ಬಲೂನ್ ಎಂದು ಕಾಂಡೋಮ್ ಎಸೆದ ಖ್ಯಾತ ಬಾಲಿವುಡ್ ನಟಿ !

By Infoflick Correspondent

Updated:Wednesday, March 9, 2022, 21:14[IST]

ಬಲೂನ್ ಎಂದು ಕಾಂಡೋಮ್ ಎಸೆದ ಖ್ಯಾತ ಬಾಲಿವುಡ್ ನಟಿ !

ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ರಾಖಿ ಸಾವಂತ್​ ಇದೀಗ ಅಭಿಮಾನಿಗಳಿಗೆ ಹಾಸ್ಯಾಸ್ಪದ ಮತ್ತು ಹಲವರಿಗೆ ಮುಜುಗರ ಉಂಟುಮಾಡುವ ಸಂಗತಿಯೊಂದನ್ನು ಹೇಳಿದ್ದಾರೆ. ಬಲೂನ್ ಎಂದುಕೊಂಡು ಜನರ ಮೇಲೆ ಕಾಂಡೋಮ್ ಎಸೆದ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ. 

ಹೋಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿಉಳಿಸಿದೆ. ಹೋಳಿ ಎಂದರೆ ಬಣ್ಣಗಳ ಹಬ್ಬ.‌ ಬಣ್ಣದೊಡನೆ ಸಂತಸ ಹಂಚುವ ಹಬ್ಬ. ಎಲ್ಲಾ ಜನರೂ ಒಗ್ಗಟ್ಟಾಗಿ ಆಚರಿಸುವ ಹಬ್ಬ. ಹೋಳಿ ಹಬ್ಬದಂದು ರಾಖಿ ಸಾವಂತ ಬಲೂನ್ ಎಂದುಕೊಂಡು ಜನರ ಮೇಲೆ ಕಾಂಡೋಮ್ ಎಸೆದ ಘಟನೆಯನ್ನು ಅವರೇ ಹೇಳಿಕೊಂಡಿದ್ದಾರೆ.  

ಹೋಳಿ ಹಬ್ಬದ ಹಳೆಯ ದಿನಗಳನ್ನು ನೆನಪಿನ ಪುಟದಿಂದ ತೆಗೆದರೆ ಒಬ್ಬೊಬ್ಬರದ್ದು ಒಂದೊಂದು ನೆನಪು ಹಾಗೆ ರಾಖಿ ಸಾವಂತ್ ತಮ್ಮ ಬಾಲ್ಯ ದಿನದ ನೆನಪನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ; ನಾನು ಚಿಕ್ಕವಳಿದ್ದಾಗ ಹೋಳಿ ಹಬ್ಬದಂದು  ಮನೆಯಲ್ಲಿ ಬಲೂನ್​  ಕಾಣಿಸಿತು. ನಾನು ಆ ಬಲೂನಿನ ಒಳಗೆ ಬಣ್ಣದ ನೀರನ್ನು ತುಂಬಿ ಜನರ ಮೇಲೆ‌ ಎಸೆದೆ‌.‌ ಹೋಳಿ ಹಬ್ಬದಲ್ಲಿ ಬಲೂನ್ ಎಸೆಯುವುದು ಸಾಮಾನ್ಯ , ಆದರೆ ನಾನು ಈ ರೀತಿ ಬಲೂನನ್ನು ಎಸೆಯುತ್ತಿದ್ದಂತೆ ಎಲ್ಲರೂ ನನಗೆ ಬೈಯಲು ಆರಂಭಿಸಿದರು. ಏನಾಗುತ್ತದೆ ಯಾಕೆ ಬೈಯುತ್ತಿದ್ದಾರೆಂದು ನನಗೆ ಮೊದಲು ತಿಳಿಯಲಿಲ್ಲ ನಂತರ ಅಲ್ಲಿ ಸೇರಿದ್ದ ಜನ ನೀನು ಎಸೆದಿದ್ದು  ಬಲೂನ್​ ಅಲ್ಲ ಕಾಂಡೋಮ್ ಎಂದರು ! ಎಂದು ರಾಖಿ ಸಾವಂತ್  ತಮ್ಮ ಬಾಲ್ಯ ದಿನದ ಹೋಳಿಯ ಘಟನೆಯನ್ನು ಹೇಳಿದ್ದಾರೆ.