ಡಾ. ರಾಜಕುಮಾರ್ ಅವರ ಈ ಒಂದು ಕನಸು ನನಸಾಗಲೇ ಇಲ್ಲ, ಏಕೆ ಗೊತ್ತೆ ?

By Infoflick Correspondent

Updated:Monday, April 25, 2022, 14:35[IST]

ಡಾ. ರಾಜಕುಮಾರ್ ಅವರ ಈ ಒಂದು ಕನಸು ನನಸಾಗಲೇ ಇಲ್ಲ, ಏಕೆ ಗೊತ್ತೆ ?

ಡಾ. ರಾಜಕುಮಾರ್ ಅವರೂ ದೇಶ ವಿದೇಶದಲ್ಲೂ ಅಜರಾಮರ. ಅವರು ಅಣ್ಣಾವ್ರು, ಅಪ್ಪಾಜಿ ಎಂಬ ಹೆಸರಿನಿಂದಲೇ ಪ್ರಸಿದ್ದಿ ಕಾರಣ ಅದು ಜನತೆ ಅವರಿಗೆ ನೀಡುತ್ತಿದ್ದ ಗೌರವ. ಏಕೆಂದರೆ ಅವರ ಜೀವನ ಶೈಲಿ, ತತ್ವ, ಸರಳತೆ ಎಲ್ಲರಿಗೂ ಮಾದರಿ. ಅಣ್ಣಾವ್ರದ್ದು ಸರಳ ವ್ಯಕ್ತಿತ್ವ. ಅದೆಷ್ಟೇ ಎತ್ತರಕ್ಕೆ ಬೆಳೆದರೂ, ಡಾ.ರಾಜ್‌ಕುಮಾರ್ ಮಾತ್ರ ಬದಲಾಗಲಿಲ್ಲ.  

ಡಾ. ರಾಜಕುಮಾರ್ ಹುಟ್ಟೂರು ಗಾಜನೂರು. ಅವರ ಕಾರ್ಯಕ್ಷೇತ್ರ ಬೆಂಗಳೂರಿನಲ್ಲಿ ಇದ್ದರೂ ಅವರ ಮನಸ್ಸು ಸದಾ ಹುಟ್ಟೂರಲ್ಲೇ ಇರುತ್ತಿತ್ತು. ಬೆಂಗಳೂರಿನಲ್ಲಿ ಅದೆಷ್ಟೆ ದೊಡ್ಡ ಬಂಗಲೆ ಇದ್ದರೂ, ಹುಟ್ಟೂರಿನ ಕಡೆಗೆ ಅವರ ಮನಸ್ಸು ಸೆಳೆಯುತ್ತಿತ್ತು. ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ ಬಳಿಕ ವಿಶ್ರಾಂತಿ ದಿನಗಳನ್ನು ತನ್ನ ಹುಟ್ಟೂರಿನಲ್ಲಿಯೇ ಕಳೆಯಬೇಕು ಎಂದು ಬಯಸಿದ್ದರು ಮುತ್ತುರಾಜ್. 

ತನ್ನ ನಿವೃತ್ತಿ ಬದುಕನ್ನು(ವೃದ್ಧಾಪ್ಯದ ಜೀವನವನ್ನು) ಗಾಜನೂರಿನಲ್ಲಿ ಕಟ್ಟಿಸಿದ ಮನೆಯಲ್ಲಿಯೇ ಬದುಕಬೇಕು ಎಂದು ಕನಸು ಕಂಡಿದ್ದರು. ಅವರಿಗೆ ತಮ್ಮ ಹುಟ್ಟೂರು ಗಾಜನೂರು ಎಂದರೆ ಪಂಚಪ್ರಾಣ, ಹುಟ್ಟಿದ ಊರು ಸ್ವರ್ಗಕ್ಕೆ ಸಮಾನ ಅಂತ ಅವರು ಹೇಳುತ್ತಾ ಇದ್ದರು. ಆದರೆ, ಅದು ಕೊನೆಗೂ ಸಾಧ್ಯವಾಗಲೇ ಇಲ್ಲ.! ಏಕೆಂದರೆ ಇಲ್ಲಿದೆ ನೋಡಿ ಆ ಕರಾಳ ದಿನದ ಕಥೆ   

ಆಸೆ ಈಡೇರಿಸುವ ನಿಟ್ಟಿನಲ್ಲಿ  ಗಾಜನೂರಿನಲ್ಲಿ ಒಂದು ಮನೆ ಕೂಡ ನಿರ್ಮಾಣ ಮಾಡಲಾಯ್ತು. ಆದರೆ ಅವರು ಆ ಮನೆಯಲ್ಲಿ ವಾಸ ಮಾಡುವ ಕನಸು ಕನಸಾಗೆ ಉಳಿಯಿತು. ಗಾಜನೂರಿನಲ್ಲಿಯೇ ಉಳಿದುಕೊಂಡು ವ್ಯವಸಾಯ ಮಾಡಿಕೊಂಡು ನೆಮ್ಮದಿಯಿಂದ ಕಾಲ ಕಳೆಯಬೇಕೆಂದು ಬಯಸಿದ್ದರು.  ಆ ಮನೆಗೆ ಭೇಟಿ ಕೊಡುವ ವೇಳೆಗೂ ಮುನ್ನ ಕಾಡುಗಳ್ಳ ವೀರಪ್ಪನ್ ರಾಜ್ ಅವರನ್ನು ಕಿಡ್ನಾಪ್ ಮಾಡಿದರು. ನಂತರ ಗಾಜನೂರಿಗೆ ಅವರು ಬಂದು ವಾಸ ಮಾಡಲೂ ಸಾಧ್ಯವಾಗಿಲ್ಲ. ವೀರಪ್ಪನ್ ನಿಂದ ಬಿಡುಗಡೆಯಾದರೂ ಭದ್ರತೆಯ ದೃಷ್ಟಿಯಿಂದ ರಾಜ್ ‌ಕುಮಾರ್ ಅವರು ಗಾಜನೂರಿಗೆ ಹೋಗಲು ಸರ್ಕಾರ ಅನುಮತಿಸಿರಲಿಲ್ಲ. ಹಾಗಾಗಿ ಮುತ್ತುರಾಜನ ಆಸೆಯು ಕಮರಿಹೋಯ್ತು. 

ಇದೀಗ ಆ ಮನೆಯಲ್ಲಿ ಡಾ ರಾಜ್ ಸಹೋದರಿ ನಾಗಮ್ಮ ಹಾಗೂ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಪ್ರೀತಿಯ ತಂಗಿ ನಾಗಮ್ಮ ಅಂದ್ರೆ ಕೂಡ ರಾಜ್ ಕುಮಾರ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಇದೇ ಗಾಜನೂರಿನಲ್ಲಿ ಡಾ.ರಾಜ್ ಹಾಗೂ ಅವರ ಪೂವರ್ಜರು ಬೆಳೆದ ಹಳೆಯ ಮನೆಯಿದೆ. ಇದು ರಾಜಕುಮಾರ್ ಮತ್ತು ದೊಡ್ಮನೆಯ ಪಾಲಿಗೆ ದೇವಾಲಯ.  ರಾಜಕುಮಾರ್ ಮಕ್ಕಳಿಗೂ ಗಾಜನೂರು ಎಂದರೆ ಅಪಾರ ಒಲವು.