Rakshita : ಇಲ್ಲಿದೆ ಹಲವರಿಗೆ ಮಾದರಿಯಾದ ರಕ್ಷಿತಾ ಪ್ರೇಮ್ ಅವರ ಪ್ರೇಮದ ಜೀವನ ಕಥೆ
Updated:Sunday, May 22, 2022, 10:48[IST]

ತೂಕ ಇಳಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಚೇತನಾ ರಾಜ್ ಬಗ್ಗೆ ದೊಡ್ಡಮಟ್ಟದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚಿತ್ರರಂಗದಲ್ಲಿ ನಟಿಯರನ್ನು ನೋಡುವ ರೀತಿ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಇದೀಗ ಚಿತ್ರರಂಗದಲ್ಲಿರುವ ಬಾಡಿ ಶೇಮಿಂಗ್ ಬಗ್ಗೆಯೂ ನಟಿಯರು ದನಿಯೆತ್ತುತ್ತಿದ್ದಾರೆ. ನಟಿಯರಾದ ರಮ್ಯಾ, ಪ್ರಿಯಾಂಕಾ ಉಪೇಂದ್ರ, ಅಶ್ವಿತಿ ಶೆಟ್ಟಿ, ರಾಖಿ ಸಾವಂತ್ ಸೇರಿದಂತೆ ಅನೇಕರು ಚಿತ್ರರಂಗದಲ್ಲಿರುವ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಕಾಸ್ಮೆಟಿಕ್ ಸರ್ಜರಿ ಕಾರಣಕ್ಕೆ ನಡಿ ಚೇತನಾ ರಾಜ್ ಸಾವನ್ನಪ್ಪುತ್ತಿದ್ದಂತೆ ಎಲ್ಲರ ಗಮನವೂ ನಟಿ ಬ್ರಹ್ಮಗಂಟು ಖ್ಯಾತಿಯ ಭಾರತಿ ಭಟ್, ನಿರೂಪಕಿ, ನಟಿ ಶಾಲಿನಿ ಹಾಗು ನಟಿ ರಕ್ಷಿತಾ ಪ್ರೇಮ ನತ್ತ ಹೋಗಿ, ಜನರಿಗೆ ಇವರುಗಳು ಈಗ ಮಾದರಿಯಾಗುತ್ತಿದ್ದಾರೆ.
ರಕ್ಷಿತಾ ಪ್ರೇಮ ಮೊದಲು ಬಳಕುವ ಬಳ್ಳಿಯಂತಿದ್ದರು ನಂತರ ಅನ್ಯಕಾರಣದಿಂದ ದಪ್ಪಗಾದ್ರು ದೇಹದ ಬಗ್ಗೆ ಜನರ ಮಾತಿಗೆ ತಲೆಕೊಡದೆ ನಟನೆ, ರಿಯಾಲಿಟಿ ಶೋದಲ್ಲಿ ನಿರ್ಣಾಯಕರಾಗಿ ಹಾಗು, ನಿರ್ಮಾಪಕರಾಗಿ ಹೀಗೆ ಉತ್ತಮ, ಆದರ್ಶ ಮಹಿಳೆಯಾಗಿ ಬದುಕು ರೂಪಿಸಿಕೊಂಡು ಮಾದರಿಯಾಗಿದ್ದಾರೆ. ಇದನ್ನು ದಪ್ಪ ಇರುವ ಎಲ್ಲ ನಟಿಯರು ಮತ್ತು ಮಹಿಳೆಯರು ಅರ್ಥ ಮಾಡಿ ಕೊಳ್ಳ ಬೇಕು . ಸಣ್ಣ ಅಥವಾ ದಪ್ಪ ಎನ್ನುವ ಯೋಚನೆ ಬಿಟ್ಟು ತಮ್ಮಲ್ಲಿ ಇರುವ ಪ್ರತಿಭೆ ತೋರಿಸಿ ಕೊಳ್ಳಬೇಕು 2002 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ `ಅಪ್ಪು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.ನಂತರ ಈ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್ನಲ್ಲಿ ಕೂಡ ನಾಯಕಿಯಾಗಿ ನಟಿಸಿದರು.ದರ್ಶನ್ರವರ ಕಲಾಸಿಪಾಳ್ಯ ಚಿತ್ರ ರಕ್ಷಿತಾ ಸಿನಿ ಕರಿಯರ್ಗೆ ಬಿಗ್ಬ್ರೇಕ್ ನೀಡಿತು.
ಕನ್ನಡದಲ್ಲಿ ಪುನೀತ್, ದರ್ಶನ್, ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಶ್ರೀಮುರಳಿ ಮುಂತಾದ ನಟರೊಂದಿಗೆ ನಟಿಸಿದ ರಕ್ಷಿತಾ ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ,ಎನ್.ಟಿ.ಆರ್ ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡರು. ಕನ್ನಡದಲ್ಲಿ ದರ್ಶನ್-ರಕ್ಷಿತಾ ಜೋಡಿ ಸಾಕಷ್ಟು ಪ್ರಸಿದ್ಧಿಯಾಗಿತ್ತು.
ಪ್ರೇಮ್ ಜೊತೆ ವಿವಾಹವಾದ ನಂತರ ನಟನೆಗೆ ವಿರಾಮ ಹೇಳಿದ ರಕ್ಷಿತಾ ತಮ್ಮ ಹೋಮ್ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣಕ್ಕಿಳಿದರು. ಶಿವರಾಜಕುಮಾರ್ರವರ ನೂರನೇ ಚಿತ್ರ ಜೋಗಯ್ಯವನ್ನು ನಿರ್ಮಾಣವನ್ನು `ಪ್ರೇಮ್ ಪಿಕ್ಚರ್ಸ್' ಅಡಿಯಲ್ಲಿ ನಿರ್ಮಾಣ ಮಾಡಿದರು. ಇದೇ ಬ್ಯಾನರ್ನಲ್ಲಿ ಪ್ರೇಮ್ ನಟನೆಯ `ಡಿ.ಕೆ' ಚಿತ್ರವನ್ನು ನಿರ್ಮಿಸಿದ್ದಾರೆ.ಕಿರುತೆರೆಯಲ್ಲಿ ನಿರೂಪಕಿಯಾಗಿ `ಸ್ವಯಂವರ' ಕಾರ್ಯಕ್ರಮ ನಿರೂಪಣೆ ಮಾಡಿರುವ ರಕ್ಷಿತಾ ಹಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.ಇವುಗಳಲ್ಲಿ ಜೀ ಕನ್ನಡದ `ಕಾಮಿಡಿ ಖಿಲಾಡಿಗಳು' ತುಂಬಾ ಪ್ರಸಿದ್ಧವಾಗಿದೆ.
2012 ರಲ್ಲಿ ಶ್ರೀರಾಮಲು ನೇತೃತ್ವದ `ಬಿ.ಎಸ್.ಆರ್. ಕಾಂಗ್ರಸ್' ಸದಸ್ಯೆಯಾಗಿದ್ದ ರಕ್ಷಿತಾ ಕೆಲವು ಭಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದು 2013 ರಲ್ಲಿ ಜೆಡಿಎಸ್ ಪಕ್ಷ ಸೇರಿದರು. ನಂತರ 2014 ರಲ್ಲಿ ಬಿಜೆಪಿ ಸೇರಿದರು.
ಸದ್ಯ ರಿಯಾಲಿಟಿ ಶೋ ಗಳಲ್ಲಿ ನಿರ್ಣಾಯಕ ರಾಗಿ ಬಿಜಿ ಇರುವ ರಕ್ಷಿತಾ ಪ್ರೇಮ ಹಲವರಿಗೆ ಆದರ್ಶ. ಪ್ರತಿಭೆ ಇದ್ದರೆ ಬದುಕಬಹುದು ಎಂಬುದನ್ನು ತೋರಿಸಿದ್ದಾರೆ.