ಇನ್ನೂ ನನ್ನ ಕೈಯಲ್ಲಿ ಆಗೊಲ್ಲ, ಅಪ್ಪು ಜಾಗಕ್ಕೆ ಹೋಗ್ತೀನಿ ಎಂದ ರಾಘಣ್ಣ..! ರಾಗಣ್ಣನ ಮಾತಿಗೆ ಶಿವಣ್ಣ ಕಣ್ಣಿರು

By Infoflick Correspondent

Updated:Monday, March 14, 2022, 19:17[IST]

ಇನ್ನೂ ನನ್ನ ಕೈಯಲ್ಲಿ ಆಗೊಲ್ಲ, ಅಪ್ಪು ಜಾಗಕ್ಕೆ ಹೋಗ್ತೀನಿ ಎಂದ ರಾಘಣ್ಣ..! ರಾಗಣ್ಣನ ಮಾತಿಗೆ ಶಿವಣ್ಣ ಕಣ್ಣಿರು

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್  (Puneeth Raj Kumar)  ಅವರ ಕೊನೆಯ ಚಿತ್ರ ಜೇಮ್ಸ್ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯಿತು. ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಖ್ಯಾತ ತೆಲುಗು ನಟರು ಹಾಗೂ ಚಿತ್ರದ  ಕಲಾವಿದರು ಆಗಮಿಸಿದ್ದರು. ಶಿವಣ್ಣ, ರಾಘಣ್ಣ, ಇಡೀ ರಾಜ್ ಕುಟುಂಬ ನಿನ್ನೆ ಫ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಜೇಮ್ಸ್ ಚಿತ್ರತಂಡದ ಪ್ರತಿಯೊಬ್ಬರೂ ಸಹ ಹೆಚ್ಚು ನೋವಿನಲ್ಲೇ ಕಾರ್ಯಕ್ರಮ ಮಾಡಿದರು. ಹೌದು ಇದೆ ವೇದಿಕೆ ಮೇಲೆ ಮಾತನಾಡಿದ ರಾಘಣ್ಣ,  (Raghavendra Rajkumar) ಇನ್ನೂ ನನ್ನ ಕೈಯಲ್ಲಿ ಆಗುವುದಿಲ್ಲ, ಅಪ್ಪುವನ್ನ ನಾನು ಹುಡುಕಿಕೊಂಡು ಹೋಗುತ್ತೇನೆ. ಅವನಿರುವಲ್ಲಿಗೆ ಹೋಗುತ್ತೇನೆ. 

ಇನ್ನೇನು ಹೇಳಲಿ, ನೀವೆಲ್ಲ ಪುಣ್ಯವಂತರು, ಜೇಮ್ಸ್ ಚಿತ್ರದ ಶೂಟಿಂಗ್ ವೇಳೆ ಮೂರ್ನಾಲ್ಕು ತಿಂಗಳು ನನ್ನ ತಮ್ಮ ಅಪ್ಪು ಜೊತೆ ನೀವು ಸಮಯ ಕಳೆದಿರಿ. ನನಗೆ ತುಂಬ ಹೊಟ್ಟೆಕಿಚ್ಚು ಆಗುತ್ತದೆ. ನಾನು ಕೂಡ ಅಪ್ಪು ಜೊತೆ ಆ ಮೂರ್ನಾಲ್ಕು ತಿಂಗಳು ಇರಬಹುದಿತ್ತಲ್ಲ ಎಂದೆನಿಸುತ್ತದೆ. ನೀವೆಲ್ಲ ನಿಜಕ್ಕೂ ಪುಣ್ಯವಂತರು. ನನ್ನ ಕೈಯಲ್ಲಿ ಆಗುವುದಿಲ್ಲ ನಾನು ಕೂಡ ಹೋಗಿಬಿಡುತ್ತೇನೆ ಎಂದು ಭಾವುಕರಾದರು ರಾಘಣ್ಣ. ಈ ಮಾತಿಗೆ ಶಿವಣ್ಣ ವೇದಿಕೆ ಮುಂಭಾಗದಲ್ಲಿ ಕುಳಿತು ಬಿಕ್ಕಿಬಿಕ್ಕಿ ಕಣ್ಣೀರು ಹಾಕುತ್ತಿದ್ದರು. ಈ ದೃಶ್ಯ ಎಂತಹವರಿಗಾದರೂ ಒಂದು ಕ್ಷಣ ಎದೆ ಜಲ್ಲೆಂದು ಕಣ್ಣೀರು ತರಿಸುವಂತೆ ಎಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಶಿವಣ್ಣ ಸಣ್ಣ ಮಕ್ಕಳ ರೀತಿ ಅಳುವ ದೃಶ್ಯ ಅವರ ತಮ್ಮನ ಕಳೆದುಕೊಂಡಂತಹ ನೋವು  ಎಷ್ಟರಮಟ್ಟಿಗೆ ಇರಬಹುದು ಎಂಬುದಾಗಿ ತಿಳಿಯುತ್ತದೆ. 

ದೇವರು ಅಪ್ಪು ಅವರ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಹಾರೈಸೋಣ. ಹೌದು ರಾಘಣ್ಣನ ಮಾತಿಗೆ ಶಿವಣ್ಣ ಕಣ್ಣೀರು ಹಾಕಿದ ಆ ವಿಡಿಯೋ ನಿಜಕ್ಕೂ ನಿಮಗೂ ಸಹ ಕಣ್ಣೀರು ತರಿಸುತ್ತದೆ. ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ನ ಎಲ್ಲರೂ ಥೇಟರಿಗೆ ಹೋಗಿ ವೀಕ್ಷಿಸಿ. ಪುನೀತ್ ಅವರನ್ನು ಕೊನೆಯಬಾರಿ ತೆರೆ ಮೇಲೆ ಕಣ್ತುಂಬಿಕೊಳ್ಳೋಣ ಧನ್ಯವಾದಗಳು...(Video credit : tv 9 kannada )