Darshan : ದರ್ಶನ್ ಬಗ್ಗೆ ರಾಘಣ್ಣ ಹೇಳಿದ್ದೇನು ? ದರ್ಶನ್ ಅಪ್ಪು ಸ್ನೇಹ ಎಂಥದ್ದು ? ವಿವಾದದ ಬಗ್ಗೆ ರಾಘಣ್ಣ ಮಾತು !

By Infoflick Correspondent

Updated:Thursday, August 18, 2022, 15:50[IST]

Darshan : ದರ್ಶನ್ ಬಗ್ಗೆ ರಾಘಣ್ಣ ಹೇಳಿದ್ದೇನು ? ದರ್ಶನ್ ಅಪ್ಪು ಸ್ನೇಹ ಎಂಥದ್ದು ? ವಿವಾದದ ಬಗ್ಗೆ ರಾಘಣ್ಣ ಮಾತು !

ಸ್ಯಾಂಡಲ್​​ವುಡ್​​ನಲ್ಲಿ ಸ್ಟಾರ್​​​ಗಳ ಫ್ಯಾನ್ಸ್​​​ ವಾರ್​​​ ಪ್ರತಿದಿನವೂ ನಡೆಯುತ್ತಲೇ ಇದೆ. ಇಷ್ಟು ವರ್ಷ ದಚ್ಚು – ಕಿಚ್ಚ ಎಂದು ನಡೆಯುತ್ತಿದ್ದ ಪೈಪೋಟಿ ಬಳಿಕ ಈಗ ಅಪ್ಪು – ದಚ್ಚು ಎಂದು ತಿರುಗಿ ಬಿಟ್ಟಿದೆ. ದರ್ಶನ್ ಕೊಟ್ಟ ಒಂದೇ ಒಂದು ಹೇಳಿಕೆ ಈಗ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ. ಆದರೆ ಡಿಬಾಸ್ ಹಾಗು ಅಪ್ಪು ನಡುವೆ ಅಪಾರ ಸ್ನೇಹವಿತ್ತು. ಅಪ್ಪು ಇದ್ದರೆ ಫ್ಯಾನ್ಸ್ ವಾರ್ ಅವರಿಗೆ ಸ್ವಲ್ಪವೂ ಸೇರುತ್ತಿರಲ್ಲಿಲ್ಲ. ರಾಜಕುಮಾರ್ ಮನೆಗೆ ಹಾಗು ಡಿಬಾಸ್ ನಡುವೆ ಅಪಾರ ಪ್ರೀತಿ ಸ್ನೇಹ ಇದೆ. ಶಿವಣ್ಣ ದರ್ಶನ್ ಅನ್ನು ತಮ್ಮ ಎನ್ನುತ್ತಾರೆ. ರಾಘಣ್ಣ ದರ್ಶನ್ ಅವರ ಫ್ಯಾನ್ ನಾನು ಎಂದು ಹೇಳುತ್ತಾರೆ. ಹಾಗಾಗಿ ಫ್ಯಾನ್ ವಾರ್ ಯಿಂದ ಬೇಸರಗೊಂಡ ರಾಘಣ್ಣ  ಅಪ್ಪು ಹಾಗೂ ದರ್ಶನ್ ನಡುವಿನ ಸಂಬಂಧ ಎಂತಹದ್ದು ಎಂದು ತಿಳಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅಭಿನಯದ ಅರಸು ಸಿನಿಮಾದಲ್ಲಿ ನಟ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅರಸು ಸಿನಿಮಾ ಕ್ಲೈಮ್ಯಾಕ್ಸ್ ನ ಒಂದು ದೃಶ್ಯದಲ್ಲಿ ಬಂದು ಹೋಗುವ ಪಾತ್ರವದು. ಈ ಪಾತ್ರದ ಬಗ್ಗೆ ರಾಘಣ್ಣ ಅವರು ತಿಳಿಸಿದ್ದಾರೆ.
ಅಪ್ಪು ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಬೇಕು ಎಂದು ದರ್ಶನ್ ಬಳಿ ಕೇಳಿಕೊಂಡಾಗ. ಆ ಕ್ಷಣಕ್ಕೆ ಅವರು ಏನನ್ನೂ ಯೋಚನೆ ಮಾಡದೇ ಆಯ್ತು ರಾಘಣ್ಣ, ಪಾತ್ರ ಮಾಡುತ್ತೀನಿ ಎಂದು ಮರು ಉತ್ತರ ನೀಡಿದ್ದರಂತೆ ದರ್ಶನ್. ಮರುಕ್ಷಣವೇ ನನ್ನದು ಒಂದು ಕಂಡೀಷನ್ ಇದೆ. ಯಾವುದೇ ಕಾರಣಕ್ಕೂ ಹಣ ಕೊಡ್ತೀನಿ ಅನ್ನಬಾರದು ಎಂದು ಹೇಳಿ ಬಿಟ್ಟಿದ್ದರಂತೆ ದರ್ಶನ್.   

ನೀವು ದುಡ್ಡು ತಗೋಬೇಕು ಅಂತ ಅವರ ಮನವೊಲಿಸುವ ಪ್ರಯತ್ನ ಮಾಡಿದೆವು, ಆದರೆ ದರ್ಶನ್ ಒಪ್ಪಲೇ ಇಲ್ಲ. ಬಹಳ ಬಲವoತ ಮಾಡಿದಾಗ, ನಮ್ಮ ತಂದೆ ನಿಮ್ಮ ಕಂಪನಿಯಲ್ಲಿ ಸಿನಿಮಾ ಮಾಡುತ್ತಿದ್ದಾಗ, ಯಾವತ್ತೂ ದುಡ್ಡಿನ ಬಗ್ಗೆ ಮಾತನಾಡಿಲ್ಲ. ಅಂಥದ್ರಲ್ಲಿ ನಾನ್ ಹೇಗೆ ದುಡ್ಡಿನ ಬಗ್ಗೆ ಮಾತನಾಡಲಿ ಎಂದುಬಿಟ್ಟರು. ನಮಗೆ ಒಂದು ಕ್ಷಣ ವಿಸ್ಮಯವಾಯಿತು. ತಂದೆಯ ಗುಣ ಹಾಗೆಯೇ ಮಗನಲ್ಲಿ ಇತ್ತು. ನಂತರ ನಾವು ಹೇಳಿದ ಬಂದು ಅಚ್ಚುಕಟ್ಟಾಗಿ ಪಾತ್ರ ಮಾಡಿಕೊಟ್ಟು ಹೋದರು ದರ್ಶನ್.