Rashmika Mandanna : 777 ಚಾರ್ಲಿ ಚಿತ್ರ ನೋಡಿ ರಶ್ಮಿಕಾ ಮಂದಣ್ಣಗೆ ಕ್ಲಾಸ್ ತೆಗೆದುಕೊಂಡ ಅಭಿಮಾನಿಗಳು
Updated:Thursday, June 16, 2022, 18:53[IST]

ರಕ್ಷಿತ್ ಶೆಟ್ಟಿ ನಿರ್ಮಾಣದ 777 ಚಾರ್ಲಿ ಚಿತ್ರ ಈಗಾಗಲೇ ಭಾರತದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಚಾರ್ಲಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕಲಾವಿದರ ಜೊತೆಗೆ ಯಾವ ರೀತಿಯ ಸಿನಿಮಾಗಳನ್ನು ಬೇಕಿದ್ದರೂ ತೆಗೆಯಬಹುದು. ಆದರೆ, ಒಂದು ಶ್ವಾನ ಅಥವಾ ಪ್ರಾಣಿಯನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಬಹಳ ಕಷ್ಟ. ಅಂತಹ ಸಿನಿಮಾ ತೆಗೆದಿರುವ ನಿರ್ದೇಶಕ ಕಿರಣ್ ರಾಜ್ ಅವರ ಕೆಲಸವನ್ನು ಹಾಡಿ ಹೊಗಳಿದ್ದಾರೆ. ಪ್ರತಿಯೊಬ್ಬರೂ ಥಿಯೇಟರ್ ಗೇ ಬಂದು 777 ಚಾರ್ಲಿ ಸಿನಿಮಾವನ್ನು ನೋಡಬೇಕು ಎಂದು ಹೇಳಿದ್ದಾರೆ.
ಅಭಿಮಾನಿಗಳು ರಕ್ಷಿತ್ ಶೆಟ್ಟಿ ಅವರನ್ನು ಹೊಗಳಿದ್ದು, ರಶ್ಮಿಕಾ ಮಂದಣ್ಣ ರನ್ನು ಬೈದಿದ್ದಾರೆ. ಕನ್ನಡ ಚಿತ್ರರಂಗವನ್ನು ನೆಗ್ಲೆಕ್ಟ್ ಮಾಡಿರುವ ರಶ್ಮಿಕಾ ಮಂದಣ್ಣ 777 ಚಾರ್ಲಿ ಚಿತ್ರವನ್ನು ನೋಡಬೇಕು. ಈ ಚಿತ್ರವನ್ನು ನೋಡಿದರೆ ಸಾಕು ಎಲ್ಲರಿಗೂ ಕನ್ನಡದ ಸಿನಿಮಾ ಇಂಡಸ್ಟ್ರಿ ಬಗ್ಗೆ ಇಡೀ ಭಾರತವೇ ತಿರುಗಿ ನೋಡುವಂತೆ ಮಾಡುತ್ತಿದೆ. ರಶ್ಮಿಕಾ ಮಂದಣ್ಣ ನಿಮ್ಮನ್ನ ಬಿಟ್ಟು ಹೋಗಿರಬಹುದು, ಒಂದು ಹೃದಯ ಕೈಕೊಟ್ಟಿರಬಹುದು. ಆದರೆ ಏನಂತೆ ನಿಮ್ಮ ಜೊತೆಗೆ 7 ಕೋಟಿ ಕನ್ನಡಿಗರು ಜೊತೆಗಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಇನ್ನೂ ಕೆಲ ಅಭಿಮಾನಿಗಳು ನಾನೇ ಟಿಕೆಟ್ ಬುಕ್ ಮಾಡಿಕೊಡುತ್ತೇನೆ. ರಶ್ಮಿಕಾ ಮಂದಣ್ಣ ಅವರು ಈ ಚಿತ್ರವನ್ನು ನೋಡಿ ನಿಯತ್ತು ಎಂದರೆ ಏನು ಅಂತ ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ರಕ್ಷಿತ್ ಶೆಟ್ಟಿ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದು, ರಶ್ಮಿಕಾ ರನ್ನ ವಿಲನ್ ನಂತೆ ಕಾಣುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಸಿನಿಮಾದಲ್ಲಿ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಟ್ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಅವರ ಕೈಯಲ್ಲಿ ಸಪ್ತಸಾಗರದಾಚೆ ಎಲ್ಲೊ, ಪುಣ್ಯಕೋಟಿ, ಕಿರಿಕ್ ಪಾರ್ಟಿ 2 ಚಿತ್ರಗಳಿವೆ. ( video credit : lion tv kannada )