Ramesh Aravind : ನಟ ರಮೇಶ್ ಅರವಿಂದ್ ಬರ್ತಡೆಗೆ ನೀವು ವಿಶ್ ಮಾಡಬೇಕೆ ? ಇಲ್ಲಿದೆ ಫೋನ್ ನಂಬರ್

By Infoflick Correspondent

Updated:Saturday, September 10, 2022, 11:20[IST]

Ramesh Aravind : ನಟ ರಮೇಶ್ ಅರವಿಂದ್ ಬರ್ತಡೆಗೆ ನೀವು ವಿಶ್ ಮಾಡಬೇಕೆ ? ಇಲ್ಲಿದೆ ಫೋನ್ ನಂಬರ್

ನಟ, ನಿರ್ದೇಶಕ, ನಿರೂಪಕ ರಮೇಶ್​ ಅರವಿಂದ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕನ್ನಡದ ಚಿತ್ರರಂಗದಲ್ಲಿ  ಎವರ್​ಗ್ರೀನ್ ಹೀರೋ ರಮೇಶ್‌ ಅರವಿಂದ್.‌ ಇವರ ಹುಟ್ಟು ಹಬ್ಬ ಸಮೀಪಿಸುತ್ತಿದೆ. ನೂರಾರು ಸಿನಿಮಾಗಳಲ್ಲಿ ನಟಿಸಿದ, ಪಾಸಿಟಿವ್​ ಮಾತುಗಳಿಂದ ಯುವಜನರನ್ನು ಸೆಳೆದವರು. ರಮೇಶ್​ ಅರವಿಂದ್​ ಎಂದರೆ ಎಲ್ಲ ವಯಸ್ಸಿನವರಿಗೂ ಅಚ್ಚುಮೆಚ್ಚುಇದೇ ಸೆಪ್ಟೆಂಬರ್​ 10ರಂದು ರಮೇಶ್​ ಅರವಿಂದ್​ ಅವರಗೆ ಜನ್ಮದಿನದ ಸಂಭ್ರಮ. ಈ ವಿಶೇಷ ದಿನದಂದು ಅವರಿಗೆ ಶುಭಾಶಯ ತಿಳಿಸಬೇಕು ಎಂಬ ಆಸೆ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ತಮ್ಮ ಹುಟ್ಟು ಹಬ್ಬಕ್ಕೆ ಫ್ಯಾನ್ಸ್‌ಗೆ ರಮೇಶ್‌ ಅರವಿಂದ್‌ ಸಿಹಿ ಸುದ್ದಿ ನೀಡಿದ್ದಾರೆ. ಸ್ವತಃ ರಮೇಶ್​ ಅರವಿಂದ್​ ಅವರೇ ತಮ್ಮ ನಂಬರ್‌ ಹಂಚಿಕೊಂಡಿದ್ದು, ಇದಕ್ಕೆ ಸಂದೇಶ ಕಳುಹಿಸಿ ವಿಶ್‌ ಮಾಡಿ ಎಂದಿದ್ದಾರೆ.    

ರಮೇಶ್ ಅವರಿಗೆ ವಿಶ್ ಮಾಡಲು ಹೀಗೆ ಮಾಡಿ ತಮ್ಮ ಹುಟ್ಟುಹಬ್ಬದಂದು ತಮಗೆ ವಿಶ್ ಮಾಡಲು ಇಚ್ಛಿಸುವ ಅಭಿಮಾನಿಗಳಿಗಾಗಿ ರಮೇಶ್ ಅರವಿಂದ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಪೋಸ್ಟ್ ಮಾಡಿ ನಂಬರ್ ಕೂಡಾ ನೀಡಿದ್ದಾರೆ.ಇದೀಗ ನೀವು ರಮೇಶ್‌ ಅರವಿಂದ್‌ ಅವರ ಅಭಿಮಾನಿಯಾಗಿದ್ದು, ಅವರ ಜನ್ಮದಿನಕ್ಕೆ ಶುಭಾಶಯ ತಿಳಿಸಲು ಬಯಸಿದರೆ - 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸಬಹುದು. ಈ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು.

ಸಂದೇಶ ಕಳುಹಿಸುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮತ್ತೊಂದು ವಿಶೇಷ ಅಂದ್ರೆ ಮೆಸೇಜ್​ ಮಾಡಿದ ಪ್ರತಿಯೊಬ್ಬರಿಗೂ ರಮೇಶ್​ ಅರವಿಂದ್​ ಅವರೇ ಸ್ವತಃ ರಿಪ್ಲೈ ನೀಡಲಿದ್ದಾರೆ. ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ರಮೇಶ್ ಅರವಿಂದ್ ಅವರೇ ಕರೆ ಮಾಡಿ ಮಾತನಾಡಲಿದ್ದಾರೆ.