ನಟ ರಜನಿಕಾಂತ್ ಅವರ ಈಗಿನ ಸಂಭಾವನೆ ಮತ್ತು ಆಸ್ತಿ ಮೌಲ್ಯವೆಷ್ಟು  ಗೊತ್ತೆ ?!

By Infoflick Correspondent

Updated:Tuesday, May 24, 2022, 10:32[IST]

ನಟ ರಜನಿಕಾಂತ್ ಅವರ ಈಗಿನ ಸಂಭಾವನೆ ಮತ್ತು ಆಸ್ತಿ ಮೌಲ್ಯವೆಷ್ಟು  ಗೊತ್ತೆ ?!

ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ರಜನೀಕಾಂತ್ ಒಬ್ಬರು. ರಜನೀಕಾಂತ್ ಅವರ ಸಂಭಾವನೆ ಸಿನಿಮಾದಿಂದ ಸಿನಿಮಾಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ರಜನೀಕಾಂತ್ ಅವರ ಈಗಿನ ಆಸ್ತಿ ಮೌಲ್ಯವೆಷ್ಟು, ಅವರ ಸಂಭಾವನೆ ಎಷ್ಟು, ಹೊಂದಿರುವ ಕಾರುಗಳು ಯಾವುವು? ಇಲ್ಲಿದೆ ಪಟ್ಟಿ.    

ತಲೈವಾ ಬೆಳೆದು ಬಂದ ಹಾದಿ ಅನೇಕರಿಗೆ ಮಾದರಿ. ಬಡತನದಲ್ಲಿದ್ದ ಕುಟುಂಬಕ್ಕೆ ಸಹಾಯವಾಗಲೆಂದು ನಟನೆಯ ಹುಚ್ಚಿಗೆ ವಿದಾಯ ಹೇಳಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನೀಕಾಂತ್. ಸಿನಿಮಾದಲ್ಲಿ ನಟಿಸಲು ಚೆನ್ನೈಗೆ ಬರಲು ಹಣವಿಲ್ಲದೆ ಗೆಳೆಯ ರಾವ್ ಬಹದ್ದೂರ್ ಔದಾರ್ಯದಿಂದ ನೀಡಿದ ಹಣ ಪಡೆದು ಚೆನ್ನೈಗೆ ಬಂದು ಇಂದು ಕೋಟ್ಯಂತರ ಆಸ್ತಿಯ ಒಡೆಯರಾಗಿದ್ದಾರೆ. ಅದು ಮಾತ್ರವೇ ಅಲ್ಲದೆ ನೂರಾರು ಕೋಟಿ ಜನರ ಹೃದಯದಲ್ಲಿ ಸ್ಥಾನವನ್ನೂ ಸಂಪಾದಿಸಿದ್ದಾರೆ.    

ರಜನೀಕಾಂತ್ ತಮ್ಮ ಸಾಕಷ್ಟು ಆಸ್ತಿಯನ್ನು ದಾನ ಮಾಡಿದ್ದಾರೆ. ರಾಜಕೀಯ ಪಕ್ಷ ಕಟ್ಟುವ ಉದ್ದೇಶದಿಂದ ಸ್ಥಾಪಿಸಿದ ಸಂಘಗಳಿಗೆ ದೇಣಿಗೆ ನೀಡಿದ್ದಾರೆ. ಜೊತೆಗೆ ಮಕ್ಕಳಿಗೆ ಸಹ ಸಾಕಷ್ಟು ಆಸ್ತಿಯನ್ನು ನೀಡಿದ್ದಾರೆ ಹೀಗಾಗಿ ರಜನೀಕಾಂತ್‌ರ ಒಟ್ಟು ಆಸ್ತಿ ಮೌಲ್ಯ ಅಂದಾಜು 365 ಕೋಟಿ ರುಪಾಯಿಗಳಿವೆ ಎಂದು ಬಲ್ಲಮೂಲಗಳು ತಿಳಿಸಿವೆ. 

ರಜನೀಕಾಂತ್ ಬಳಿ ಹಲವು ಐಶಾರಾಮಿ ಕಾರುಗಳಿವೆ. ಕೆಲ ದಶಕಗಳ ಹಿಂದೆ ರಜನೀಕಾಂತ್ ಬಹುದೊಡ್ಡ ಕಾರ್ ಪ್ರಿಯರಾಗಿದ್ದರು. ಆದರೆ ವಯಸ್ಸಾದಂತೆ ಆಧ್ಯಾತ್ಮದ ಕಡೆ ವಾಲಿ ಸರಳ ಜೀವನ ಸಾಗಿಸಲು ಆರಂಭಿಸಿದರು. 

2002 ರಲ್ಲಿಯೇ ಪೋಯಸ್ ಗಾರ್ಡನ್‌ನಲ್ಲಿ ಅದ್ಧೂರಿಯಾಗಿ ರಜನೀಕಾಂತ್ ಮನೆ ನಿರ್ಮಾಣ ಮಾಡಿದ್ದರು. ಪೋಯಸ್‌ ಗಾರ್ಡನ್‌ನಲ್ಲಿ ಜಮೀನಿನ ಸದ್ಯದ ಮಾರುಕಟ್ಟೆ ಬೆಲೆ ಒಂದು ಚದರ ಅಡಿಗೆ 40 ರಿಂದ 50 ಸಾವಿರ ಇದೆ. ರಜನೀಕಾಂತ್ ಅವರು ಈಗ ವಾಸವಿರುವ ಮನೆಯ ಈಗಿನ ಮಾರುಕಟ್ಟೆ ದರವೇ ಸುಮಾರು 30 ಕೋಟಿ ಇದೆ. ರಜನೀಕಾಂತ್ ಮನೆಯ ಪಕ್ಕದಲ್ಲಿಯೇ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಮನೆ ಇದೆ. 

ಈಗ ನಟ ರಜನಿಕಾಂತ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ನಿರ್ದೇಶಕ ನೆಲ್ಸನ್ ನಟ ರಜನಿಕಾಂತ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡುತ್ತಾ ಇದ್ದಾರೆ. ಇದು ನಟ ರಜನಿಕಾಂತ್ ಅವರ 169ನೇ ಸಿನಿಮಾ. ಇದೇ ಸಿನಿಮಾಗೆ ನಟ ರಜನಿಕಾಂತ್ 150 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಮೂಲಕ ರಜನಿಕಾಂತ್ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಎನಿಸಿಕೊಂಡಿದ್ದಾರೆ.