ಕೆಜಿಎಫ್ ಗೆ ಫಿದಾ ಆದ ರಜನಿಕಾಂತ್ ಹೇಳಿದ್ದೇನು ?

By Infoflick Correspondent

Updated:Saturday, April 16, 2022, 13:23[IST]

ಕೆಜಿಎಫ್ ಗೆ ಫಿದಾ ಆದ ರಜನಿಕಾಂತ್ ಹೇಳಿದ್ದೇನು ?

ರಾಕಿಂಗ್ ಸ್ಟಾರ್‌' ಯಶ್ ಅಭಿನಯದ 'ಕೆಜಿಎಫ್‌ ಚಾಪ್ಟರ್‌ 2' ಭರ್ಜರಿಯಾಗಿ ರಿಲೀಸ್ ಆಗಿದೆ. ಎಲ್ಲೆಡೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ವಿವಿಧ ರಾಜ್ಯಗಳಲ್ಲಿ ಕೂಡ ಫ್ಯಾನ್ಸ್ ಅದ್ದೂರಿಯಾಗಿ ರಿಲೀಸ್ ಸಂಭ್ರಮವನ್ನು ಆಚರಿಸಿದ್ದಾರೆ. ಸ್ಯಾಂಡಲ್ ವುಡ್ ನತ್ತ ಇಡೀ ಭಾರತೀಯ ಸಿನಿಮಾ ರಂಗವೇ ತಿರುಗಿ ನೋಡುವಂತೆ ಮಾಡಿದೆ. 

ಈ ಚಿತ್ರಕ್ಕೆ ಪರಭಾಷೆಯ ಕಲಾವಿದರು ಕೂಡ ಫಿದಾ ಆಗಿದ್ದಾರೆ. ಕೆಜಿಎಫ್ ಯಶಸನ್ನು ಕಂಡು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸೂಪರ್ ರಜನಿಕಾಂತ್ ಕೂಡ 'ಕೆಜಿಎಫ್ 2' ಚಿತ್ರವನ್ನು ನೋಡಿದ್ದು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ತಲೈವಾ ಕೆಜಿಎಫ್2 ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಕೆಜಿಎಫ್ ಹವಾ ಡಬಲ್ ಆಗಿದೆ.   

ಗುರುವಾರ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಚೆನ್ನೈನ ಚಿತ್ರಮಂದಿರದಲ್ಲಿ ರಜನಿಕಾಂತ್ ಅವರು ಸಿನಿಮಾ ವೀಕ್ಷಿಸಿದ್ದಾರೆ..ವಿಶೇಷ ಅಂದ್ರೆ ಕನ್ನಡ ವರ್ಷನ್‌ನಲ್ಲಿಯೇ ರಜನಿ ಸಿನಿಮಾ ವೀಕ್ಷಿಸಿದ್ದಾರೆ. 

ಸಿನಿಮಾ ನೋಡಿದ ಬಳಿಕ ಚಿತ್ರತಂಡದ ಜೊತೆಗೆ ರಜನಿಕಾಂತ್ ಮಾತನಾಡಿದ್ದಾರೆ .ನಿರ್ಮಾಪಕ ವಿಜಯ್ ಕಿರಂಗದೂರ್‌ಗೆ ಕರೆ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕೆಜಿಎಫ್ ಚಾಪ್ಟರ್ 2’ ಚಿತ್ರ ನೋಡಿದ ಜನರು ಕೊನೆಯ ಕ್ರೆಡಿಟ್ಸ್ ದೃಶ್ಯಗಳನ್ನು ನೋಡಲು ಮರೆಯಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಅಭಿಮಾನಿಗಳಿಗೆ ಚಿತ್ರತಂಡ ದೊಡ್ಡದೊಂದು ಸರ್ಪ್ರೈಸ್ ನೀಡಿದೆ. ಹಾಗಾಗಿ  ‘ಕೆಜಿಎಫ್ 3’ ಬರಬಹುದೆಂದು ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ. 

ಆರ್ ಜಿವಿ ನೀಡಿರುವ ಮಾಹಿತಿ ಪ್ರಕಾರ ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಕೆಜಿಎಫ್ 2 ಅಗ್ರಸ್ಥಾನದಲ್ಲಿದ್ದರೆ, ಬಾಹುಬಲಿ-2 ಎರಡನೇ ಸ್ಥಾನದಲ್ಲಿದೆ.