Puneeth Rajkumar : ಅಪ್ಪು ನೆನೆದು ರಾಘಣ್ಣ ಹಂಚಿಕೊಂಡ ವಿಶೇಷ ವಿಡಿಯೋದಲ್ಲಿ ಏನಿದೆ ?

By Infoflick Correspondent

Updated:Monday, May 30, 2022, 08:52[IST]

Puneeth Rajkumar : ಅಪ್ಪು ನೆನೆದು ರಾಘಣ್ಣ ಹಂಚಿಕೊಂಡ ವಿಶೇಷ ವಿಡಿಯೋದಲ್ಲಿ ಏನಿದೆ ?

ಪುನೀತ್ ಇಲ್ಲದೆ ಏಳು ತಿಂಗಳು ಕಳೆದಿದೆ. ಅಭಿಮಾನಿಗಳು ಅವರನ್ನ ನೆನೆಯದ ದಿನವಿಲ್ಲ. ಸಪ್ಪು ಸಮಾಧಿಗೆ ಜನ ಬರದ ದಿನವೂ ಇಲ್ಲ. ದಿನಕ್ಕೆ ನೂರಾರು ಜನರು ಬಂದು ಹೋಗುತ್ತಾರೆ. ಇಂದು ಸಹ ಸಮಾಧಿ ಬಳಿ ಅಭಿಮಾನಿಗಳ ದಂಡೆ ಸೇರಿದೆ.   

ಅಷ್ಟೆ ಅಲ್ಲದೆ ಬೆಂಗಳೂರಿನ ರಸ್ತೆ ಒಂದಕ್ಕೆ ಪುನೀರ್ ರಾಜಕುಮಾರ ಹೆಸರಿಡಲಾಗಿದೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌ಆರ್ ರಮೇಶ್ ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ 12 ಕಿಲೋ ಮೀಟರ್ ಉದ್ದದ ರಸ್ತೆಗೆ ಬಿಬಿಎಂಪಿ ಅಧಿಕಾರುಗಳು ಪುನೀತ್ ಹೆಸರಿನ ನಾಮಫಲಕ ಇಡಲು ಗ್ರೀನ್ ಕೊಟ್ಟಿದ್ದರು. ಈಗ ಅದರಂತೆಯೇ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಎಂದು ನಾಮಫಲಕ ಅಳವಡಿಸಲಾಗಿದೆ. 

ರಾಘವೇಂದ್ರ ರಾಜ್​ಕುಮಾರ್ ಅವರು ಅಪ್ಪು ಜತೆಗಿನ ವಿಶೇಷ ವಿಡಿಯೋ ಹಂಚಿಕೊಂಡು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಅಪ್ಪುವಿನ ಹಳೆಫೋಟೊಗಳು ಬಾಲ್ಯದಿಂದ ಇಲ್ಲಿಯವರೆಗೆ ಪ್ರತಿಫೋಟೊವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ‌.  ಜತೆಗೆ ಕಳೆದ ಸವಿ ನೆನಪನ್ನು ಹಂಚಿಕೊಂಡಿದ್ದಾರೆ. 

ಅಪ್ಪು ನೆನೆದು ಇಂದು ಕಂಠೀರವ ಸ್ಟುಡಿಯೋಗೆ ಆಗಮಿಸಿದ ಅಪ್ಪು ಪತ್ನಿ ಅಶ್ವಿನಿ ಹಾಗೂ ಮಗಳು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದು,  ಅಭಿಮಾನಿಗಳು ಸಹ ಈ ಸಮಯದಲ್ಲಿ ಬಂದಿದ್ದರು.