ರಕ್ಷಿತ್ ಶೆಟ್ಟಿ ನಟ ಸುದೀಪ್ ಬಗ್ಗೆ ಆಡಿದ ಮಾತಿಗೆ ತಬ್ಬಿಕೊಂಡ ಸುದೀಪ್..! ಸ್ವೀಟ್ ಮೂಮೆಂಟ್

By Infoflick Correspondent

Updated:Wednesday, June 22, 2022, 16:15[IST]

ರಕ್ಷಿತ್ ಶೆಟ್ಟಿ ನಟ ಸುದೀಪ್ ಬಗ್ಗೆ ಆಡಿದ ಮಾತಿಗೆ ತಬ್ಬಿಕೊಂಡ ಸುದೀಪ್..! ಸ್ವೀಟ್ ಮೂಮೆಂಟ್

ಕನ್ನಡ ಸಿನಿಮಾರಂಗದ ಮತ್ತೊಂದು ಅತಿ ದೊಡ್ಡ ಪ್ಯಾನ್ ಇಂಡಿಯಾ ಮೂವಿ ಕಿಚ್ಚ ಸುದೀಪ್ ಅವರ ಅಭಿನಯದ ಮತ್ತು ಅನುಪ್ ಬಂಡಾರಿ ನಿರ್ದೇಶನದಲ್ಲಿ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ನಟ ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ಭರ್ಜರಿ ಪರ್ಫಾರ್ಮೆನ್ಸ್ ಮಾಡಿರುವುದು ಖಾತರಿಯಾಗಿದೆ. ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಜೊತೆಗೆ ಇದು ಕೂಡ ಕನ್ನಡದ ನೆಕ್ಸ್ಟ್ ಲೆವೆಲ್ ಸಿನಿಮಾ ಅಗಲಿದ್ದು, ಅವರ ಅಭಿಮಾನಿಗಳು ತುಂಬಾ ಕಾತರದಿಂದ ಹೆಚ್ಚಾಗಿ ಕಾಯುತ್ತಿದ್ದಾರೆ. ಹೌದು ಇತ್ತೀಚೆಗಷ್ಟೇ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದು ಬಿಡುಗಡೆಯಾಗಿತ್ತು. ರಾ ರಾ ರಕ್ಕಮ್ಮ ಎಂದು ಫರ್ನಾಂಡಿಸ್ ಹಾಗೂ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ ಪರಿಗೆ ಎಲ್ಲರೂ ಬೆರಗಾಗಿದ್ದರು. ಜೊತೆಗೆ ಈ ಹಾಡು ಕೂಡ ಅಷ್ಟೇ ವೈರಲ್ ಆಗಿದ್ದು ಖುಷಿಹ ವಿಚಾರ ಎನ್ನಬಹುದು.

ಇಂಡಿಯಾ ತುಂಬಾ ಇದೀಗ ಸಾಕಷ್ಟು ಯುವ ಕಲಾವಿದರು, ಹಾಗೂ ರಿಲ್ಸ್ ಮಾಡುವವರು ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಹೌದು ಬಂಧುಗಳೇ ಕಿಚ್ಚ ಸುದೀಪ್ ಅವರ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ನಾಳೆ ಲಾಂಚ್ ಆಗಲಿದೆ. ಅದರ ಟ್ರೈಲರ್ ಲಾಂಚ್ ಎವೆಂಟ್ ಈಗ ನಡೆಯುತ್ತಿದೆ. ಇದೀಗ ಬಂದ ವಿಡಿಯೋವೊಂದು ವೈರಲ್ ಆಗುತ್ತಿದ್ದು. ನಟ ಕಿಚ್ಚ ಸುದೀಪ್ ಅವರ ಬಗ್ಗೆ ಮತ್ತು ಅವರ ಸಿನಿಮಾದ ಬಗ್ಗೆ ರಕ್ಷಿತ್ ಶೆಟ್ಟಿ ವೇದಿಕೆ ಮೇಲೆ ಮಾತನಾಡಲು ಬಂದಿದ್ದರು. ಅವರ ಮಾತಿನ ಪರಿಗೆ ನಿಜ ಎಲ್ಲರೂ ಫಿದಾ ಆಗಿದ್ದಾರೆ. ಒಬ್ಬ ದೊಡ್ಡ ಸ್ಟಾರ್ ನಟ ಆಗಿ ನಮ್ಮ ಎಲ್ಲ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾರೆ ಸುದೀಪ್ ಅವರು. ನಮ್ಮ ಉಳಿದವರು ಕಂಡಂತೆ ಮತ್ತು ಇತ್ತೀಚಿನ ಚಾರ್ಲಿ ಸಿನಿಮಾಕ್ಕೂ ಪ್ರೋತ್ಸಾಹ ನೀಡಿ ಅಭಿನಂದಿಸಿದ್ದರು ಎಂದರು ರಕ್ಷಿತ್ ಶೆಟ್ಟಿ.  

ಉಳಿದವರು ಕಂಡಂತೆ ಸಿನಿಮಾ ವೇಳೆ ದೊಡ್ಡದಾಗಿಯೇ ನನ್ನ ಪರ್ಫಾರ್ಮೆನ್ಸ್ ಬಗ್ಗೆ ಅವರು ಅಭಿಪ್ರಾಯ ತಿಳಿಸಿದ್ದರು. ಅದು ನನಗೆ ನಿಜಕ್ಕೂ ಹೆಮ್ಮೆಯೆನಿಸಿತ್ತು. ಒಬ್ಬ ದೊಡ್ಡ ಸ್ಟಾರ್ ನಟ ನಮ್ಮ ಸಿನಿಮಾದ ಬಗ್ಗೆ ನಮ್ಮ ಪರ್ಫಾಮೆನ್ಸ್ ಬಗ್ಗೆ ಹೇಗೆ ಹೇಳುತ್ತಾರೆ ಎಂದು ಹೆಚ್ಚು ಖುಷಿಯಾಗುತ್ತಿತ್ತು. ಹಾಗೆ ನಾನು ತಲೆಯಲ್ಲಿ ಇದೆಲ್ಲಾ ಹೇಗೆ ಸಾಧ್ಯ ಎಂದು ಅದನ್ನೇ ಯೋಚಿಸಿದ್ದೆ. ಹಾಗೆ ಭಾರತದಲ್ಲಿ ದೊಡ್ಡ 5 ಖ್ಯಾತ ಸ್ಟಾರ್ ನಟರುಗಳು ಹೆಸರು ಹೇಳಿರಿ ಎಂದು ನನ್ನ ಕೇಳಿದರೆ ನಾನು ಸುದೀಪ್ ಸಾರ್ ಅವರಲ್ಲಿ ಒಬ್ಬರು ಎಂದು ಅವರ ಹೆಸರನ್ನ ತೆಗೆದುಕೊಳ್ಳುತ್ತೇನೆ ಎಂದರು. ಆಗ ಸುದೀಪ್ ಅವರು ಇದ್ದಕ್ಕಿದ್ದಂತೆ ಎದ್ದು ಬಂದು ರಕ್ಷಿತ್ ಶೆಟ್ಟಿ ಅವರನ್ನು ತಬ್ಬಿಕೊಳ್ಳುತ್ತಾರೆ.

ಆ ದೃಶ್ಯ ಸಕ್ಕತ್ ಸ್ವೀಟ್ ಮೂಮೆಂಟ್ ಆಗಿತ್ತು. ಇಲ್ಲಿದೆ ನೋಡಿ ಆ ವಿಡಿಯೋ. ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ವಿಕ್ರಾಂತ್ ರೋಣ ಸಿನಿಮಾಗೆ ನೀವು ಕಾಯುತ್ತಿದ್ದರೆ ನಿಮ್ಮ ಅಭಿಪ್ರಾಯವನ್ನು ಹೇಳಿ ಧನ್ಯವಾದಗಳು. ( video credit : top kannada tv )..