ರಾಮಾಚಾರಿ ಮನೆಯಲ್ಲಿ ಸಂಸ್ಕಾರ ಕಲಿಯುತ್ತಿರುವ ಚಾರು ಬಗ್ಗೆ ನಿಮಗೆಷ್ಟು ಗೊತ್ತು..?

By Infoflick Correspondent

Updated:Monday, April 25, 2022, 11:41[IST]

ರಾಮಾಚಾರಿ ಮನೆಯಲ್ಲಿ ಸಂಸ್ಕಾರ ಕಲಿಯುತ್ತಿರುವ ಚಾರು ಬಗ್ಗೆ ನಿಮಗೆಷ್ಟು ಗೊತ್ತು..?

ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಹೊಸ ಹೊಸ ಕಾರ್ಯಕ್ರಮಗಳು, ಧಾರಾವಾಹಿಗಳು ಎಲ್ಲವೂ ಚೆನ್ನಾಗಿ ಮೂಡಿ ಬರುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಏರೋದ್ರಲ್ಲಿ ಡೌಟೇ ಇಲ್ಲ. ವೀಕ್ಷಕರು ಮತ್ತೆ ಕಲರ್ಸ್ ಕನ್ನಡ ವಾಹಿನಿಯನ್ನು ನೋಡಲು ಶುರು ಮಾಡಿದ್ದಾರೆ. ಇನ್ನು ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಎಂಬ ಹೊಸ ಧಾರಾವಾಹಿ ಆರಂಭವಾಗಿ ಇನ್ನೂ ಕೇವಲ ಎರಡೇ ತಿಂಗಳು ಕಳೆದಿದೆ. ಅಷ್ಟರಲ್ಲಾಗಲೀ ಈ ಧಾರಾವಾಹಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ. 

ಸೋಶಿಯಲ್ ಮೀಡಿಯಾಗಳಲ್ಲಿ, ಮನೆ ಮನೆಗಳಲ್ಲೂ ರಾಮಾಚಾರಿ ಧಾರಾವಾಹಿಯದ್ದೇ ಸುದ್ದಿ. ಎಲ್ಲರೂ ಈ ಸೀರಿಯಲ್ ಬಗ್ಗೇನೆ ಮಾತನಾಡುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಕೆ.ಎಸ್.ರಾಮ್ ಜೀ ಅವರ ನಿರ್ಮಾಣ ಹಾಗೂ ನಿರ್ದೇಶನ ಎರಡೂ ಇದ್ದು, ಧಾರಾವಾಹಿಯ ಕತೆ ಕೂಡ ಅದ್ಬುತವಾಗಿದೆ. ಈ ಧಾರಾವಾಹಿಯಲ್ಲಿ ಭಾವನಾ ರಾಮಣ್ಣ, ಗುರುದತ್, ಶಂಕರ್ ಅಶ್ವಥ್, ಸಿರಿ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಇನ್ನು ಇವರೊಂದಿಗೆ ಹೊಸ ಪ್ರತಿಭೆಗಳು ಕೂಡ ಧಾರಾವಾಹಿಯಲ್ಲಿದ್ದಾರೆ. 

ರಾಮಾಚಾರಿ ಪಾತ್ರದ ವ್ಯಕ್ತಿಯ ಹೆಸರು ರಿತ್ವಿಕ್ ಕೃಪಾಕರ್ ನಿರ್ವಹಿಸುತ್ತಿದ್ದು, ಚಾರುಲತಾ ಪಾತ್ರಕ್ಕೆ ಮಂಗಳೂರಿನ ಬೆಡಗಿ ಬಣ್ಣ ಹಚ್ಚಿದ್ದಾಳೆ. ಕಂಪನಿಯನ್ನು ನಡೆಸುವ ಶಕ್ತಿಶಾಲಿ, ಸೊಕ್ಕಿನ ಮಹಿಳೆಯಾಗಿ ಭಾವನಾ ರಾಮಣ್ಣ ನಟಿಸುತ್ತಿದ್ದಾರೆ. ಗುರುದತ್ ಭಾವನಾ ಹಾಗೂ ಸಿರಿ ಪತಿಯಾಗಿ ಕಾಣಿಸಿಕೊಂಡಿದ್ದಾರೆ.  ಶಂಕರ್ ಅಶ್ವಥ್ ಅವರು ರಾಮಾಚಾರಿ ತಂದೆ ಪಾತ್ರವನ್ನು ಮಾಡುತ್ತಿದ್ದಾರೆ.    

ಇನ್ನು ನಾಯಕಿ ಚಾರುಲತಾ ಅವರ ನಿಜವಾದ ಹೆಸರು ಮೌನ ಗುಡ್ಡೆ ಮನೆ. ಇವರು ಮೂಲತಃ ಮಂಗಳೂರಿನವರು. ಇವರು ಮಾಡೆಲ್ ಆಗಿದ್ದರು. ಅಲ್ಲದೇ, ಹಲವು ಆಲ್ಬಂ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ, ತುಳು ಹಾಗೂ ಕನ್ನಡದ ಕೆಲ ಆಲ್ಬಂ ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ದಾರೆ. ತುಳುನಾಡು ಸ್ಪರ್ಧೆ ಮಿಸ್ ಟೀನ್ ನಲ್ಲಿ ಭಾಗವಹಿಸಿ ರನ್ನರ್ ಅಪ್ ಕೂಡ ಆಗಿದ್ದಾರೆ. ಇದು ಮೌನ ಅವರಿಗೆ ಮೊದಲನೆಯ ಧಾರಾವಾಹಿಯಾಗಿದೆ. ( video credit ; kannada entertainment )