Raghavendra Rajkumar : ರಾಘಣ್ಣನಿಗೆ ಸ್ಟ್ರೋಕ್ ಆದಾಗ ಜಿಮ್ನಲ್ಲಿ ಸಹಾಯ ಮಾಡಿದ ಆ ಮಹಿಳೆ ಯಾರು ಗೊತ್ತಾ..? ಇಲ್ನೋಡಿ

By Infoflick Correspondent

Updated:Monday, June 6, 2022, 16:06[IST]

Raghavendra Rajkumar : ರಾಘಣ್ಣನಿಗೆ ಸ್ಟ್ರೋಕ್ ಆದಾಗ ಜಿಮ್ನಲ್ಲಿ ಸಹಾಯ ಮಾಡಿದ ಆ ಮಹಿಳೆ ಯಾರು ಗೊತ್ತಾ..? ಇಲ್ನೋಡಿ

ಕನ್ನಡ ಚಿತ್ರರಂಗದ ವರನಟ ಡಾಕ್ಟರ್ ರಾಜಕುಮಾರ್ ಅವರ ಮಗನಾಗಿ ಹುಟ್ಟಿದ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡಾ ಚಿತ್ರರಂಗದಲ್ಲಿ ನಟಿಸಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಎಂದು ಹೇಳಬಹುದು. ಆದರೆ ಇವರ ನಿಜ ಜೀವನದಲ್ಲಿ ಆರೋಗ್ಯ ಸಮಸ್ಯೆಯಿಂದ ಚಿತ್ರರಂಗದ ಮೊದಲ ಇನಿಂಗ್ಸ್ ಮುಗಿಸುವ ಹಂತಕ್ಕೆನೆ ಚಿತ್ರರಂಗದಿಂದ ದೂರವಾದವರು. ಈಗೀಗ ಮತ್ತೆ ಪೋಷಕ ಪಾತ್ರಗಳಲ್ಲಿ ನಟ ರಾಘವೇಂದ್ರ ರಾಜಕುಮಾರ್ ಅವರು ಅಭಿನಯ ಮಾಡುತ್ತಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರಿಗೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕೆಲ ಪ್ರಶ್ನೆಗಳನ್ನು ಮಾಡಲಾಗಿತ್ತು. ನಿಮ್ಮ ಎರಡನೇ ಇನ್ನಿಂಗ್ಸ್ ಆರಂಭ ಮಾಡುವ ಹಂತದಲ್ಲಿ ಕೆಲವು ಪ್ರಮುಖ ವ್ಯಕ್ತಿಗಳ ನೆನೆಸಿದ್ದರೆ,  ಅವರ ಬಗ್ಗೆ ಹೇಳುವುದಾದರೆ ಎಂದು ಪ್ರಶ್ನೆ ಮಾಡಲಾಗಿತ್ತು.

ಆಗ ರಾಘಣ್ಣ ಅವರು, ನೋಡಮ್ಮ ನಿಮಗೆಲ್ಲಾ ಮೊದಲೇ ಗೊತ್ತಿರುವಂತೆ ನನಗೆ ಸ್ಟ್ರೋಕ್ ಸಮಸ್ಯೆ ಆಗಿತ್ತು. ಜಿಮ್ ಮಾಡುವಾಗ ನನಗೆ ಸ್ಟ್ರೋಕ್ ಆಯಿತು. ಎಡಗಡೆಯ ಭಾಗ ಪೂರ್ತಿ ಕೆಲ್ಸ ಮಾಡುತ್ತಿರಲಿಲ್ಲ. ಆಗ 2013. ನಮ್ಮ ತಾಯಿ ಇನ್ನೂ ಇದ್ದರು. ನೋಡಿ ತಾಯಿ ಯಾವ ರೂಪದಲ್ಲೆಲ್ಲಾ ಬರುತ್ತಾರೆ ಎಂದು. ಅಂದು ಜಿಮ್ ಮಾಡುವ ವೇಳೆ ರೇಖಾ ಎನ್ನುವ ಅಲ್ಲೇ ಇದ್ದ ಒಬ್ಬ ಮಹಿಳೆ, ಸ್ಟ್ರೋಕ್ ಆದಾಗ ನನ್ನನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ರೇಖಾ ಅವರು ಅಂದು ಸರಿಯಾದ ಸಮಯಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ನಾನು ಈಗ ಹೀಗಿದ್ದೇನೆ. ಇಲ್ಲ ಅಂದ್ರೆ ತೀರಾ ಕಷ್ಟವಾಗುತ್ತಿತ್ತು. ಆ ಘಟನೆ ನಡೆದಾಗ ಎದ್ದೇಳಲಾಗುತ್ತಿರಲಿಲ್ಲ, ಕೂರಲಾಗುತ್ತಿಲ್ಲ, ನನ್ನ ಜೀವನವೆ ಮುಗಿದುಹೋಯಿತು ಎಂದೆನಿಸಿ ಕೊನೆ ದಿನಗಳನ್ನ ನಾನು ನೋಡುವಂತೆ ಅನಿಸಿತ್ತಿತ್ತು.    

ಆದರೆ ದೇವರು ನನಗೆ ಮತ್ತೆ ಇನ್ನೊಬ್ಬರಿಗೆ ಸ್ಫೂರ್ತಿಯನ್ನು ತುಂಬುವಂತೆ ಮತ್ತೊಂದು ಅವಕಾಶ ಕೊಟ್ಟ. ಜೀವನದಲ್ಲಿ ಒಂದು ಸಮಸ್ಯೆ ಮನುಷ್ಯನಿಗೆ ಬಂದಾಗ, ನನ್ನ ಜೀವನ ಮುಗಿದು ಹೋಯಿತು ಎಂಬ ಹಂತದಲ್ಲಿರುವವರಿಗೆ ನಾನು ಸ್ಫೂರ್ತಿ ಆಗುವಂತೆ ಮತ್ತೆ ನಾನು ಆರೋಗ್ಯ ಸಮಸ್ಯೆಯಿಂದ ಹೊರಬಂದೆ. ನಮ್ಮ ಕುಟುಂಬದವರು, ಎಲ್ಲಾ ವೈದ್ಯರು, ಹಾಗೆ ಫಿಜಿಯೋಥೆರಫಿ ಡಾಕ್ಟರ್ ಕೂಡ ನನಗೆ ಪ್ರೋತ್ಸಾಹ ನೀಡಿದರು. ನಾನು ಈಗ ಮತ್ತೆ ಓಡಾಡುತ್ತಿದ್ದೇನೆ. ಹೌದು ಇದಕ್ಕೆಲ್ಲಾ ಕಾರಣ ಅಂದರೆ ಅಂದಿನ ಜಿಮ್ ನಲ್ಲಿಯ ರೇಖಾ ಎಂಬ ಮಹಿಳೆ ಎಂದು ರಾಘಣ್ಣ ಅವರು ಭಾವುಕರಾದರು. ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ನೋಡಿ ವಿಡಿಯೋ. ಅಸಲಿಗೆ ರೇಖಾ ಎನ್ನುವವರು ಯಾರು ಎಂಬುದಾಗಿ ಇಲ್ಲಿ ನೋಡಿ ನೀವೂ ತಿಳಿದುಕೊಳ್ಳುವ ಮೂಲಕ ವಿಡಿಯೋ ನಿಮಗೂ ಸಹ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು.. ( video credit : kasturi news 24 )