Shivraj Kumar : ಶಿವಣ್ಣ ತಮಗೆ ಯಾವ ಆಸ್ತಿಯೂ ಬೇಡ ಎಂದ್ದಿದರೂ ರಾಜಕುಮಾರ್ ಅವರು ಗಾಜನೂರಿನಲ್ಲಿ ಎಷ್ಟು ಎಕರೆ ಭಾಗ ಮಾಡಿ ಕೊಟ್ಟಿದಾರೆ ಗೊತ್ತಾ ?

By Infoflick Correspondent

Updated:Wednesday, July 20, 2022, 11:35[IST]

Shivraj Kumar :  ಶಿವಣ್ಣ ತಮಗೆ ಯಾವ ಆಸ್ತಿಯೂ ಬೇಡ ಎಂದ್ದಿದರೂ ರಾಜಕುಮಾರ್ ಅವರು ಗಾಜನೂರಿನಲ್ಲಿ ಎಷ್ಟು ಎಕರೆ  ಭಾಗ ಮಾಡಿ ಕೊಟ್ಟಿದಾರೆ ಗೊತ್ತಾ ?

ರಾಜ್ ಕುಮಾರ್ ಕುಟುಂಬದ ಬಗ್ಗೆ ಯಾರೂ ಏನೂ ಮಾತನಾಡುವುದಕ್ಕೆ ಸಾಧ್ಯವೇ ಇಲ್ಲ. ಡಾ. ರಾಜ್ ಕುಮಾರ್ ಅವರ ಕುಟುಂಬ ಎಂದರೆ ಹಾಗೇನೆ, ಅಲ್ಲಿ ಸ್ವಲ್ಪವೂ ಹಮ್ಮು-ಬಿಮ್ಮು, ನಾನು ನಟ, ಸಿರಿವಂತ, ಹಣವುಳ್ಳವರು, ದೊಡ್ಮನೆಯವರು ಅನ್ನೋ ಅಹಂ ಆಗಲೀ ದುರಹಂಕಾರವಾಗಲೀ ಕಿಂಚಿತ್ತೂ ಇಲ್ಲ. ರಾಜ್ ಕುಮಾರ್ ಕುಟುಂಬದವರೆಲ್ಲರೂ ವಿನಯದಿಂದ ಚಿಕ್ಕ ಮಕ್ಕಳ ಎದುರು ಕೂಡ ಕೈಕಟ್ಟಿ ನಿಲ್ಲುತ್ತಾರೆ. ಅಷ್ಟು ಒಳ್ಳೆಯ ಗುಣಗಳು, ಸಾಮಾನ್ಯರಂತೆ ಬದುಕು ನಡೆಸುತ್ತಾರೆ. ಅವರು ಮಾಡಿದ ಸಹಾಯಗಳು, ಜನರೊಟ್ಟಿಗೆ ನಡೆದುಕೊಳ್ಳುತ್ತಿದ್ದ ರೀತಿ-ನೀತಿ ಯಾರಿಂದಲೂ ಇರಲು ಸಾಧ್ಯವಿಲ್ಲ.     

ಇದೆಲ್ಲಕ್ಕೂ ಕಾರಣ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರು ತಮ್ಮ ಮಕ್ಕಳಿಗೆ ಹೇಳಿಕೊಟ್ಟ ಶಿಸ್ತಿನ ಪಾಠ. ಡಾ. ರಾಜ್ ಕುಮಾರ್ ಅವರು ಬದುಕಿದ್ದಾಗ ಮಕ್ಕಳಿಗೆ ಶಿಸ್ತಿನಿಂದ ಬದುಕುವುದನ್ನು ಹೇಳಿಕೊಟ್ಟಿದ್ದರು. ಸರಳ ಜೀವನ ನಡೆಸುವುದನ್ನು ಕಲಿಸಿಕೊಟ್ಟಿದ್ದರು. ಅವರ ಆಸೆಯಂತೆಯೇ ರಾಜ್ ಕುಮಾರ್ ಕುಟುಂಬದವರು ಜೀವನ ನಡೆಸುತ್ತಿದ್ದಾರೆ. ಈ ಗುಣಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾಗಿರುವಂತಹದ್ದು. ಇನ್ನು ರಾಜ್ ಕುಮಾರ್ ಮಕ್ಕಳು ಯಾವತ್ತೂ ಜಗಳವೇ ಆಡಿಲ್ಲ. ಇನ್ನು ಆಸ್ತಿ ವಿಚಾರಕ್ಕಂತೂ ಒಂದು ದಿನವೂ ಕಿತ್ತಾಡಿಲ್ಲ. 

ಈ ಬಗ್ಗೆ ಸ್ವತಃ ಶಿವಣ್ಣ ಅವರೇ ಹೇಳಿಕೊಂಡಿದ್ದಾರೆ. ಅಣ್ಣ-ತಮ್ಮಂದಿರು ನಾವ್ಯಾವತ್ತೂ ಆಸ್ತಿ ವಿಚಾರಕ್ಕೆ ಮನಸ್ತಾಪವೇ ಆಗಿಲ್ಲ. ಜಗಳವೇ ಆಡಿಲ್ಲ ಎಂದು ಹೇಳಿದ್ದಾರೆ. ಇನ್ನು ನಿಮಗೊಂದು ವಿಚಾರ ಹೇಳಬೇಕು. ಅದೇನೆಂದರೆ, ರಾಜ್ ಕುಮಾರ್ ಅವರು ಆಸ್ತಿಯನ್ನು ಭಾಗ ಮಾಡುವಾಗ ಶಿವಣ್ಣ ತಮಗೆ ಯಾವ ಆಸ್ತಿಯೂ ಬೇಡ ಎಂದಿದ್ದರಂತೆ. ಶಿವಣ್ಣ ಬೇಡ ಎಂದಿದ್ದರೂ ಕೂಡ ರಾಜ್ ಕುಮಾರ್ ಅವರು ಗಾಜನೂರಿನಲ್ಲಿರುವ ೪ ಎಕರೆ ಜಮೀನನ್ನು ಹಾಗೂ ಚೆನ್ನೈನಲ್ಲಿ ಇರುವ ಒಂದು ಮನೆಯನ್ನು ಶಿವಣ್ಣ ಅವರ ಹೆಸರಿಗೆ ಭಾಗ ಮಾಡಿ ಹಂಚಿದ್ದರಂತೆ. ಈ ವಿಚಾರ ಇದೀಗ ಬಹಿರಂಗವಾಗಿದೆ.