Rakshith Shetty : ನೋವಿನಲ್ಲೇ ತಮ್ಮ ಮನೆಯ ನಾಯಿಯ ಸಾಯಿಸಿದ ವಿಚಾರ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ..! ಸಾಯಿಸಿದ್ದು ಯಾರು

By Infoflick Correspondent

Updated:Tuesday, June 7, 2022, 19:20[IST]

Rakshith Shetty :  ನೋವಿನಲ್ಲೇ ತಮ್ಮ ಮನೆಯ ನಾಯಿಯ ಸಾಯಿಸಿದ ವಿಚಾರ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ..! ಸಾಯಿಸಿದ್ದು ಯಾರು

ಕನ್ನಡ ಚಿತ್ರರಂಗದ ಯುವ ನಾಯಕ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಇದೀಗ 777 ಚಾರ್ಲಿ ಬಿಡುಗಡೆಯ ಹಂತದ ಖುಷಿಯಲ್ಲಿದ್ದಾರೆ. ಹೌದು ಇದೆ ಜೂನ್ ಹತ್ತನೇ ತಾರೀಕು 777 ಚಾರ್ಲಿ ಸಿನಿಮಾ ಭರ್ಜರಿಯಾಗಿ ತೆರೆ ಮೇಲೆ ಎಂಟ್ರಿ ಪಡೆಯುತ್ತಿದೆ. ಈಗಾಗಲೇ ಪ್ರೀಮಿಯರ್ ಶೋ ಇಡೀ ದೇಶದಾದ್ಯಂತ ಪ್ರಸಾರ ಆಗಿದ್ದು, ಸಿನಿಮಾ ಸಕಾರಾತ್ಮಕ ಅಭಿಪ್ರಾಯ ಗಿಟ್ಟಿಸಿಕೊಂಡಿದೆ. ಚಿತ್ರತಂಡ ಸಿನಿಮಾ ಮೇಲೆ ಟ್ರೈಲರ್ ಮೂಲಕವೇ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದ್ದು, ಅತ್ತ ಹೈಪ್ ಕ್ರಿಯೇಟ್ ಮಾಡಿದ 777 ಚಾರ್ಲಿ ಈಗ ಬಿಡುಗಡೆಗೆ ಕ್ಷಣಗಣನೆ ಮಾತ್ರ ಎಂದು ಹೇಳಬಹುದು. ಜೂನ್ ಆರು ರಕ್ಷಿತ್ ಶೆಟ್ಟಿ ಅವರಿಗೆ ವಿಶೇಷವಾದ ದಿನ. ಕಾರಣ ಅವರು ಹುಟ್ಟಿದ ದಿನ.

ರಕ್ಷಿತ್ ಶೆಟ್ಟಿ ಅವರು, ಅವರ ಸಿನಿಮಾ 777 ಚಾರ್ಲಿ ತಂಡದ ಜೊತೆ ನಿನ್ನೆ ಮಾಧ್ಯಮ ಮಿತ್ರರನ್ನು ಕರೆಸಿದ್ದರು. ಆಗ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ ಅವರು ಇದೇ ಮೊದಲ ಬಾರಿ ನನ್ನ ಸಿನಿಮಾ ಜೂನ್ನಲ್ಲಿ ಬಿಡುಗಡೆಯಾಗುತ್ತಿರುವುದು, ತುಂಬಾನೇ ಖುಷಿ ತಂದಿದೆ. ಜೊತೆಗೆ ದೇಶದಲ್ಲಿ ಒಳ್ಳೆಯ ಪ್ರತಿಕ್ರಿಯೆ ಬರುತ್ತಿರುವುದು ಸಿನಿಮಾದ ಸ್ಕ್ರಿಪ್ಟ್ ಸಮಯದಲ್ಲಿ ನಾವು ಅಂದುಕೊಂಡಂತೆ ನಗು ಮತ್ತು ಅಳು ಎಲ್ಲವನ್ನು ಈ ಸಿನಿಮಾ ತೋರಿಸಲಿದೆ ಎಂದುಕೊಂಡಿದ್ದೆವು. ಅದೇ ರೀತಿ ಪ್ರೀಮಿಯರ್ ಶೋನಲ್ಲಿ ಆ ಪ್ರತಿಕ್ರಿಯೆ ದೊರೆಯುತ್ತಿದೆ. ಇದೆ ಹತ್ತನೇ ತಾರೀಕು ಸಿನಿಮಾ ಬರುತ್ತಿದೆ ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ ಎಂದರು. 

ಜೊತೆಗೆ ಈ ಸಿನಿಮಗಾಗಿ ಹೆಚ್ಚು ಕಷ್ಟಪಟ್ಟಿದ್ದೇವೆ. ಚಾರ್ಲಿ ಅಭಿನಯಕ್ಕೆ ತುಂಬಾ ಟೇಕ್ ತೆಗೆದುಕೊಂಡಿದ್ದಾನೆ. ದಿನಕ್ಕೆ 40 ರಿಂದ 80 ಬಾರಿ ಟೇಕ್ ತೆಗೆದುಕೊಂಡು, ಒಂದೊಂದು ದಿನ ಕೇವಲ ಒಂದೇ ದೃಶ್ಯ ಚಿತ್ರೀಕರಣ ಮಾಡಲಾಗಿದೆ. ಹೆಚ್ಚು ಕಷ್ಟಪಟ್ಟಿದ್ದೇವೆ, ಸಿನಿಮಾ ಚೆನ್ನಾಗಿ ಮೂಡಿಬರುತ್ತದೆ ಎನ್ನುವ ನಂಬಿಕೆ ಇದೆ ಎಂದರು. ಕೊರೊನ ಸಂದರ್ಭದಲ್ಲಿ ಚಾರ್ಲಿಯನ್ನು ನಾನು ತುಂಬಾ ಮಿಸ್ ಮಾಡಿಕೊಂಡೆ, ಮೈಸೂರಿನಿಂದ ಕರೆತನ್ನಿ, ಅವನ ಜೊತೆ ಸಮಯ ಕಳೆಯಬೇಕು ಎಂದಿದ್ದೆ. ನಮ್ಮ ಮನೆಯಲ್ಲಿ ಒಂದು ನಾಯಿ ಇತ್ತು ಅದು ಪಮೋರಿಯನ್ ನಾಯಿ, ಅದನ್ನು ನಾವು ಮಿಕ್ಕಿ ಎಂದು ಕರೆಯುತ್ತಿದ್ದೆವು. ಅದು ಬರುಬರುತ್ತಾ ಎಲ್ಲರನ್ನೂ ಕಚ್ಚಲು ಆರಂಭಿಸಿತು, ಅದೊಂದೇ ಕಾರಣಕ್ಕೆ ಆ ನಾಯಿಗೆ ಇಂಜೆಕ್ಷನ್ ಕೊಟ್ಟು ವೈದ್ಯರು ಸಾಯಿಸಿದರು.

ಆ ಘಟನೆ ನನಗೆ ತುಂಬಾನೆ ನೋವು ತಂದಿತ್ತು ಎಂದರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ನೀವು ಕೂಡ 777 ಚಾರ್ಲಿ ಸಿನಿಮಾ ನೋಡುವುದಕ್ಕೆ ಹೆಚ್ಚು ಕಾತುರರಾಗಿದ್ದಿರ ಎಂದರೆ  ಮಾಹಿತಿ ಶೇರ್ ಮಾಡಿ ಧನ್ಯವಾದಗಳು..