Rakshith Shetty : ಚಾರ್ಲಿ 2 ಬರತ್ತಾ ಎಂಬ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ಉತ್ತರವೇನು ?

By Infoflick Correspondent

Updated:Tuesday, August 2, 2022, 09:05[IST]

Rakshith Shetty : ಚಾರ್ಲಿ 2 ಬರತ್ತಾ ಎಂಬ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ಉತ್ತರವೇನು ?

ಮನುಷ್ಯ ಮತ್ತು ನಾಯಿಯ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಚಾರ್ಲಿಯನ್ನು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಂಡ ಜನತೆ ಸಿನಿಮಾಕ್ಕೆ ಫಿದಾ ಆಗಿದ್ದಾರೆ. ಎಲ್ಲಾ ಕಡೆಯೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಭಾಷೆಯ ಅಭಿಮಾನಿಗಳು ಸಹ ಚಾರ್ಲಿಯನ್ನು ಹಾಡಿಹೊಗಳುತ್ತಿದ್ದಾರೆ. 

ಕನ್ನಡದ ಇನ್ನೊಂದು ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇತ್ತೀಚಿಗೆ ಹಲವಾರಿ ಸಿನಿಮಾಗಳು ಪಾರ್ಟ್2 ಬರುತ್ತಿದ್ದು ಚಾರ್ಲಿ ಕೊನೆದೃಶ್ಯ ನೋಡಿದ ಜನ ಚಾರ್ಲಿ2 ಬರುತ್ತದೆಯೇ ಎಂದು ಕೇಳುತ್ತಿದ್ದಾರೆ ಇದಕ್ಕೆ ರಕ್ಷಿತ್ ಉತ್ತರ ನೀಡಿದ್ದಾರೆ.

ಚಾರ್ಲಿಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಸದ್ಯಕ್ಕಂತು ಚಾರ್ಲಿ 2 ಇಲ್ಲ. ನನ್ನ ಸದ್ಯದ ಕಮೀಟ್ ಮೆಂಟ್ಸ್ ಮುಗಿಬೇಕು. ಚಾರ್ಲಿ ಕ್ಲೈಮ್ಯಾಕ್ಸ್ ಸೀನ್ ಒಂದೇ ಟೇಕ್ ನಲ್ಲಿ ಮಾಡಿದ್ದು. ಈ ಸಿನಿಮಾ ಹಾಗೂ ಅವನೇ ಶ್ರೀಮನ್ನಾನಾರಾಯಣ ಒಂದೇ ಟೈಮ್ ನಲ್ಲಿ ಮಾಡಿದ್ದು ಹೀಗಾಗಿ ಎರಡು ಕೂಡ ಸಾಕಷ್ಟು ಟೈಮ್ ತೆಗೆದುಕೊಳ್ತು.

ಇದು ಚಾರ್ಲಿಯ ಕೊನೆಯ ಸಿನಿಮಾ ಚಾರ್ಲಿ2 ಬಹುತೇಕವಾಗಿ ಇಲ್ಲ . ಚಾರ್ಲಿ ಸಿನಿಮಾಗೆ ಏನೇ ಅವಾರ್ಡ್ ಬಂದ್ರು ಅದು ಚಾರ್ಲಿಗೆ ಹೋಗಬೇಕು. ಯಾಕಂದ್ರೆ ಇದು ಅವಳ ಕೊನೆಯ ಸಿನಿಮಾ.
ಚಾರ್ಲಿ ಮಾಡಲು 4 ವರ್ಷ ಬೇಕಾಗಿಯಿತು. ಇದು ಧೀರ್ಘ ಪಯಣ . ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.