ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ಎರಡು ಹೊಸ ಸಿನಿಮಾದ ಬಗ್ಗೆ ಇಲ್ಲಿದೆ ಅಪ್ಡೇಟ್

By Infoflick Correspondent

Updated:Friday, September 2, 2022, 20:20[IST]

ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ  ಎರಡು ಹೊಸ ಸಿನಿಮಾದ ಬಗ್ಗೆ ಇಲ್ಲಿದೆ ಅಪ್ಡೇಟ್

ನಟನೆ ಮಾತ್ರವಲ್ಲದೆ, ನಿರ್ಮಾಪಕನಾಗಿಯೂ ಸೈ ಎನಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ, ಭಿನ್ನ ಸಿನಿಮಾಗಳು ಅವರ ನಿರ್ಮಾಣ ಸಂಸ್ಥೆಯಿಂದ ಹೊರ ಬರುತ್ತಿದೆ. ರಕ್ಷಿತ್ ಶೆಟ್ಟಿ 'ಪರಮವಃ' ಸ್ಟುಡಿಯೋಸ್ ಮೂಲಕ ಎರಡು ಹೊಸ ಸಿನಿಮಾ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದಾರೆ. 'ಬ್ಯಾಚುಲರ್ ಪಾರ್ಟಿ' ಹಾಗೂ 'ಇಬ್ಬನಿ ತಬ್ಬಿದ ಇಳೆಯಲಿ' ಹೆಸರಿನ ಎರಡು ಸಿನಿಮಾ ಅನೌನ್ಸ್ ಮಾಡಿದ್ದಾರೆ ನಟ ರಕ್ಷಿತ್ ಶೆಟ್ಟಿ ಹಾಗೂ ನಟ ರಿಷಬ್ ಶೆಟ್ಟಿ ಸೇರಿ ಒಟ್ಟಾಗಿ ಮತ್ತೊಮ್ಮೆ 'ಬ್ಯಾಚುಲರ್ ಪಾರ್ಟಿ' ಎಂಬ ಸಿನಿಮಾ ಮೂಲಕ ಒಟ್ಟಾಗಿ ನಟಿಸಲಿದ್ದಾರೆ. ಇದು ರಿಷಬ್ ಶೆಟ್ಟಿ ಚೊಚ್ಚಲ ನಿರ್ದೇಶನ. ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಈ ಚಿತ್ರದ ಫಸ್ಟ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ.   

ಜಿ.ಎಸ್.ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ರಿಷಭ್ ಶೆಟ್ಟಿ, ದಿಗಂತ್ ಮಂಚಾಲೆ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

ಔಟ್‌ ಆಯಂಡ್‌ ಔಟ್‌ ಕಾಮಿಡಿ ಕಥಾಹಂದರ ಹೊಂದಿರುವ “ಬ್ಯಾಚುಲರ್‌ ಪಾರ್ಟಿ’ ಚಿತ್ರಕ್ಕೆ ಅಭಿಜಿತ್‌ ಮಹೇಶ್‌ ನಿರ್ದೇಶನವಿದೆ. ಚಿತ್ರದಲ್ಲಿ ದಿಗಂತ್‌, ರಿಷಬ್‌ ಶೆಟ್ಟಿ, ಅಚ್ಯುತ ಕುಮಾರ್‌, ಸಿರಿ ರವಿಕುಮಾರ್‌, ಪವನ್‌ ಕುಮಾರ್‌, ಪ್ರಕಾಶ್‌ ತುಮ್ಮಿನಾಡ್‌, ರಘು ರಾಮನಕೊಪ್ಪ, ಅಶ್ವಿ‌ನ್‌ರಾವ್‌ ಪಲ್ಲಕ್ಕಿ, ಶೋಭರಾಜ್‌, ಬಾಲಾಜಿ ಮನೋಹರ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ರಾಮು ಛಾಯಾಗ್ರಹಣ, ಅರ್ಜುನ್‌ ರಾಮು ಸಂಗೀತವಿದೆ.

ಇಬ್ಬನಿ ತಬ್ಬಿದ ಇಳೆಯಲಿ'. ಇದು ರೆಟ್ರೋ ಸಾಂಗ್​ನ ಪಲ್ಲವಿ ಆಗಿದ್ದು, ಅದನ್ನೇ ನಿರ್ದೇಶಕರು ಟೈಟಲ್ ಆಗಿಸಿರೋದು ವಿಶೇಷ. ಚಂದ್ರಜಿತ್ ನಿರ್ದೇಶನದಲ್ಲಿ ಸೆಟ್ಟೇರಿರೋ ಈ ಸಿನಿಮಾದಲ್ಲಿ ಪಂಚತಂತ್ರ ಖ್ಯಾತಿಯ ನಟ ವಿಹಾನ್ ಹಾಗೂ ಅಂಕಿತಾ ಅಮರ್ ಲೀಡ್​ನಲ್ಲಿ ಕಾಣಸಿಗಲಿದ್ದಾರೆ. ಟೀಸರ್​ನಲ್ಲಿ ಚಿತ್ರ ಎಷ್ಟು ಕಲರ್​ಫುಲ್ ಇರಲಿದೆ ಅನ್ನೋದ್ರ ಗಮ್ಮತ್ತು ತೋರಿಸಿರೋ ಶೆಟ್ರ ಟೀಂ, ಸಿನಿಮಾನ ಅಷ್ಟೇ ಸುಮಧುರವಾಗಿ ಕಟ್ಟಿಕೊಡೋ ಯೋಜನೆಯಲ್ಲಿದ್ದಾರೆ.

ಒಟ್ಟಾರೆ ಎರಡೂ ಸಿನಿಮಾಗಳಿಂದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಒಂದೊಳ್ಳೆ ವೇದಿಕೆ ಕಲ್ಪಿಸುತ್ತಿರೋ ಸಿಂಪಲ್ ಸ್ಟಾರ್, ತಾನು ಬೆಳೆಯೋದ್ರ ಜೊತೆ ತನ್ನವರನ್ನೂ ಬೆಳೆಯಲು ಪ್ರೋತ್ಸಾಹ ನೀಡ್ತಿರೋದು ವಿಶೇಷ. ತಮ್ಮ ಸಪ್ತ ಸಾಗರದಾಚೆ ಎಲ್ಲೋ ಹಾಗೂ ರಿಚರ್ಡ್​ ಌಂಟನಿ ಸಿನಿಮಾಗಳ ಜೊತೆ ಜೊತೆಗೆ ಇದ್ರ ನಿರ್ಮಾಣದ ಕೆಲಸಗಳಲ್ಲೂ ರಕ್ಷಿತ್ ಬ್ಯುಸಿ ಆಗಲಿದ್ದಾರೆ.