Rakshita : ಡಿಕೆಡಿ ಷೋನಲ್ಲಿ ಪುನೀತ್ ನೆನೆದು ಭಾವುಕರಾಗಿ ನಟಿ ರಕ್ಷಿತಾ ಹೇಳಿದ ಮಾತುಗಳಿವು
Updated:Wednesday, May 18, 2022, 10:14[IST]

ಅಪ್ಪು ಅವರ ಅಗಲಿಕೆಯ ನೋವು ಇನ್ನೂ ನಮ್ಮ ಮನಸ್ಸಿನಲ್ಲಿದೆ. ಪ್ರತಿಕಾರ್ಯಕ್ರಮದಲ್ಲೂ ಅಪ್ಪು ನೆನಪು ಇರುತ್ತದೆ. ಟಿವಿ ರಿಯಾಲಿಟಿ ಶೋ ಒಂದರಲ್ಲಿ ನಟಿ ರಕ್ಷಿತಾ ಮತ್ತು ಶಿವರಾಜಕುಮಾರ್, ಹಾಗು ಅನುಶ್ರೀ ಪುನೀತ್ ನೆನೆದು ಕಣ್ಣೀರು ಹಾಕಿದರು.
ಪುನೀತ್ ರಾಜ್ಕುಮಾರ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದು ‘ಅಪ್ಪು’ ಸಿನಿಮಾ ಮೂಲಕ. ಈ ಚಿತ್ರ ಸ್ಯಾಂಡಲ್ವುಡ್ನಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಮೊದಲ ಸಿನಿಮಾದಲ್ಲೇ ಗೆದ್ದು ಬೀಗಿದ್ದರು ಪುನೀತ್. ಈ ಚಿತ್ರ ತೆರೆಗೆ ಬಂದಿದ್ದು 2002ರ ಏಪ್ರಿಲ್ 26ರಂದು. ಈ ಸಿನಿಮಾ ತೆರೆಗೆ ಬಂದು ಇಂದಿಗೆ 20 ವರ್ಷಗಳು ಕಳೆದಿವೆ.
ಈ ಸಿನಿಮಾದ ನಾಯಕಿಯಾಗಿ ರಕ್ಷಿತಾ ಮಿಂಚಿದ್ದರು. ಇಬ್ಬರ ಜೊಡಿ ಜನ ಮನ ಗೆದ್ದಿತ್ತು. ಈ ಸಂಭ್ರವನ್ನು ಆಚರಿಸಿಕೊಳ್ಳಲು ಪುನೀತ್ ನಮ್ಮ ಜತೆ ಇಲ್ಲ ಅನ್ನೋದು ನಿಜಕ್ಕೂ ಬೇಸರದ ಸಂಗತಿ.
ರಕ್ಷಿತಾ ಪ್ರೇಮ್ 'ಅಪ್ಪು ಅಗಲಿಕೆಯಿಂದ ನಾನಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಹಲವಾರು ವಿಷಯಗಳು ನನ್ನನ್ನೂ ಇನ್ನೂ ಕಾಡುತ್ತಿವೆ. ಪ್ರತಿಕಾರ್ಯಕ್ರಮವೂ ಅಪ್ಪು ಇಲ್ಲದೆ ಅಪೂರ್ಣ ಎನ್ನಿಸುತ್ತದೆ. ಅಪ್ಪು ಇಂದಿಗೂ ಎಂದಿಗೂ ನಮ್ಮ ಮನಸ್ಸಲ್ಲಿದ್ದಾರೆ ಎಂದು ಕಣ್ಣೀರು ಹಾಕಿದರು. ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದರಲ್ಲೂ ಅವರ ನಗುವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಅಪ್ಪು ಸಿನಿಮಾ ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದಿದ್ದಾರೆ ರಕ್ಷಿತಾ.