Rakshit Shetty : ರಕ್ಷಿತ್ ಶೆಟ್ಟಿ ಮದುವೆ ಯಾವಾಗ ಗೊತ್ತಾ: ಅವರ ಮಾತ್ನಲ್ಲೇ ಕೇಳಿ ?
Updated:Thursday, June 16, 2022, 11:47[IST]

ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರ ಪ್ಯಾನ್ ಇಂಡಿಯಾ ಚಾರ್ಲಿ 777 ಸಿನಿಮಾ ಇದೀಗ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡುತ್ತಿದೆ. ಪ್ಯಾನ್ ಇಂಡಿಯಾ ಚಿತ್ರವಾದ ಈ ಚಾರ್ಲಿ ಸಿನಿಮಾ ಸಿನಿ ಪ್ರಿಯರ ಹೃದಯವನ್ನು ಕದಿಯುವಲ್ಲಿ ಯಶಸ್ವಿಯಾಗಿದೆ. ಹಾಗೆ ಎಲ್ಲರಲ್ಲೂ ಕಣ್ಣೀರು ತರಿಸಿ ಮಾನವ ಮತ್ತು ನಾಯಿ ಬಾಂಧವ್ಯ ಹೇಗಿರುತ್ತದೆ ಎಂದು ತೋರಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರು ಇತ್ತೀಚಿಗೆ ಸ್ಟಾರ್ ನ್ಯೂಸ್ ಸುವರ್ಣ ಚಾನೆಲ್ ನಲ್ಲಿ ಅವರ ಬಗ್ಗೆ ಮತ್ತು ಅವರ ಸಿನಿಮಾ ವಿಚಾರಗಳ ಬಗ್ಗೆ ಹಾಗೆ ಕೆಲವೊಂದಿಷ್ಟು ವೈಯಕ್ತಿಕ ವಿಚಾರಗಳ ಬಗ್ಗೆಯೂ ಸಹ ಮಾತನಾಡಿದರು. ರಾಪಿಡ್ ಫೈಯರ್ ರೌಂಡ್ ನಡೆಸಿದ ನಿರೂಪಕಿ ನಟ ರಕ್ಷಿತ್ ಶೆಟ್ಟಿ ಅವರಿಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಮಾಡಿದರು.
ನಟ ರಕ್ಷಿತ್ ಶೆಟ್ಟಿ ಅವರು ಕೊಟ್ಟ ಕೆಲವೊಂದಿಷ್ಟು ಉತ್ತರ ಸಮಂಜಸವಾಗಿ ಕಂಡರೆ, ಇನ್ನು ಕೆಲವು ಉತ್ತರಗಳು ತುಂಬಾ ವಿಭಿನ್ನವಾಗಿ ಇದ್ದವು ಎಂದು ಹೇಳಬಹುದು.ಹೌದು ನಟ ರಕ್ಷಿತ್ ಶೆಟ್ಟಿ ಅವರಿಗೆ ಶೂಟ್ ಮಾಡಬೇಕಾ ಅಥವಾ ಟುಡೇ ಚಾರ್ಲಿ ಡೇ ಎನ್ನುವ ಎರಡು ಡೈಲಾಗ್ ಅಲ್ಲಿ ನಿಮ್ಮ ಫೆವರೆಟ್ ಡೈಲಾಗ್ ಯಾವುದು ಎಂದು ಕೇಳಿದಾಗ ಶೂಟ್ ಮಾಡಬೇಕ ಎಂದು ಉತ್ತರಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರಿಗೆ ಮಂಗಳೂರು ಮೀನ ಇಷ್ಟವಾ ಅಥವಾ ಬೆಂಗಳೂರಿನ ಬಿರಿಯಾನಿ ಇಷ್ಟವಾ ಎಂದು ಕೇಳಿದಾಗ ಬೆಂಗಳೂರಿನಲ್ಲಿ ಇದ್ದಾಗ ಬಿರಿಯಾನಿ ತಿನ್ನುತ್ತೇನೆ, ಆದರೆ ಮಂಗಳೂರಿನ ನನ್ನಿಷ್ಟದ ಒಂದು ಫಿಶ್ ಮಾಡಿದರೆ ನನಗೆ ಬೆಂಗಳೂರು ಬಿರಿಯಾನಿನೂ ಬೇಡ ಎಂದಿದ್ದಾರೆ. ನಂತರದಲ್ಲಿ ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ ಎಂಬ ಪ್ರಶ್ನೆಗೆ ಲವ್ ಮ್ಯಾರೇಜ್ ಎಂದು ಉತ್ತರಿಸಿದ್ದಾರೆ ರಕ್ಷಿತ್. ಆದರೆ ಯಾರನ್ನು ಲವ್ ಮಾಡುತ್ತಿದ್ದೇನೆ ಎಂದು ಹೇಳಿಲ್ಲ
ಜೊತೆಗೆ ಲವ್ ಫೇಲ್ಯೂರ್ ಡಿಪ್ರೆಶನ್ ಗೆ ಹೋಗಿದ್ದೀರಾ ಎನ್ನುವ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದ್ದಾರೆ ರಕ್ಷಿತ್ ಶೆಟ್ಟಿ. ತದನಂತರ ಕೆಜಿಎಫ್, ವಿಕ್ರಾಂತ್ ರೋಣ, ಆರ್ ಆರ್ ಆರ್ ಪುಷ್ಪ ಸಿನಿಮಾ ಎಂಬ ಪ್ರಶ್ನೆಗೆ, ಮೊದಲನೇಯದು ಕೆಜಿಎಫ್ ನಂತರ ವಿಕ್ರಾಂತ ರೋಣ, ಹಾಗೆ ಆರ್ ಆರ್ ಆರ್ ಮತ್ತು ಪುಷ್ಪ ಸಿನಿಮಾ ನೋಡಿಲ್ಲ ಟ್ರೈಲರ್ ನೋಡಿದಾಗ ಆರ್ ಆರ್ ಆರ್ ಮೊದಲು ಪುಷ್ಪ ನಂತರ ಎಂದು ಉತ್ತರಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರಿಗೆ ನಟಿ ರಮ್ಯಾ ಅವರು ನಿಮ್ಮ ಚಾರ್ಲಿ 777 ಸಿನಿಮಾ ನೋಡಿದ್ದಾರೆ ಎಂದು ಈ ಬಗ್ಗೆ ನಿಮ್ಮ ಮಾತು ಏನು ಎಂದಾಗ, ಸಿನಿಮಾ ನೋಡಿ ನಟಿ ರಮ್ಯಾ ಅವರು ಖುಷಿಪಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರನ್ನ ನಾನು ಭೇಟಿ ಮಾಡಿದ್ದು ಹಾಗೆ ಅವರಿಗೆ ಖಂಡಿತ ಇಷ್ಟ ಆಗುತ್ತದೆ ಎಂದು ನನಗೆ ಗೊತ್ತಿತ್ತು ಎನ್ನುವ ವಿಚಾರವನ್ನು ಸಹ ಹಂಚಿಕೊಂಡಿದ್ದಾರೆ.
ಹಾಗೆ ಇಷ್ಟರಲ್ಲೇ ಮದುವೆ ಆಗುತ್ತೇನೆ ಎನ್ನಲಾಗಿ ರಕ್ಷಿತ್ ಶೆಟ್ಟಿ ಮಾತನಾಡಿದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಮಾಹಿತಿ ತಪ್ಪದೇ ಶೇರ್ ಮಾಡಿ ಧನ್ಯವಾದ..