ಅಸಲಿಗೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿಸಿರಲಿಲ್ಲವೇ..?

By Infoflick Correspondent

Updated:Saturday, June 18, 2022, 18:13[IST]

ಅಸಲಿಗೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿಸಿರಲಿಲ್ಲವೇ..?

ಸೂಪರ್ ಆಗಿದ್ದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಜೋಡಿ ಕಾರಣಾಂತರಗಳಿಂದ ಬೇರೆಯಾಗಿ ಮೂರು ವರ್ಷವೇ ಕಳೆದಿದೆ. ಆದರೂ ಕೂಡ ಇಂದಿಗೂ ಇವರಿಬ್ಬರು ಒಬ್ಬರ ಮೇಲೊಬ್ಬರ ಗೌರವ ಕಳೆದುಕೊಂಡಿಲ್ಲ. ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಏನ್ ಹೇಳಿದ್ದಾರೆ ಅಂತ ಗೊತ್ತಾದರೆ, ನಿಮ್ಮ ಮನಸ್ಸು ತುಂಬಿ ಬರುತ್ತದೆ.


ಕಳೆದ ವಾರ ರಕ್ಷಿತ್ ಶೆಟ್ಟಿ (Rakshith Shetty) ಹುಟ್ಟು ಹಬ್ಬ ಹಿನ್ನೆಲೆ ಅವರ ಮುಂದಿನ ಸಿನಿಮಾ 777 ಚಾರ್ಲಿ  (Charlie 777) ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಸಿನಿಮಾ ನೋಡಿದ ಹಲವರು ರಶ್ಮಿಕಾ ಮಂದಣ್ಣ ರನ್ನು ನಾಯಿಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ. ನಿಯತ್ತಿಲ್ಲದ ರಶ್ಮಿಕಾ ಎಂದೆಲ್ಲಾ ಮಾತನಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಿಮ್ಮನನ್ನ ಬಿಟ್ಟು ಹೋಗಿರಬಹುದು, ಒಂದು ಹೃದಯ ಕೈಕೊಟ್ಟಿರಬಹುದು. ಆದರೆ ಏನಂತೆ ನಿಮ್ಮ ಜೊತೆಗೆ 7 ಕೋಟಿ ಕನ್ನಡಿಗರು ಜೊತೆಗಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.


ಇನ್ನು ರಕ್ಷಿತ್ ಮನೆಯಲ್ಲಿ ಮದುವೆಯ ಪ್ರಸ್ತಾಪ್ ಬಂದಿದ್ದಕ್ಕೂ, ಗಾಂಧಿನಗರದಲ್ಲಿ ರಶ್ಮಿಕಾ ಹಾಘೂ ರಕ್ಷಿತ್ ಒಂದಾದರೆರ ಚೆಂದ ೆಂದು ಚರ್ಚೆ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಇವರಿಬ್ಬರ ಮನೆಯಲ್ಲಿ ಮಾತುಕತೆ ನಡೆಸಿ ಎಂಗೇಜ್ಮೆಂಟ್ ಮಾಡಲಾಯ್ತು. ಆದರೆ ಇವರಿಬ್ಬರ ಮದುವೆ ಮುರಿಯಲು ರಶ್ಮಿಕಾ ತಾಯಿ ಎಂದು ಹೇಳಲಾಗುತ್ತಿದೆ. ರಕ್ಷಿತ್, ರಶ್ಮಿಕಾ ಎಂಗೇಜ್ ಮೆಂಟ್ ಆದಮೇಲೆ ಅವರ ತಾಯಿ ವಯಸ್ಸಿನ ವಿಚಾರವಾಗಿ ತಗಾದೆ ತೆಗೆದಿದ್ದರಂತೆ. ಬಳಿಕ ರಶ್ಮಿಕಾಗೆ ತೆಲುಗು ಚಿತ್ರಗಳ ಆಫರ್ ಬರಲು ಶುರುವಾಯಿತಂತೆ ಆಗ, ಆಕೆ ಭವಿಷ್ಯದ ಬಗ್ಗೆ ಯೋಚಿಸಿದ ಅವರ ತಾಯಿ ಮದುವೆ ಬೇಕಾ ಎಂಬ ಪ್ರಶ್ನೆ ತೆಗೆದರಂತೆ.


ತದನಂತರ ಹಣದ ವಿಚಾರದಲ್ಲಿ ಎರಡು ಕುಟುಂಬಸ್ಥರ ನಡುವೆ ಸ್ವಲ್ಪ ಬಿರುಕು ಮೂಡಿದೆ. ಇದೇ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಲಿಪ್ ಲಾಕ್ ಸೀನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರ ಸಂಬಂಧ ಮುರಿದು ಬಿತ್ತು. ರಕ್ಷಿತ್ ಸೋಶಿಯಲ್ ಮೀಡಿಯಾಗಳಿಂದಲೇ ದೂರ ಉಳಿದು ಬಿಟ್ಟರು. ಇಷ್ಟಾದರೂ ಇವರಿಬ್ಬರ ನಡುವೆ ಗೌರವ ಒಂದು ಇಂಚು ಕಡಿಮೆಯಾಗಿಲ್ಲ.