Rakshit Shetty : ನನಗೆ ಸಿನಿಮಾಗಳಲ್ಲಿ ನಟಿಸುವ ಆಫರ್ ಬರಲ್ಲ: ನನ್ನ ಸಿನಿಮಾ ನಾನೇ ಮಾಡೋದು ಎಂದಿದ್ದೇಕೆ ಸಿಂಪಲ್ ಸ್ಟಾರ್..?

By Infoflick Correspondent

Updated:Wednesday, May 18, 2022, 17:17[IST]

Rakshit Shetty : ನನಗೆ ಸಿನಿಮಾಗಳಲ್ಲಿ ನಟಿಸುವ ಆಫರ್ ಬರಲ್ಲ: ನನ್ನ ಸಿನಿಮಾ ನಾನೇ ಮಾಡೋದು ಎಂದಿದ್ದೇಕೆ ಸಿಂಪಲ್ ಸ್ಟಾರ್..?

ನಟ ರಕ್ಷಿತ್ ಶೆಟ್ಟಿ ಅವರು 777 ಚಾರ್ಲಿ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ರಿಲೀಸ್ ಗೆ ಸಜ್ಜಾಗಿದೆ. 777 ಚಾರ್ಲಿ ಟ್ರೈಲರ್ ರಿಲೀಸ್ ವೇಳೆ ಮಾತನಾಡಿದ್ದು, ಈ ವೇಳೆ, ಸಿನಿಮಾದಲ್ಲಿ ನಟಿಸಿದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ನಿರ್ದೇಶನವನ್ನೂ ಕೂಡ ಮಾಡಿದ್ದಾರೆ. ಇದರ ಅನುಭವಗಳನ್ನು ಕೂಡ ರಕ್ಷಿತ್ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ. 777 ಚಾರ್ಲಿ ಚಿತ್ರ ತುಂಬಾ ವಿಶೇಷವಾಗಿದ್ದು, ಭಾವನಾತ್ಮಕವಾಗಿ ಚಿತ್ರೀಕರಿಸಲಾಗಿದೆ. ಈ ಚಿತ್ರದಿಂದ ಕಲಿತದ್ದೇನು ಎಂದು ವಿವರಣೆ ಕೊಡೋಕಾಗಲ್ಲ, ಹಾಗೇನಾದರೂ ಹೇಳಲು ಹೊರಟರೆ ನನ್ನ ಹುಚ್ಚ ಎಂದು ಕೊಳ್ಳುತ್ತೀರಾ ಎಂದು ತಮಾಷೆ ಮಾಡಿದರು.  

777 ಚಾರ್ಲಿ ಸಿನಿಮಾ ಜೂನ್ 10 ರಂದು ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಪರಮಂವ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಕಿರಣ್ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಹಲವರು ನಟಿಸಿದ್ದಾರೆ. ತಮಿಳಿನ ಬಾಬಿ ಸಿಂಹ, ಶಾರ್ವರಿ, ರಾಜ್ ಬಿ ಶೆಟ್ಟಿ, ದಾನೀಶ್‌ ಸೇಠ್, ಸಂಗೀತ ಶೃಂಗೇರಿ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ನೋಬಿನ್ ಪೌಲ್ ಅವರು ಸಂಗೀತ ನೀಡಿದ್ದಾರೆ.

ಈ ವೇಳೆ, ನಿಮಗೆ ಬೇರೆ ಸಿನಿಮಾಗಳಲ್ಲಿ ನಟಿಸುವ ಆಫರ್ ಬರಲಿಲ್ಲವಾ, ಬೇರೆ ಭಾಷೆಗಳಿಂದ ಆಫರ್ ಏನಾದರೂ ಬಂದಿದೆಯಾ ಎಂದು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಉತ್ತರಿಸುವ ರಕ್ಷಿತ್ ಶೆಟ್ಟಿ ಅವರು ನನಗೆ ಸಿನಿಮಾಗಳಲ್ಲಿ ನಟಿಸಲು ಯಾರೂ ಆಫರ್ ಕೊಡುವುದಿಲ್ಲ. ನನ್ನ ಸಿನಿಮಾಗಳನ್ನು ನಾನೇ ಮಾಡಬೇಕು ಎಂದು ಹೇಳಿದ್ದಾರೆ. ಇನ್ನು 777 ಚಾರ್ಲಿ ಸಿನಿಮಾ ಟ್ರೈಲರ್ ರಿಲೀಸ್ ವೇಳೆ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಕಿರಣ್ ರಾಜ್, ಸಂಗೀತ ಶೃಂಗೇರಿ ಎಲ್ಲರೂ ಭಾಗಿಯಾಗಿದ್ದರು.