ಮತ್ತೆ ಬರಲಿದೆ ರಾಜಾ ರಾಣಿ ಶೋ ! ಎಂದಿನಿಂದ ಹಾಗು ಹೇಗಿರಲಿದೆ ಹೊಸ ಶೋ

By Infoflick Correspondent

Updated:Thursday, May 26, 2022, 17:02[IST]

ಮತ್ತೆ ಬರಲಿದೆ ರಾಜಾ ರಾಣಿ ಶೋ ! ಎಂದಿನಿಂದ ಹಾಗು ಹೇಗಿರಲಿದೆ ಹೊಸ ಶೋ

ಕಲರ್ಸ್ ಕನ್ನಡ  ವಾಹಿನಿಯೂ ವಿಭಿನ್ನ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ವೀಕೆಂಡ್​ನಲ್ಲಿ ವೀಕ್ಷಕರಿಗೆ ಮನರಂಜನೆಯನ್ನ ನೀಡಲು ಚಾನಲ್​ಗಳು ಹತ್ತು ಹಲವು ಬಗೆಯ ರಿಯಾಲಿಟಿ ಶೋಗಳನ್ನ ತಂದಿವೆ‌. ರಿಯಲ್​ ಜೋಡಿಗಳ ರಿಯಾಲಿಟಿ ಶೋ ರಾಜಾರಾಣಿ ಸೀಸನ್​ 2ಗೆ ವೇದಿಕೆ ಸಜ್ಜಾಗಿದೆ. 

ಕಲರ್ಸ್ ಕನ್ನಡದಲ್ಲಿ ಮತ್ತೊಂದು ಸೂಪರ್​ ಹಿಟ್​ ಶೋ ಬರಲು ತಯಾರಿಯಾಗಿದೆ. ಸೆಲೆಬ್ರಿಟಿ ಜೋಡಿಗಳ ಮೂಲಕ ಸೂಪರ್​ ಸಕ್ಸಸ್​ ಕಂಡಿದ್ದ ರಾಜಾ-ರಾಣಿ ತನ್ನ ಎರಡನೇ ಸೀಸನ್ ಪ್ರಾರಂಭಿಸಲಿದೆ.    

ರಾಜಾರಾಣಿ ಸೀಸನ್ 1ರಲ್ಲಿ 12 ಜೋಡಿಗಳನ್ನ ಕರೆತರಲಾಗಿತ್ತು. ಈ ಬಾರಿ ಯಾವ ಸೆಲೆಬ್ರೇಟಿ ಜೋಡಿಗಳು ಶೋನಲ್ಲಿ ಇರಲಿವೆ ಅನ್ನೋ ಕುತೂಹಲ ಮನೆ ಮೂಡಿದೆ. ಸದ್ಯ ರಾಜಾ-ರಾಣಿ ಎರಡನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ರಿಯಾಲಿಟಿ ಶೋನ ಜಡ್ಜ್​ ಬಂದಿದ್ದ ತಾರಮ್ಮ ಕೂಡ ಈ ಸೀಸನ್​ನಲ್ಲಿಯೂ ಮುಂದುವರೆಯಲಿದ್ದಾರೆ. ಹಾಸ್ಯದ ಮಳೆ ಸುರಿಸುವ ಸೃಜನ್ ಲೋಕೇಶ್ ಜಡ್ಜ್ ಸ್ಥಾನ ತುಂಬಲಿದ್ದಾರೆ. 

ಈ ಕಾರ್ಯಕ್ರಮ ಇದೇ ಜೂನ್ 11 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗುತ್ತದೆ. ಹಾಗಾಗಿ ವೀಕೆಂಡ್​ನಲ್ಲಿ ಬರಪೂರ್​ ಮನರಂಜನೆಯಂತೂ ಪಕ್ಕಾ ಸಿಗಲಿದೆ.