡ ಸಿನಿಮಾ ಗತ್ತು, ತಾಕತ್ತು ಎಲ್ಲರಿಗೂ ಗೊತ್ತಾಗಿ ಇಡಿ ವಿಶ್ವವೇ ಕನ್ನಡ ಸಿನಿಮಾರಂಗದ ಶಕ್ತಿ ನೋಡಿ ಬೆರಗಾಗಿದ್ದಾರೆ. ಹೌದು ಸಿನಿಮಾ ಮಾಡಿದರೆ ಕನ್ನಡ ಸಿನಿಮಾರಂಗದವರ ಹಾಗೇನೇ ಮಾಡಬೇಕು ಎಂದು ಕೆಜಿಎಫ್ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ.
ಹೀಗಿರುವಾಗ ನಟ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಕೂಡ ಗೋವಾದಲ್ಲಿ ಅವರ ಕುಟುಂಬದ ಜೊತೆ ನಮ್ಮ ಕೆಜಿಎಫ್ 2 ಸಿನಿಮಾ ನೋಡಿದ್ದಾರೆ. ಹೌದು ಭಾಗ ಎರಡರಲ್ಲಿ ರಾಕಿಬಾಯ್ ಅಭಿನಯ ನೋಡಿ ರಾಧಿಕಾ ಸಹ ಫಿದಾ ಆಗಿದ್ದಾರೆ ಎನ್ನಲಾಗಿದೆ. ಕೆಜಿಎಫ್ 2 ಸಿನಿಮಾ ಬಿಡುಗಡೆಯಾದ 15 ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್ ಗಡಿ ದಾಟಿದ್ದು ಈಗಲೂ ಕೂಡ ಥಿಯೇಟರ್ನಲ್ಲಿ ಅದರ ಆರ್ಭಟ ಮುಂದುವರೆಸಿದೆ ಎನ್ನಲಾಗಿದೆ. ಹೌದು ನಟ ರಾಕಿಂಗ್ ಸ್ಟಾರ್ ಯಶ್ ಅವರ ಹೆಂಡ್ತಿ ರಾಧಿಕಾ ಪಂಡಿತ್ ಸಿನಿಮಾ ನೋಡಿ ಹೊರಗಡೆ ಬಂದು ಯಶ್ ಪೋಸ್ಟರ್ ಬಳಿ ಅವರ ಹಾಗೇನೇ ಪೋಸ್ ನೀಡಿ ರಿಯಾಕ್ಷನ್ ಕೊಟ್ಟಿದ್ದಾರೆ.
ಹೌದು ಕೆಜಿಎಫ್ ನೋಡಿದ ರಾಧಿಕಾ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಎಂದಿದ್ದಾರೆ. ಹಾಗೆ ಯಶ್ ರಾಕಿ ಭಾಯ್ ಅಭಿನಯಕ್ಕೆ ಫಿದಾ ಆಗಿದ್ದಾರೆ ಎಂದು ಕೇಳಿ ಬರುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ. ಹಾಗೆ ಕೆಜಿಎಫ್ 2 ಹೆಮ್ಮೆಯ ಕನ್ನಡದ ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...(video credit : asli suddi )