Rakshak : ನಮ್ಮಪ್ಪ ಹೋದಮೇಲೆ 50 ರೂಪಾಯಿಗೂ ಕಷ್ಟ ಆಯ್ತು ಎಂದ ಬುಲೆಟ್ ಪ್ರಕಾಶ್ ಪುತ್ರ..! ನೋವಿನ ವಿಷಯ

By Infoflick Correspondent

Updated:Tuesday, September 20, 2022, 13:23[IST]

Rakshak : ನಮ್ಮಪ್ಪ ಹೋದಮೇಲೆ 50 ರೂಪಾಯಿಗೂ ಕಷ್ಟ ಆಯ್ತು ಎಂದ ಬುಲೆಟ್ ಪ್ರಕಾಶ್ ಪುತ್ರ..! ನೋವಿನ ವಿಷಯ

ಸ್ಯಾಂಡಲ್ ವುಡ್ನ ಸಾಕಷ್ಟು ಕಲಾವಿದರ ಪಟ್ಟಿಯಲ್ಲಿ ನಟ ಬುಲೆಟ್ ಪ್ರಕಾಶ್ ಅವರು ಕೂಡ ಬರುತ್ತಾರೆ...ಹೌದು ಬುಲೆಟ್ ಪ್ರಕಾಶ್ ಅವರು 90ರ ದಶಕದಿಂದಲೂ ಕೂಡ 2000 ಇಸ್ವಿಯ ಹೆಚ್ಚು ಜನರನ್ನು ಮನರಂಜಿಸಿದವರು. ಡಿ ಬಾಸ್ ಅಭಿನಯದ ಪ್ರತಿ ಸಿನಿಮಾದಲ್ಲೂ ಕೂಡ ಬುಲೆಟ್ ಪ್ರಕಾಶ್ ಅವರು ಇದ್ದೇ ಇರುತ್ತಿದ್ದರು. ಹಾಗೆ ಅವರ ಕಾಮಿಡಿ ಸೈನ್ಸ್, ಕಾಮಿಡಿ ಮಾಡುತ್ತಿದ್ದ ರೀತಿ ಅವರ ನಟನೆಯಲ್ಲಿ ಎತ್ಯೇಚ್ಚವಾದ ಹಾಸ್ಯದ ಅಭಿನಯ ಎಲ್ಲವೂ ಕೂಡ ಹೆಚ್ಚು ಮನಸೂರೆಗೊಳ್ಳುತ್ತಿತ್ತು ಎಂದು ಹೇಳಬಹುದು..ಹೌದು ಬುಲೆಟ್ ಪ್ರಕಾಶ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ನಮ್ಮನೆಲ್ಲ ಬಿಟ್ಟು ತುಂಬಾ ಬಾರದ ದೂರದ ಲೋಕಕ್ಕೆ ಹೋಗಿದ್ದಾರೆ. ಕಳೆದ ವರ್ಷ ಬುಲೆಟ್ ಪ್ರಕಾಶ್ ಅವರು ಅನಾರೋಗ್ಯದಿಂದ ಬಳಲಿದ್ದು ಸಾವನ್ನಪ್ಪಿರುವ ವಿಚಾರ ಎಲ್ಲರಿಗೂ ಗೊತ್ತಿದೆ.

ನಟ ಬುಲೆಟ್ ಪ್ರಕಾಶ್ ಅವರು ಕನ್ನಡ ಸಿನಿಮಾರಂಗಕ್ಕೆ ಅವರದೇ ಆದ ಕೊಡುಗೆ ನೀಡಿ ಹೋಗಿದ್ದಾರೆ. ಹಾಗೆ ಅವರ ಪುತ್ರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವಿಷಯಗಳನ್ನು ಪ್ರಸ್ತಾಪ ಮಾಡುತ್ತಿರುವುದ ನಾವು ನೋಡಿದರೆ ನಿಜಕ್ಕೂ ಒಂದು ಕ್ಷಣ ಬುಲೆಟ್ ಪ್ರಕಾಶ್ ಅವರ ಬಗ್ಗೆ ನೆನೆದರೆ ಹೆಮ್ಮೆ ಅನಿಸುತ್ತದೆ. ಆದರೆ ಇದೇ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಅವರನ್ನು ಕೆಲವರು ಒಪ್ಪಿಕೊಳ್ಳುತ್ತಿಲ್ಲ. ಅವರು ಮಾತನಾಡುವ ಪರಿ ಹಾಗೆ ಅವರು ಹೇಳಿಕೊಳ್ಳುವ ಕೆಲವು ವಿಷಯ ಕೆಲವರಿಗೆ ಕಿರಿ ಕಿರಿ ಆಗುತ್ತಿದೆ. ಹಾಗೆ ಇವರ ಮಾತಿನಲ್ಲಿ ಹಠ ಹೆಚ್ಚು ಸ್ವಾಭಿಮಾನ ಹಾಗೆ ಕನಸು ಇದ್ದರೂ ಕೂಡ ಇವರನ್ನು ಬೇರೆಯದ್ದೆ ರೀತಿಯಾಗಿ ಕೆಲವರು ಕೊಂಕು ಮಾಡುತ್ತಿದ್ದಾರೆ. ಹೌದು, ರಕ್ಷಕ್ ಅವರು ಇತ್ತೀಚಿಗೆ ಅವರ ಕುಟುಂಬದ ವಿಚಾರವಾಗಿ ಕೆಲಕ ಗೊತ್ತಿಲ್ಲದ ವಿಷಯವನ್ನು ನ್ಯೂಸ್ ಮಾಧ್ಯಮದ ಮೂಲಕ ಶೇರ್ ಮಾಡಿಕೊಂಡಿದ್ದಾರೆ. 

ರಕ್ಷಕ್ ಬುಲೆಟ್ ಅವರು ಹೇಳುವ ಹಾಗೆ ನಮ್ಮಪ್ಪ ತೀರಿ ಹೋದ ಸಂದರ್ಭದಲ್ಲಿ ಐವತ್ತು ರೂಪಾಯಿ ಸಹ ಬಳಿ ಇರಲಿಲ್ಲ. ನನ್ನ ಗೆಳೆಯನಿಗೆ ಫೋನ್ ಮಾಡಿ ರೂ.50 ಹಾಕು ಹಾಲು ತರಬೇಕು ಎಂದು ಕೇಳಿದ್ದೇನೆ, ತುಂಬಾ ಕಷ್ಟದ ಆ ಸಮಯ ಬಿಡಿ, ಅಪ್ಪನನ್ನು ಉಳಿಸಿಕೊಳ್ಳಲು ಏನೇನೋ ಮಾಡಿದೆವು. 80 ಲಕ್ಷ ಖರ್ಚು ಮಾಡಿ, ಎಲ್ಲಾ ಒಡೆವೆಗಳನ್ನ ಮಾರಿ ಚಿಕಿತ್ಸೆ ಕೋಡಿಸಿದೆವು. ಅಪ್ಪನನ್ನು ಉಳಿಸಿಕೊಳ್ಳಲು ಪ್ರಯತ್ನ ಪಟ್ಟೆವು, ಆದರೆ ಆಗಲಿಲ್ಲ. ಕೊನೆಯ ಗಳಿಗೆಯಲ್ಲಿ ಅಪ್ಪನನ್ನು ನೋಡಿಕೊಳ್ಳುವ ಆ ಪುಣ್ಯ ನನಗೆ ಸಿಕ್ಕಿತು, ಅದು ಎಲ್ಲರಿಗೂ ಬರುವುದಿಲ್ಲ, ಅಷ್ಟು ಸಮಾಧಾನ ಇದೆ ಎಂದು ರಕ್ಷಕ್ ಈಗ ಮಾತನಾಡಿದ್ದಾರೆ. ಕೆಲವರು ತಂದೆ ತಾಯಿ ಕುರಿತು ಮಾತನಾಡಿದ ಈ ರಕ್ಷಕ್ ಮಾತಿಗೆ ಕಿಡಿ ಕಾರಿದ್ದಾರೆ ಎಂದು ಹೇಳಬಹುದು. ನೀನೊಬ್ಬನೇ ತಂದೆ ತಾಯಿಗಳನ್ನು ನೋಡಿಕೊಳ್ಳುತ್ತಿದ್ಡಿಯ ಬೇರೆಯವರು ಅವರವಾರ ತಂದೆ ತಾಯಿಯನ್ನು ನೋಡಿಕೊಳ್ಳುವುದಿಲ್ಲವ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಏನೇ ಇರಲಿ ರಕ್ಷಕ್ ಸಿನಿಮಾ ರಂಗದಲ್ಲಿ ಬಹು ಬೇಗನೆ ಬೆಳೆಯಲಿ ಎಂದು ಹಾರೈಸೋಣ. ಹಾಗೆ ನಟ ಬುಲೆಟ್ ಪ್ರಕಾಶ್ ಅವರು ಇಲ್ಲವಾದ ಬಳಿಕ ಇವರಿಗೆ ತುಂಬಾ ಕಷ್ಟವಾಗಿದೆಯಂತೆ. ಒಂದೊಳ್ಳೆ ಕಥೆಗಾಗಿ ಎದುರು ನೋಡುತ್ತಿದ್ದಾರೆ ಹಾಗೆ ಅದಕ್ಕೇ ಬೇಕಾದ ಸಿದ್ದತೆ ಕೂಡ ನಡೆಸಿದ್ದಾರೆ ರಕ್ಷಕ್ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...