ರಮೇಶ್ ಅರವಿಂದ್ ಅವರು ಹೇಳಿರುವ ಈ ಮಾತು ನೂರಕ್ಕೆ ನೂರರಷ್ಟು ಸತ್ಯ
Updated:Friday, June 24, 2022, 10:00[IST]

ಎವರ್ ಗ್ರೀನ್ ಹೀರೋ ನಟ ರಮೇಶ್ ಅರವಿಂದ್ ಅವರು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಏನಾದರೂ ಒಂದು ಕೆಲವನ್ನು ಮಾಡುತ್ತಲೇ ಇರುತ್ತಾರೆ. ಸಿನಿಮಾ ನಿರ್ದೇಶಿಸುವುದು, ಸಿನಿಮಾ ಕಥೆ ಬರೆಯುವುದು. ಬಿಡುವಿದ್ದಾಗ ಮಕ್ಕಳ ಜೊತೆಗೆ ಸಮಯ ಕಳೆಯುವುದು. ಮಕ್ಕಳಿಗೆ ಓದಿನಲ್ಲಿ ಸಹಾಯವನ್ನು ಕೂಡ ರಮೇಶ್ ಅವರು ಮಾಡುತ್ತಿರುತ್ತಾರೆ. ಈ ಬಗ್ಗೆ ಸ್ವತಃ ಅವರ ಮಕ್ಕಳೇ ಹಿಂದೊಮ್ಮೆ ಹೇಳಿಕೊಮಡಿದ್ದಾರೆ. ಈ ಮೂಲಕ ರಮೇಶ್ ಅವರು ಬೆಸ್ಟ್ ಆಕ್ಟರ್, ಡೈರೆಕ್ಟರ್ ಅಷ್ಟೇ ಅಲ್ಲ ಬೆಸ್ಟೆಸ್ಟ್ ಬೆಸ್ಟ್ ಅಪ್ಪ ಎಂದು ಕೂಡ ಎನಿಸಿಕೊಂಡಿದ್ದಾರೆ.
ಇನ್ನು ನಟನೆ, ನಿರ್ದೇಶನಕ್ಕಷ್ಟೇ ಮೀಸಲಿರದ ರಮೇಶ್ ಅವರು ಈ ಕಾಲಕ್ಕೆ ತಕ್ಕಂತೆ ನಿರೂಪಣೆಯನ್ನು ಕೂಡ ಮಾಡುತ್ತಾರೆ. ಪ್ರೀತಿಯಿಂದ ರಮೇಶ್, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಗಳನ್ನು ರಮೇಶ್ ಅವರು ನಡೆಸಿಕೊಟ್ಟಿದ್ದಾರೆ. ಸ್ಟಾರ್ ನಟ-ನಟಿಯರನ್ನು, ಸಾಧಕರನ್ನು ಕರೆಸಿ ಮಾತನಾಡಿಸುವ ರಮೇಶ್ ಅವರು, ಎಲ್ಲರ ಮನ ಮುಟ್ಟುವಂತೆ ಮಾತನಾಡುತ್ತಾರೆ. ಕಳೆದ ವರ್ಷವಷ್ಟೇ ಆರ್ಟ್ ಆಫ್ ಸಕ್ಸಸ್ ಎಂಬ ಪುಸ್ತಕವನ್ನು ಬರೆದು ಬಿಡುಗಡೆ ಮಾಡಿದ್ದರು.
ಈ ಪುಸ್ತಕದಲ್ಲಿ ಜೀವನದಲ್ಲಿ ಗುರಿ ತಲುಪಲು ಮನುಷ್ಯನಿಗೆ ಏನು ಮುಖ್ಯ. ಸಕ್ಸಸ್ ವ್ಯಕ್ತಿಗೆ ಯಾವೆಲ್ಲಾ ಚಾಲೆಂಜ್ ಗಳಿರುತ್ತವೆ ಅವನ್ನೆಲ್ಲಾ ಹೇಗೆ ಎದುರಿಸಬೇಕು ಎಂದು ಪಾಸಿಟಿವಿಯ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕೇವಲ 120 ರೂಪಾಯಿಯಷ್ಟೇ. ಇನ್ನು ಇದೀಗ ಹೆಲೋ ರಮೇಶ್ ಸ್ಪೀಕಿಂಗ್ ಎಂಬ ಟ್ಯಾಗ್ ನೊಂದಿಗೆ ರಮೇಶ್ ಅವರು ಇನ್ ಸ್ಟಾಗ್ರಾಂನಲ್ಲಿ ಯಾವುದಾದರೂ ಒಂದು ವಿಚಾರದ ಬಗ್ಗೆ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ಸಣ್ಣ ಪುಟ್ಟ ವಿಚಾರಗಳಿಗೆ ಕಿರಿಕಿರಿ ಮಾಡಿಕೋಳ್ಳುವ ಬಗ್ಗೆ ಅದ್ಭುತವಾಗಿ ಮಾತನಾಡಿದ್ದಾರೆ. ಎಲ್ಲಾವುದಕ್ಕೂ ಕಿರಿಕಿರಿ ಮಾಡಿಕೊಂಡರೆ, ಪ್ರಧಾನಿಗಳು, ರಾಷ್ಟ್ರಪತಿಗಳು ದೊಡ್ಡ ದೊಡ್ಡ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ, ಯುವಕರಿಗೆ ಕಿವಿ ಮಾತು ಹೇಳಿದ್ದಾರೆ.