KGF 2 : ದರ್ಶನ್ ಸಿನಿಮಾ ಗಳಿಸುತ್ತೆ ಎಂದು 1500 ಕೋಟಿ ಓಪನ್ ಚಾಲೆಂಜ್ ಮಾಡಿದ್ಯಾರು..?

By Infoflick Correspondent

Updated:Wednesday, May 25, 2022, 19:19[IST]

KGF 2 :  ದರ್ಶನ್ ಸಿನಿಮಾ ಗಳಿಸುತ್ತೆ ಎಂದು 1500 ಕೋಟಿ ಓಪನ್ ಚಾಲೆಂಜ್ ಮಾಡಿದ್ಯಾರು..?

700 ವರ್ಷ ಇತಿಹಾಸ ಹೊಂದಿರುವ ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಬಗ್ಗೆ ಚಿತ್ರ ನಿರ್ಮಿಸಲಾಗಿದೆ. ತುಳು ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿರುವ ನಿರ್ದೇಶಕ, ನಿರ್ಮಾಪಕ ಡಾ.ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದಾರೆ. ತುಳು, ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಆದರೆ ಈ ಚಿತ್ರದ ತುಳು ಹಾಡನ್ನು ಮಾತ್ರವೇ ರಿಲೀಸ್ ಮಾಡಲಾಗಿದ್ದು, ಇದು ಈಗಾಗಲೇ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ರಾಜೇಂದ್ರ ಅವರೇ ಮಾತನಾಡಿದ್ದಾರೆ.    

ಈ ಬಗ್ಗೆ ಮಾತನಾಡಿರುವ ರಾಜೇಂದ್ರ ಸಿಂಗ್ ಬಾಬು ಅವರು, ವೀರ ಕಂಬಳ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ನೋಡಿದವರೆಲ್ಲರೂ ಖುಷಿ ಪಡುತ್ತಾರೆ. ಈಗಾಗಲೇ ತುಳು ಭಾಷೆಯಲ್ಲಿ ರಿಲೀಸ್ ಆಗಿರುವ ಹಾಡು ಒಂಭತ್ತು ಲಕ್ಷಕ್ಕ್ಕೂ ಹೆಚ್ಚು ವ್ಯೂವ್ಸ್ ಪಡೆದಿದೆ. ಇನ್ನು ಈ ಚಿತ್ರ ಎಲ್ಲಾ ಭಾಷೆಯಲ್ಲೂ ರಿಲೀಸ್ ಆದರೆ ಕಂಬಳದ ಬಗ್ಗೆ ಎಲ್ಲರೂ ಅರ್ಥ ಮಾಡಿಕೊಳ್ಳಬಹುದು. ಸತತ 7 ವರ್ಷಗಳ ಕಾಲ ಸಂಶೋಧನೆ ನಡೆಸಿ ಈ ಚಿತ್ರವನ್ನು ತೆಗೆಯಲಾಗಿದೆ. ಈ ಚಿತ್ರಕ್ಕೆ ನಿರ್ಮಾಪಕ ಅರುಣ್ ರೈ ತೋಡಾರ್ ಹಣ ಹೂಡಿದ್ದಾರೆ.   

ಇನ್ನು ಕೆಜಿಎಫ್ ಬಗ್ಗೆ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು ಅವರು, ದರ್ಶನ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ. ದರ್ಶನ್ ಅವರ ಚಿತ್ರ 1500 ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಡೌಟೇ ಇಲ್ಲ. ದರ್ಶನ್ ತುಂಬಾ ಒಳ್ಳೆಯ ಟಾಲೆಂಟೆಡ್ ವ್ಯಕ್ತಿ. ಅವರ ಜೊತೆಗೆ ನಾನು ಹಾಗೂ ಅರುಣ್ ರೈ ತೋಡಾರ್ ಇಬ್ಬರೂ ಸೇರಿಕೊಂಡು ದರ್ಶನ್ ಗಾಗಿ ಕಥೆಯನ್ನು ಬರೆದು ಸಿನಿಮಾ ಮಾಡುತ್ತೇವೆ. ಅದನ್ನು ಇಡೀ ಭಾರತ ಹಾಗೂ ಎಲ್ಲಾ ದೇಶಗಳಲ್ಲೂ ರಿಲೀಸ್ ಮಾಡುತ್ತೇವೆ. ಆ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂದು ಹೇಳಿದ್ದಾರೆ.