ರಕ್ಷಿತ್ ಶೆಟ್ಟಿ ಜೊತೆಗೆ ಸಿಹಿ ಸುದ್ದಿ ಕೊಟ್ಟ ಅಂಕಿತ ಅಮರ್..! ಅಭಿಮಾನಿಗಳು ಬಾರಿ ಖುಷ್..!

By Infoflick Correspondent

Updated:Friday, June 3, 2022, 10:57[IST]

ರಕ್ಷಿತ್ ಶೆಟ್ಟಿ ಜೊತೆಗೆ ಸಿಹಿ ಸುದ್ದಿ ಕೊಟ್ಟ ಅಂಕಿತ ಅಮರ್..! ಅಭಿಮಾನಿಗಳು ಬಾರಿ ಖುಷ್..!

ಕನ್ನಡ ಕಿರುತೆರೆಯ ಲೋಕದಲ್ಲಿ ಸಾಕಷ್ಟು ಕಲಾವಿದರು ಅವರದೇ ಆದ ಅಭಿನಯದ ಮೂಲಕ ಹೆಚ್ಚು ಜನರಿಗೆ ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಹೌದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ ಎಂಬ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾದ ನಟಿ ಅಂಕಿತ ಅಮರ್ ಅವರು ಇದೀಗ ಹೆಚ್ಚು ಸಕ್ರಿಯ ಆಗಿರುವ ನಟಿ.. ಅತ್ತ ತೆಲುಗು ಕಿರುತೆರೆ ಧಾರಾವಾಹಿಯೊಂದರಲ್ಲಿ ಚಂದನ್ ಅವರ ಜೊತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಾ ಅಂಕಿತ ಅಮರ್ ಅವರು ಸಿನಿಮಾ ಕೆಲಸಗಳಲ್ಲಿಯೂ ಹೆಚ್ಚು ಬ್ಯುಸಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ದಿಯಾ ಖ್ಯಾತಿಯ ಪೃತ್ವಿ ಅಂಬರ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಟಿ ಅಂಕಿತ ಅಮರ್. ನಮ್ಮನೆ ಯುವರಾಣಿ ಸೀರಿಯಲ್ ನಿಂದ ಹೊರ ಬಂದ ನಟಿ ಮೀರಾ ಪಾತ್ರದಲ್ಲಿ ಹೆಚ್ಚು ಜನರ ಮನಸ್ಸಿನಲ್ಲಿ ಇಂದಿಗೂ ಉಳಿದು ಗುರುತಿಸಿಕೊಳ್ಳುತ್ತಿರುವುದು ವಿಶೇಷ. 

ಈ ಕೋಳಿಮರಿ ಮೀರಾ, ಸಾಕೆತ್ ಅನಿಕೇತ್ ಈ ಮೂವರ ಕಾಂಬಿನೇಷನ್ನಲ್ಲಿ ನಡೆಯುತ್ತಿದ್ದ ನಮ್ಮನೆ ಯುವರಾಣಿಯ ಸೀರಿಯಲ್ ನ ಜಗಳ ಈಗಲೂ ಹೆಚ್ಚು ಇಷ್ಟವಾಗುತ್ತದೆ. ನಟಿ ಅಂಕಿತ ಅಮರ್ ಈ ಸೀರಿಯಲ್ ನಿಂದ ಹೊರಬಂದ ಬಳಿಕ ಎದೆ ತುಂಬಿ ಹಾಡುವೇನು ಶೋದ ನಿರೂಪಕಿಯಾಗಿಯೂ ಸಹ ಕಾಣಿಸಿಕೊಂಡರು. ಹೌದು ಒಂದರಮೇಲೊಂದರಂತೆ ಸಿನಿಮಾಗಳ ಆಫರ್ ಪಡೆಯುತ್ತಿರುವ ಅಂಕಿತ ಅಮರ್  ಈಗ ತೆಲುಗಿನ ಸೀರಿಯಲ್ನಲ್ಲಿ ಅಭಿನಯ ಮಾಡುತ್ತಿದ್ದಾರೆ. ಇದೀಗ ರಕ್ಷಿತ್ ಶೆಟ್ಟಿ ಕಡೆಯಿಂದಲೂ ಕೂಡ ಮತ್ತೊಂದು  ಸಿಹಿ ಸುದ್ದಿ ತಿಳಿದುಬಂದಿದೆ. ಇತ್ತೀಚಿಗೆ ತಮ್ಮ ಹುಟ್ಟುಹಬ್ಬ ಸಿಂಪಲ್ಲಾಗಿ ಆಚರಣೆ ಮಾಡಿಕೊಂಡ ನಟಿ ಅಂಕಿತ ಅಮರ್ ಅವರಿಗೆ ನಟ ರಕ್ಷಿತ್ ಶೆಟ್ಟಿ ಅವರ ಪರಮಂ ಸ್ಟುಡಿಯೋ ಕಡೆಯಿಂದ, ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಬರುತ್ತಿರುವ ಹೊಸ ಸಿನಿಮಾಗೆ ಅಂಕಿತ ಅಮರ್ ಅವರು ನಟಿಯಾಗಿ ಅಭಿನಯಿಸುತ್ತಿದ್ದಾರಂತೆ. 

ಈ ಮೂಲಕ ನಟಿಗೆ ಶುಭಾಶಯ ಕೋರಿ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಸ್ಟುಡಿಯೋ ಈ ವಿಚಾರ ಬಹಿರಂಗಪಡಿಸಿದೆ. ಈ ಸಿಹಿ ಸುದ್ದಿ ತಿಳಿದು ನಟ ರಕ್ಷಿತ್ ಶೆಟ್ಟಿ ಅವರ ನಿರ್ಮಾಣದಲ್ಲಿ ಬರುತ್ತಿರುವ ಹೊಸ ಸಿನಿಮಾದ ನಾಯಕಿಯಾಗಿ ನಟಿ ಅಂಕಿತ ಅಮರ್ ಅವರಿಗೆ ಇನ್ನಷ್ಟು ಹೆಚ್ಚು ಅವಕಾಶಗಳು ಸಿಗಲಿ ಅವರ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು..